Wednesday, 14th May 2025

ಹಸಿರು ಕಾಡಿನ ಆಟ ಹನುಮಗಿರಿಯ ನೋಟ

*ಸ್ನೇಹಾ ಗೌಡ, ಉಜಿರೆ

ಸುತ್ತಲೂ ಕಾಡು, ಹಸಿರು ತುಂಬಿದ ಬೆಟ್ಟಗಳು, ಹುಲ್ಲುಹಾಸಿನ ಮೈದಾನ. ನೀಲಾಕಾಶ. ಸಹ್ಯಾಾದ್ರಿಿ ಬೆಟ್ಟಗಳ ಸಾಲುಗಳ ನಡುವೆ ತಲೆ ಎತ್ತಿಿರುವ ಪುಟ್ಟ ಬೆಟ್ಟದಲ್ಲಿರುವ ಹನುಮಗಿರಿಗೆ ಭೇಟಿ ನೀಡುವುದೆಂದರೆ, ಇತ್ತ ಭಕ್ತಿಿಯ ಸಿಂಚನ, ಅತ್ತ ಪ್ರಕೃತಿಯ ಒಡನಾಟ. ದಕ್ಷಿಿಣ ಕನ್ನಡದ ಪುತ್ತೂರಿನಲ್ಲಿರುವ ಪಡುವನ್ನೂರು ಮತ್ತು ನೆಟ್ಟನಿಗೆ ಗ್ರಾಾಮಗಳ ಗಡಿ ಪ್ರದೇಶದಲ್ಲಿರುವ ‘ಹನುಮಗಿರಿ’ಯು ಪಂಚಮುಖಿ ಆಂಜನೇಯ ಕ್ಷೇತ್ರ.

ಪುತ್ತೂರಿನ ಈಶ್ವರಮಂಗಲ ಪೇಟೆಯ ಪ್ರವೇಶ ದ್ವಾಾರವನ್ನು ದಾಟಿ ಹತ್ತಾಾರು ಹೆಜ್ಜೆೆ ಮುಂದಿಟ್ಟಾಾಗ ಪ್ರವೇಶ ಮಂಟಪವು ನಮ್ಮನ್ನು ಸ್ವಾಾಗತಿಸುತ್ತದೆ. ಹನುಮಗಿರಿಯಲ್ಲಿ ನಮಗೆ ಮೊದಲಿಗೆ ಕಾಣಸಿಗುವುದು ‘ರಾಮಾಯಾಣ ಥೀಮ್ ಪಾರ್ಕ್’. ಇದರ ಎಡಭಾಗದಲ್ಲಿ ರಾಮಾಯಣದ ಕಥಾನಕಗಳನ್ನು ಶಿಲೆಗಳಲ್ಲಿ ಕೆತ್ತಿಿ ಫಲಕಗಳ ಮೂಲಕ ಗೋಡೆಗಳಿಗೆ ತಾಗಿಸಿ ವಿವರಿಸಿದ್ದಾಾರೆ. ಈ ಪಾರ್ಕ್‌ನಲ್ಲಿ ಸಂಪೂರ್ಣ ರಾಮಾಯಾಣದ ಕಥೆಯನ್ನು ನೋಡಲು ಸಾಧ್ಯ. ಅಲ್ಲಿನ ಸುಂದರ ಉದ್ಯಾಾವನದ ಮಧ್ಯೆೆ ನಡೆದಾಡುವಾಗ ಕ್ಷೇತ್ರದ ಪ್ರಧಾನ ಆಕರ್ಷಣೆಯಾದ ಆಂಜನೇಯನ ಮಂದಿರವು ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಭಕ್ತರ ವಿಶ್ರಾಾಂತಿಗಾಗಿ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನರಸಿಂಹ ಮಂಟಪವಿದೆ.

ಪಕ್ಕದಲ್ಲಿರುವ ಗರುಡ ಮಂಟಪವನ್ನು ದಾಟಿ ಹೋದಾಗ ಸಂಜೀವಿನಿ ದಿವ್ಯೌೌಷಧ ಸಸ್ಯಗಳ ವನ ಹಾಗೂ ಹನುಮಾನ್ ಮಾನಸೋದ್ಯಾಾನವಿದೆ. ಶಿಲೆಗಳಲ್ಲಿ ಕೆತ್ತಲಾಗಿರುವ ಕಥಾನಕಗಳು ಅಲ್ಲಲ್ಲಿ ಕಾಣಸಿಗುವುದು ಇಲ್ಲಿಯ ವಿಶೇಷತೆ. ಇದು ಪ್ರವಾಸಿಗರಿಗೆ ತೇತ್ರಾಾಯುಗದ ನೆನಪನ್ನು ಮರುಕಳಿಸುತ್ತದೆ. ಸಂಜೀವಿನಿಯಂತಹ ಜೀವ ರಕ್ಷಕ ಗಿಡಮೂಲಿಕೆಗಳನ್ನು, ಔಷಧೀಯ ಸಸ್ಯಗಳನ್ನು ಪೋಷಿಸಿ ಪರಿಚಯಿಸುವ ಮತ್ತು ರಕ್ಷಿಸುವ ಉದ್ದೇಶದಿಂದ ಇಲ್ಲಿ ಸಂಜೀವಿನಿ ಮಾನಸೋದ್ಯಾಾನ ನಿರ್ಮಿಸಲಾಗಿದೆ. 300ಕ್ಕೂ ಹೆಚ್ಚು ಬಗೆಯ ಗಿಡಗಳನ್ನು ಇಲ್ಲಿ ಬೆಳೆಸಲಾಗಿದ್ದು, ನೋಡಲು ವಿಸ್ಮಯ ಮೂಡಿಸುವುದರ ಜತೆ, ಮಕ್ಕಳಿಗೆ ಇದು ಜ್ಞಾಾನದ ಸಿಂಚನವನ್ನೂ ಮಾಡಿಸುತ್ತದೆ. ವಿವಿಧ ಗಿಡಗಳ ಉಪಯೋಗ, ಅವುಗಳು ಬೆಳೆಯುವ ರೀತಿಯನ್ನು ನೋಡುವುದೇ ಒಂದು ವಿಶೇಷ ಅನುಭವ.

ಇಲ್ಲಿನ ಆಂಜನೇಯ ವಿಗ್ರಹವು 11 ಅಡಿ ಎತ್ತರವಿದ್ದು ಕಾರ್ಕಳದ ಕೃಷ್ಣಶಿಲೆಯಿಂದ ರೂಪಗೊಂಡ ಏಕಶಿಲಾ ವಿಗ್ರಹವಾಗಿದೆ. ದಕ್ಷಿಣಕ್ಕೆೆ ನರಸಿಂಹ, ಉತ್ತರಕ್ಕೆೆ ವರಾಹ, ಊರ್ಧ್ವಮುಖಕ್ಕೆೆ ಹಯಗ್ರೀವ, ಪಶ್ಚಿಿಮಕ್ಕೆೆ ಗರುಡ ಇರುವ ಪಂಚಮುಖಿ ಆಂಜನೇಯ ವಿಗ್ರಹವು ಶನಿದೋಷ ನಿವಾರಣೆಗೆ ಪ್ರಸಿದ್ಧಿಿಯನ್ನು ಪಡೆದಿದೆ. ಇಲ್ಲಿ ದೇವರಿಗೆ ಗರ್ಭಗುಡಿ ಇಲ್ಲ. ಬೆಳಿಗ್ಗೆೆಯಿಂದ ಸಂಜೆಯ ತನಕ ಪೂಜೆ, ಪುನಸ್ಕಾಾರಗಳು ನಡೆಯುತ್ತಲೇ ಇರುವುದು ಇಲ್ಲಿಯ ವಿಶೇಷತೆ.

ಗೋವುಗಳ ಸಂರಕ್ಷಣೆಗಾಗಿ ಗೋಶಾಲೆ, ಅತಿಥಿ ಗೃಹ, ಮಕ್ಕಳ ಅನಾಥಶ್ರಮ, ಧ್ಯಾಾನಮಂದಿರ, ಸಭಾಭವನವಿದೆ. ಪ್ರವಾಸಿಗರಿಗೆ, ಭಕ್ತರಿಗೆ ಇಲ್ಲಿ ದಿನನಿತ್ಯ ಅನ್ನದಾನ ನಡೆಯುತ್ತೆೆ. 2017ರಲ್ಲಿ 22 ಅಡಿ ಎತ್ತರದ ರಾಮನ ಮೂರ್ತಿಯನ್ನು ಇದೇ ಆವರಣದಲ್ಲಿ ಪ್ರತಿಷ್ಟಾಾಪಿಸಿದ್ದಾಾರೆ.
ಪ್ರಕೃತಿ ಮಾತೆಯ ಮಡಿಲಲ್ಲಿ ಮಲಗಿರುವ ಅಪರೂಪದ ದೇಗುಲ ಹನುಮಗಿರಿ. ರಾಮಾಯಣ ಮಹಾಕಾವ್ಯದ ಕಥನದ ಶಿಲ್ಪಗಳನ್ನು ನೋಡುವುದರ ಜತೆಯಲ್ಲೇ, ವಿವಿಧ ರೀತಿಯ ಗಿಡಗಳು, ಸುತ್ತಲಿನ ಹಸಿರಿನ ಸಿರಿಯನ್ನು ನೋಡುವ ಅವಕಾಶ ಹನುಮಗಿರಿಯಲ್ಲಿ ದೊರೆಯುತ್ತದೆ.

Leave a Reply

Your email address will not be published. Required fields are marked *