Wednesday, 14th May 2025

ವಿಕ್ರಂ ಎಂಟ್ರಿಗೆ ವೇದಿಕೆ ಸಜ್ಜು

ಪ್ರಶಾಂತ್‌ ಟಿ.ಆರ್‌.

ಡೈನಾಮಿಕ್ ಪ್ರಿನ್ಸ್‌ ಪ್ರಜ್ವಲ್ ದೇವರಾಜ್ ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯಾಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ.

‘ಇನ್ಸ್‌‌ಪೆಕ್ಟರ್ ವಿಕ್ರಂ’ ಅವತಾರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ನಡುವೆ ಒಂದಷ್ಟು ತುಂಟತನ ತೋರಿಸುತ್ತಾ ಎಲ್ಲರನ್ನೂ ನಗಿಸಲಿದ್ದಾರೆ. ಕಳೆದ ವರ್ಷವೇ ಚಿತ್ರೀಕರಣ ಪೂರ್ಣಗೊಂಡಿತ್ತು. ಚಿತ್ರ ತೆರೆಗೆ ತರಲು ಕರೋನಾ ತೊಡಕ್ಕಾಗಿತ್ತು. ಅಂತು ಈಗ ವಿಕ್ರಮನ ಆಗಮನಕ್ಕೆ ವೇದಿಕೆ ಸಜ್ಜಾಗಿದೆ. ಫೆಬ್ರವರಿ 5 ಕ್ಕೆೆ ಅದ್ಧೂರಿಯಾಗಿ ತೆರೆಗೆ ಬರಲಿದೆ. ಚಿತ್ರತಂಡ ಪಜ್ವಲ್ ಹುಟ್ಟುಹಬ್ಬದ ಪ್ರಯುಕ್ತ, ಈ ಹಿಂದೆಯೇ ಚಿತ್ರದ ಟೀಸರ್ ಒಂದನ್ನು ಬಿಡುಗಡೆ ಮಾಡಿತ್ತು. ಟೀಸರ್ ವೀಕ್ಷಿಸಿದ ಅಭಿಮಾನಿಗಳು ಸಂತಸದಲ್ಲಿ ತೇಲಿದ್ದರು.

ಹೀಗಿರುವಾಗಲೇ ಗಣರಾಜ್ಯೋತ್ಸವ ಪ್ರಯುಕ್ತ ಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಿದ್ದು, ಇದರಲ್ಲಿ ಲವ್ವರ್ ಬಾಯ್ ಆಗಿ ಪ್ರಜ್ವಲ್ ಗಮನ ಸೆಳೆಯುತ್ತಾರೆ. ತನ್ನ ತಂಟೆಗೆ ಬಂದ ಎದುರಾಳಿಗೆ ಏಟಿನ ಬಿಸಿಮುಟ್ಟಿಸುತ್ತಾ, ಹುಡುಗಿಯ ಹಿಂದೆ ಬಿದ್ದು, ಕಲರ್ ಫುಲ್ ಕಹಾನಿಯ ಮೂಲಕ ಕಂಗೊಳಿಸುತ್ತಾರೆ. ನಾಯಕಿ ಭಾವನಾ ಮೆನನ್ ಮೋಹಕ ನಗು ಬೀರುತ್ತಾ ಟೀಸರ್ ಉದ್ದಕ್ಕೂ ಗಮನ ಸೆಳೆಯುತ್ತಾರೆ. ಸಿಂಪಲ್ ಹುಡುಗಿಯಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ.

ಲಕ್ಷಾಂತರ ವೀಕ್ಷಣೆ ಕಂಡಿರುವ ಟೀಸರ್, ಚಿತ್ರದ ಬಗ್ಗೆ ಮತ್ತಷ್ಟು ಕಾತರತೆ ಹೆಚ್ಚಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ‘ನನ್ನವಳೇ…’ ಹಾಡು ಹತ್ತು ಮಿಲಿಯನ್ ವೀಕ್ಷಣೆ ಕಂಡಿದ್ದು, ಸಂಗೀತ ಪ್ರಿಯರು ಹಾಡನ್ನು ಮೆಚ್ಚಿದ್ದಾರೆ. ಚಿತ್ರದ ಎಲ್ಲಾ ಹಾಡುಗಳು ಮಧುರವಾಗಿ ಮೂಡಿಬಂದಿವೆ. ಅವುಗಳನ್ನು ಚಿತ್ರದಲ್ಲಿಯೇ ನೋಡಬೇಕು ಎನ್ನುತ್ತಾರೆ ನಿರ್ದೇಶಕ ನರಸಿಂಹ.

ಸೆಂಚೂರಿ ಸ್ಟಾರ್ ಸಾಥ್
‘ಇನ್ಸ್’ಪೆಕ್ಟರ್ ವಿಕ್ರಂ’ ಅಂದಾಕ್ಷಣ ಮೂರು ದಶಕಗಳ ಹಿಂದೆಯೇ ತೆರೆಕಂಡ ಶಿವಣ್ಣ ಅಭಿನಯದ ಚಿತ್ರ ನೆನಪಾಗುತ್ತದೆ. ಹಾಗಂತ, ಆ ಚಿತ್ರದ ಕಥೆಗೂ, ಸದ್ಯ ಬಿಡುಗಡೆಯಾಗಲಿರುವ ಚಿತ್ರದ ಕಥೆಗೂ ಸಂಬಂಧವಿಲ್ಲವಂತೆ. ಈ ಹಿಂದೆ ಶಿವಣ್ಣ ನಟಿಸಿದ್ದ ‘ಇನ್ಸ್‌‌ಪೆಕ್ಟರ್ ವಿಕ್ರಂ’ ನೆನಪಾಗುತ್ತದೆ. ಈ ಚಿತ್ರವೂ ಕೂಡ ಚೆನ್ನಾಗಿ ಮೂಡಿಬಂದಿದೆ. ತುಂಟಾಟದ ಜತೆಗೆ ಹಾಸ್ಯವೂ ಚಿತ್ರದಲ್ಲಿದೆ. ಚಿತ್ರವನ್ನು ಪ್ರೇಕ್ಷಕರು ಖಂಡಿತ ಮೆಚ್ಚುತ್ತಾರೆ ಎಂಬ ನಿರೀಕ್ಷೆಯೂ ಪ್ರಜ್ವಲ್ ಅವರಲ್ಲಿದೆ.

ವಿಶೇಷ ಎಂದರೆ ಆ ಚಿತ್ರದ ಮುಂದುರಿದ ಭಾಗ ಎನ್ನುವ ಭಾವ ಪ್ರೇಕ್ಷಕರಲ್ಲಿ ಮೂಡಿಸುವ ನಿಟ್ಟಿನಲ್ಲಿ ಚಿತ್ರಕ್ಕೆ ಶಿವಣ್ಣ ದನಿ ನೀಡಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ದನಿ ಕೇಳಬಹು ದಂತೆ.

ವಿಶೇಷ ಪಾತ್ರದಲ್ಲಿ ದಚ್ಚು
ಈ ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಆ ಪಾತ್ರ ಯಾವುದು ಎಂಬ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲ. ಅವರೊಂದಿಗೆ ನಟಿಸಿರುವುದು ನನಗೆ ಸಂತಸ ತಂದಿದೆ. ಅದೊಂದು ಅಪರೂಪದ ಅನುಭವ ಅವರೊಂದಿಗೆ ನಟಿಸಿದ ಹೆಮ್ಮೆ ನನಗಿದೆ. ಅವರ ಪಾತ್ರ ಏನು ಎಂಬುದನ್ನು ಈಗಲೇ ಬಹಿರಂಗಗೊಳಿಸುವುದಿಲ್ಲ. ಅದನ್ನು ತೆರೆಯಲ್ಲಿ ನೀವು ನೋಡಿದರೆ ಚೆಂದ ಎಂದು ಚಿತ್ರದ ಬಗ್ಗೆೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಾರೆ

ಪ್ರಜ್ವಲ್. ಇನ್ನು ನಟ ರಘುಮುಖರ್ಜಿ ಕೂಡ ಚಿತ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರ ಪಾತ್ರದ ಬಗ್ಗೆ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿಲ್ಲ. ನಟ ಧರ್ಮಣ್ಣ, ಇಲ್ಲಿ ಪೊಲೀಸ್ ಪೇದೆಯಾಗಿ ಎಲ್ಲರನ್ನು ನಗಿಸಲಿದ್ದಾರೆ. ಭಾನಾ ಮೆನನ್ ಮೊದಲ
ಬಾರಿಗೆ ಪ್ರಜ್ವಲ್‌ಗೆ ಜತೆಯಾಗಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *