Sunday, 11th May 2025

ವೃದ್ಧಾಪ್ಯ ಸಾಂಗತ್ಯದ ಸುಂದರ ಚಿತ್ರಕಥೆ

*ಖುಷಿ

ವ್ಯಕ್ತಿಗಳಿಗೆ ವಯಸ್ಸಾಾಗಬಹುದು, ಆದರೆ ದಾಂಪತ್ಯಕ್ಕೆೆ ವಯಸಾಗಬಾರದು. ದಾಂಪತ್ಯ ಸದಾ ಲವಲವಿಕೆಯಿಂದ ಕೂಡಿರಬೇಕು. ಅದು ಹರಯದಲ್ಲಾಾದರೂ ಅಷ್ಟೇ, ವೃದ್ಧಾಾಪ್ಯದಲ್ಲಾಾದರೂ ಅಷ್ಟೇ. ಇಂತಹ ಭಾವನೆಯನ್ನು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರು ಮಾತ್ರವೇ ಇಂತಹ ಸುಂದರವಾದ ಜೀವನವನ್ನು ಪಡೆಯುವಲ್ಲಿ ಯಶಸ್ವಿಿಯಾಗುತ್ತಾರೆ.
ಇಂತಹ ವೃದ್ಧಾಾಪ್ಯ ಸಾಂಗತ್ಯದ ಮಹತ್ವವನ್ನು ಸಾರುವ ಸುಂದರವಾದ ಕತೆ ‘ಮಿಥುನ’. ತೆಲುಗಿನ ಜನಪ್ರಿಿಯ ಕಥೆಯಾಗಿರುವ ಮಿಥುನ, ಅನೇಕರ ಒತ್ತಾಾಯದ ಮೇರೆಗೆ ಒಂದೇ ಪತ್ರಿಕೆಯಲ್ಲಿ ಎರಡು ಬಾರಿ ಪ್ರಕಟವಾಗಿತ್ತು. ಜನಸಾಮಾನ್ಯರು ಮಾತಿನ ನಡುವೆ ಈ ಕಥೆಯನ್ನು ಉದಾಹರಿಸುವಷ್ಟರ ಮಟ್ಟಿಗೆ ಈ ಕತೆ ಜನಪ್ರಿಯಗೊಂಡಿದೆ.

ಈ ಕಥೆ ವೃದ್ಧಾಾಪ್ಯದ ಸಾಂಗತ್ಯವನ್ನು ಬರವಣಿಗೆಯಲ್ಲಿ ಸೆರೆಹಿಡಿದಿರುವ ಸುಂದರ ಚಿತ್ರಕಥೆ. ಈ ಕಥೆಯನ್ನು ಆಂಧ್ರದ ಅನೇಕ ಷಷ್ಟಿಿಪೂರ್ತಿ ಸಮಾರಂಭಗಳಲ್ಲಿಯೂ ಓದಿಸುತ್ತಾಾರಂತೆ. ಈ ಕತೆ ಎಷ್ಟೊೊಂದು ಜನಪ್ರಿಿಯತೆ ಗಳಿಸಿರಬೇಲ್ಲವೆ? ಇಷ್ಟೊೊಂದು ಜನಪ್ರಿಿಯತೆ ಗಳಿಸಿಕೊಂಡಿರುವ ಈ ಕತೆ ತೆಲುಗಿನಲ್ಲಿ ‘ಮಿಥುನಂ’ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿಯೂ ಯಶಸ್ವಿಿಗೊಂಡಿದೆ.

‘ಮಿಥುನಂ’ ಕಥಾ ಪುಸ್ತಕ ತೆಲುಗಿನಲ್ಲಿ ಮೂರು ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. ವೃದ್ಧಾಾಪ್ಯದ ಸಾಂಗತ್ಯವನ್ನು ಕತೆಯಲ್ಲಿ ಚಿತ್ರಿಿಸಿದ ಲೇಖಕ ತೆಲುಗಿನ ಶ್ರೀರಮಣ. ಇವರು 1952ರಲ್ಲಿ ಸೀಮಾಂಧ್ರದ ತೆನಾಲಿಯಲ್ಲಿ ಜನಿಸಿದರು. ತೆಲುಗಿನ ‘ಆಂಧ್ರಜ್ಯೋೋತಿ’ ಪತ್ರಿಿಕೆ ಬಳಗದ ನವ್ಯ ವಾರಪತ್ರಿಿಕೆಯಲ್ಲಿ ಬಹಳಷ್ಟು ವರ್ಷಗಳ ಕಾಲ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಅಂಕಣಕಾರರಾಗಿ, ಸಿನಿಮಾ ಕ್ಷೇತ್ರದ ಬರಹಗಾರರಾಗಿ ಸಹ ಖ್ಯಾಾತಿ ಪಡೆದಿದ್ದಾಾರೆ.

ಇಂತಹ ಉತ್ತಮ ಕತೆಗಾರನ ರಚನೆಯಲ್ಲಿ ಮೂಡಿಬಂದಿರುವ ‘ಮಿಥುನ’ ಕಥಾಸಂಕಲನವನ್ನು ಕನ್ನಡಕ್ಕೆೆ ಅನುವಾದಿಸಿದ್ದಾಾರೆ ಸಾಹಿತಿ ವಸುಧೇಂದ್ರ. ಈ ಮೂಲಕ ಕನ್ನಡಿಗರಿಗೆ ಮಿಥುನದಂತಹ ಉತ್ತಮ ಕೃತಿಯೊಂದು ಕನ್ನಡಿಗರಿಗೆ ಪರಿಚಿತಗೊಂಡಿದೆ. ಈ ಕೃತಿ ಒಟ್ಟು ಏಳು ಕತೆಗಳನ್ನು ಒಳಗೊಂಡಿದೆ. ಈ ಪುಸ್ತಕವನ್ನು ಬೆಂಗಳೂರಿನ ಛಂದ ಪುಸ್ತಕ ಪ್ರಕಟಿಸಿದೆ. ಕೃತಿಯಲ್ಲಿ ಮಿಥುನ, ಬಂಗಾರದ ಕಡಗ, ಮದುವೆ, ಧನಲಕ್ಷ್ಮಿಿ, ಸೋಡಾ ಗೋಲಿ, ಅಂತಿಮ ಚರಣ, ಸಿಂಹಾಚಲಂ ಸಂಪಿಗೆ ಕತೆಗಳು ಸೇರಿವೆ.

Leave a Reply

Your email address will not be published. Required fields are marked *