ಶಾರದಾಂಭ .ವಿ.ಕೆ.
ರೊಮಾನಿಯಾದಲ್ಲಿ ಮುಂದಿನ ಅಕ್ಟೋಬರ್‌ನಲ್ಲಿ ನಡೆಯುವ ಅಲ್ಟ್ರಾ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿ ರುವ ಅಶ್ವಿನಿಯವರು ಕರ್ನಾಟಕದ ಹೆಮ್ಮೆಯ ಓಟಗಾತಿ.
ಮ್ಯಾರಥಾನ್ ಓಟದ ದೂರವನ್ನು ನೆನೆಸಿದರೆ ಮೈ ಜುಂ ಎನಿಸುತ್ತದೆ. ಅದೇ ಪ್ರಕಾರದ ‘ಅಲ್ಟ್ರಾ ಮ್ಯಾರಥಾನ್ ರನ್’ ನಲ್ಲಿ ಹೆಮ್ಮೆ ತರುವಂತಹ ಸಾಧನೆ ಮಾಡಿದ ಪ್ರತಿಭೆಯೊಂದು ಕರ್ನಾಟಕದಲ್ಲಿದೆ ಎಂದರೆ ಕನ್ನಡಿಗರಿ ಗಷ್ಟೇ ಅಲ್ಲದೇ ಇಡೀ ಭಾರತವೇ ಸಂಭ್ರಮ ಪಡುವಂತಹ ಸಂಗತಿ. ಅಂತಹ ಅದ್ಭುತ ಪ್ರತಿಭೆ ಅಶ್ವಿನಿ ಜಿ.ಭಟ್.
ಸಾಗರ ಮೂಲದ ಅಶ್ವಿನಿ ಬೆಳೆದದ್ದು, ಶಾಲಾಕಾಲೇಜು ಎಲ್ಲವೂ ಬೆಂಗಳೂರಿನಲ್ಲಿ. ಓದು ವಾಗ ಹಾಕಿ, ಓಟದ ಸ್ಪರ್ಧೆ, ಕೋಕೋ ಆಡುತ್ತಿದ್ದರು. ಎಂಜಿನಿಯರಿಂಗ್ ಓದಿಗೆ ಪ್ರಾರಂಭಿಸಿ ದಾಗ ಕ್ರೀಡೆಗಳಿಗೆ ತಡೆ ಬಿತ್ತು. ಮದುವೆಯ ನಂತರ ತಮ್ಮ ಕ್ರೀಡಾ ಚಟುವಟಿಕೆಗಳಿಗೆ ಗಮನ ಕೊಟ್ಟು ಮ್ಯಾರಥಾನ್ ಓಟಕ್ಕೆ ಹೆಚ್ಚಿನ ಆದ್ಯತೆ ನೀಡಿ ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ.
ಆರು ವರ್ಷಗಳ ಹಿಂದೆ 10 ಕಿ.ಮೀ. ಓಡಲು ಆರಂಭಿಸಿದ ಅಶ್ವಿನಿ ಇದೀಗ ಭಾರತವನ್ನು ಪ್ರತಿನಿಧಿಸುವಷ್ಟು ಅರ್ಹತೆ ಪಡೆದಿರು ವುದು ಕನ್ನಡನಾಡಿನ ಎಲ್ಲರಿಗೂ ಹೆಮ್ಮೆಯ ವಿಷಯ. 2021ರ ಅಕ್ಟೋಬರ್‌ನಲ್ಲಿ 24 ಗಂಟೆಯ ವಲ್ಡರ್ ಚಾಂಪಿಯನ್ ಶಿಪ್‌ಗಾಗಿ ರೊಮೇನಿಯಾದಲ್ಲಿ ನಡೆಯಲಿರುವ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆಗೆ ಭಾರತದಿಂದ ಅರ್ಹತೆ ಪಡೆದಿರುವ ಐದು ಮಂದಿ ಮಹಿಳೆಯರಲ್ಲಿ ಕರ್ನಾಟಕದಿಂದ ಅಶ್ವಿನಿ ಆಯ್ಕೆ ಯಾಗಿದ್ದಾರೆ. ಜನವರಿ 23ರಂದು ಭಾರತ ಅಥ್ಲೆಟಿಕ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಅಲ್ಟ್ರಾ ಸ್ಟೇಡಿಯಂ ರನ್ ಸ್ಪರ್ಧೆಯಲ್ಲಿ 24 ಗಂಟೆ ಟ್ರ್ಯಾಕ್ ನಲ್ಲಿ 181ಕಿ.ಮೀ. ಓಡಿದ ಸಾಧನೆ ಮಾಡಿದ ಅಶ್ವಿನಿ ರೊಮೇನಿಯಾದ ತಿಮಿಸೋರಾದಲ್ಲಿ ನಡೆಯಲಿರುವ ಐ ಎ
ಯು ವಿಶ್ವ 24 ಗಂಟೆ ಅಲ್ಟ್ರಾ ಆಟದ ಚಾಂಪಿಯನ್ ಶಿಪ್‌ಗೆ ಅರ್ಹತೆ ಪಡೆದಿದ್ದಾರೆ. ಈ ಚಾಂಪಿಯನ್ ಶಿಪ್‌ನಲ್ಲಿ 48 ರಾಷ್ಟ್ರ ಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಅಲ್ಟ್ರಾ ಮ್ಯಾರಥಾನ್
ಅಲ್ಟ್ರಾ ರನ್‌ನಲ್ಲಿ ಬೇರೆ ಬೇರೆ ವಿಧಾನಗಳಿವೆ. 12 ತಾಸಿನ ಓಟ, 24 ತಾಸಿನ ಓಟ ಪ್ರಮುಖವಾದವುಗಳು ರಾಷ್ಟ್ರೀಯ ಅಲ್ಟ್ರಾ ರನ್ ಸಂಸ್ಥೆ ಮತ್ತು ಎನ್.ಎನ್.ಇ.ಬಿ. ಸ್ಪೋಟ್ಸರ್ ಈ ಸ್ಪರ್ಧೆಗಳ ಆಯೋಜ ನೆಯ ಮುಂಚೂಣಿಯಲ್ಲಿದೆ. 42 ಕಿ.ಮೀ.ಗಿಂತ ಹೆಚ್ಚಿನ ದೂರವನ್ನು ಅಲ್ಟ್ರಾ ರನ್ ಎಂದು ಕರೆಯಲಾಗುತ್ತದೆ .
ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಮಾಡಬಹುದು ಎನ್ನುವುದಕ್ಕೆ ಸಾಕ್ಷಿ ಇವರ ಸಾಧನೆ. ಪತಿ ಸಂದೀಪ್ ಜೊತೆ ರಾಯಲ್ ಎನ್ ಫೀಲ್ಡ್ ಬೈಕ್‌ನಲ್ಲಿ ರಾಜಸ್ತಾನ್, ಕೇರಳ, ತಮಿಳುನಾಡಿನ ಕಡಲ ತೀರದಲ್ಲಿ ತಿರುಗಾಡಿ ತಮ್ಮ ತಿರುಗಾಟದ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಉತ್ತರಾಖಂಡ್, ಹಿಮಾಚಲ ಪ್ರದೇಶದಲ್ಲಿ ‘ಸೋಲೋ ಟ್ರಾವೆಲ್’ ಮಾಡಿರುವ ಸಾಹಸಗಾತಿ. ಹಳ್ಳಿ ಜೀವನದ ರೀತಿ ನೀತಿ, ಅಲ್ಲಿಯ ಜೀವನಶೈಲಿ ಮನಗಾಣಲು ಒಂದು ವರ್ಷ ಒಬ್ಬರೇ ಹಳ್ಳಿಯವರ ಜತೆ ವಾಸಿಸಿದ್ದಾರೆ.
‘ತವರುಮನೆಯವರ ಪ್ರೋತ್ಸಾಹ, ಮನೆಗೆ ಬಂದ ಮಹಾಲಕ್ಷ್ಮಿ ಎಂದು ಪರಿಗಣಿಸಿರುವ ಅತ್ತೆ ಮಾವನವರ ಉತ್ತೇಜನ, ಪತಿಯ ಬೆಂಬಲ ಎಲ್ಲವೂ ದೊರಕಿರುವುದರಿಂದ ಇಷ್ಟರಮಟ್ಟಿಗೆ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ತುಂಬು ಮನದಿಂದ ಎಲ್ಲರನ್ನೂ ನೆನೆಯುತ್ತಾರೆ.