Monday, 12th May 2025

ಸ್ಟಾರ್ ಟ್ರಾವೆಲ್

ರತ್ನಮಂಜರಿ ಚಿತ್ರದ ಮೂಲಕ ಸ್ಯಾಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟ ರಾಜ್ ಚರಣೆ ಬಳಿಕ, ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಸೈ ಎಸನಿಸಿಕೊಂಡರು. ಅದೇ ರಾಜ್ ಚರಣ್ ಇಂದಿನ ಸ್ಟಾಾರ್ ಟ್ರಾಾವೆಲ್‌ನಲ್ಲಿ ನಮ್ಮೊೊಂದಿಗೆ ಮಾತನಾಡಿದ್ದಾರೆ.

ನಮಗೆ ಇಷ್ಟವಾದ ಪ್ರವಾಸಿ ತಾಣ ಯಾವುದು ?
ರಾಜ್ ಚರಣ್ : ನನಗೆ ಪ್ರಕೃತಿಯ ಸಿರಿ ಅಚ್ಚುಮೆಚ್ಚು. ಹಾಗಾಗಿ ನನಗೆ ಲಡಾಖ್ ಅಚ್ಚುಮೆಚ್ಚು. ಅಲ್ಲಿನ ನಿಸರ್ಗ ರಮಣೀಯ ತಾಣ, ಮಂಜುಕವಿದ ವಾತಾವರಣದಲ್ಲಿ ಕಾಣುವ ಗಿರಿ ಶಿಖರಗಳ ವಿಹಂಗಮ ನೋಟ , ವಾವ್ ,,, ನೋಡಲು ಆನಂದವೂ ಆನಂದ. ಅದರ ಜತೆಗೆ ಮ್ಯಾಾಗ್ನೆೆಟಿಕ್ ಪಾಯಿಂಟ್ ಪ್ರದೇಶವೂ ವಿಸ್ಮಯ ಮೂಡಿಸುತ್ತದೆ. ಪ್ರಕೃತ್ತಿಿಯ ಶಕ್ತಿಿ ಅಲ್ಲಿ ನಮಗೆ ವ್ಯಕ್ತವಾಗುತ್ತದೆ.

ಅಲ್ಲಿನ ಯಾವ ಆಹಾರ ಪದಾರ್ಥ ನಿಮಗೆ ಇಷ್ಟ ?
ರಾಜ್ ಚರಣ್ : ನನಗೆ ಅಲ್ಲಿನ ಸ್ಥಳೀಯ ಆಹಾರಗಳ ಇಷ್ಟ. ಅಲ್ಲಿ ಸಿಗುವ ಆಲೂ ಪರೋಟ ಆಹಾ… ಸವಿಯಲು ರುಚಿಕಟ್ಟಾಾಗಿರತ್ತದೆ. ಆ ತಟ್ಟಣೆಯ ವಾತಾವಣದಲ್ಲಿ ಮಂಜು ಹನಿಗಳ ನಡುವೆ ಆಲೂ ಪರೋಟ ಸೇವನೆ ಅದ್ಭುತ ಕ್ಷಣ ಎನಿಸುತ್ತದೆ.

ಲಡಾಖ್‌ನಲ್ಲಿ ಯಾರೊಂದಿಗೆ ಕಳೆಯಲು ಬಯಸುತ್ತೀರ ?
ರಾಜ್ ಚರಣ್ : ಲಡಾಕ್ ನಲ್ಲಿ ಸ್ನೇಹಿತರೊಂದಿಗೆ ಕಳೆಯುವುದು ಅಚ್ಚುಮೆಚ್ಚು. ಗೆಳೆಯರ ಬಳದೊಂದಿಗೆ ಸೇರಿ ಲಡಾಕನ್ನು ಒಂದು ಸುತ್ತು ಬಂದರೆ ಆಹಾ ಸ್ವರ್ಗವೇ ಧರೆಗಿಳಿದ ಬಾಸವಾಗುತ್ತದೆ.

ಯಾವ ಸಮಯದಲ್ಲಿ ಲಡಾಕ್ ಗೆ ಭೇಟಿ ನೀಡಿದರೆ ?
ರಾಜ್ ಚರಣ್ : ಲಡಾಕ್‌ಗೆ ಬೇಸಿಗೆಯ ಸಮಯದಲ್ಲಿ ಭೇಟಿ ನೀಟಿದರೆ ಉತ್ತಮ ಯಾಕೆಂದರೆ ಆ ವೇಳೆಯಲ್ಲಿ ಹಿತವಾದ ವಾತಾವರಣವಿರುತ್ತದೆ. ಗಿರಿ ಶೃಂಗಗಳು ಹಿಮವೃತವಾಗಿ ಶ್ವೇತಸುಂದರಿಯಂತೆ ಕಂಗೊಳಿಸುತ್ತವೆ. ಅದನ್ನು ನೋಡುವುದೇ ಚೆಂದ.

ಪ್ರವಾಸದಿಂದ ಏನೆಲ್ಲಾಾ ಕಲಿಯಬಹುದು ?
ರಾಜ್‌ಚರಣ್ : ದೇಶಸುತ್ತ ಇಲ್ಲ ಕೋಶ ಒದು ಎಂಬ ಮಾತಿದೆ ಅಂತೆಯೇ ಪ್ರವಾಸದಿಂದ ಹಲವು ವಿಚಾರಗಳನ್ನು ಕಲಯಬಹುದು, ವೈವಿದ್ಯಮಯ ಜಗತ್ತನ್ನು ಕಣ್ತುಂಬಿಕೊಳ್ಳಬಹದು.

Leave a Reply

Your email address will not be published. Required fields are marked *