Wednesday, 14th May 2025

ಟಾಮ್ ಅಂಡ್ ಜೆರ‍್ರಿ ಜತೆ ಗಾಯಕ ಸಿದ್ ಶ್ರೀರಾಮ್

ರಿದ್ಧಿ ಸಿದ್ಧಿ ಬ್ಯಾನರ್‌ನಲ್ಲಿ, ರಾಜು ಶೇರಿಗಾರ್ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ‘ಟಾಮ್ ಅಂಡ್ ಜೆರ್ರಿ’. ಜನರಿಗೆ ಒಳ್ಳೆಯ ಮನರಂಜನೆ ನೀಡಲು ‘ಟಾಮ್ ಅಂಡ್ ಜೆರ್ರಿ’ ಚಿತ್ರತಂಡ ಭರ್ಜರಿ ತಯಾರಿ ನಡೆಸಿದೆ.

‘ಕೆ ಜಿಎಫ್’ ಚಿತ್ರಕ್ಕೆ ಸಂಭಾಷಣೆ ರಚಿಸಿ, ಮಾತಿನ ಮಾಂತ್ರಿಕ ಎನಿಸಿಕೊಂಡಿರುವ ರಾಘವ್ ಶಿವಗಂಗೆ ನಿರ್ದೇಶನದಲ್ಲಿ ‘ಟಾಮ್ ಅಂಡ್ ಜೆರ್ರಿ’ ಮೂಡಿಬಂದಿದೆ. ಜೀವನದ ಏರಿಳಿತಗಳ ನಡುವೆ ಸಾಗುವ ಮಧ್ಯಮ ವರ್ಗದ ಜನರ ಬದುಕನ್ನ ವಿಮರ್ಶಿಸಿ
ಅತ್ಯಂತ ಕಾಳಜಿಯಿಂದ ಕಥೆ-ಚಿತ್ರಕಥೆ ರಚಿಸಿ, ಸಿನಿಮಾ ರಸಿಕರಿಗಾಗಿ ‘ಟಾಮ್ ಅಂಡ್ ಜೆರ್ರಿಿ’ ಚಿತ್ರವನ್ನು ಕಟ್ಟಿಕೊಡಲಾಗಿದೆ.

ಬಹು ನಿರೀಕ್ಷೆ ಮೂಡಿಸಿರುವ ಯುವ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ‘ಟಾಮ್ ಅಂಡ್ ಜೆರ್ರಿ’ ಚಿತ್ರಕ್ಕೆ ಸಂಗೀತ
ಸಂಯೋಜಿಸಿದ್ದಾರೆ. ಈ ಚಿತ್ರದ ‘ಹಾಯಾಗಿದೆ ಎದೆಯೊಳಗೆ…’ ಎಂಬ ಹಾಡನ್ನು ಖ್ಯಾತ ಹಿನ್ನೆಲೆ ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ. ಈ ಕಾರಣಕ್ಕೆ ಟಾಮ್ ಅಂಡ್ ಜೆರ್ರಿ, ಸಿನಿಮಾ ದಕ್ಷಿಣ ಭಾರತದಲ್ಲೇ ಕುತೂಹಲ ಮೂಡಿಸಿದೆ. ಇನ್ನು ಈ
ಸಿನಿಮಾಗೆ ಛಾಯಾಗ್ರಾಹಕರಾಗಿ ಸಂಕೇತ್ ಕಾರ್ಯ ನಿರ್ವಹಿಸಿದ್ದರೆ, ಸೂರಜ್ ಅಂಕೋಲೆಕರ್ ಅವರ ಸಂಕಲನವಿದೆ.

ಸಾಹಸ ನಿರ್ದೇಶಕರಾಗಿ ಅರ್ಜುನ್ ರಾಜ್ ಕಾರ್ಯನಿರ್ವಹಿಸಿದ್ದರೆ, ರಾಜ್ ಕಿಶೋರ್ ನೃತ್ಯ ನಿರ್ದೇಶನದ ಜವಾಬ್ದಾರಿ
ಹೊತ್ತಿದ್ದಾರೆ. ನಿಶ್ಚಿತ್ ಕರೋಡಿ ನಾಯಕನಾಗಿ ಅಭಿನಯಿಸಿದ್ದು, ಇವರ ಜತೆಯಾಗಿ ಚೈತ್ರರಾವ್ ನಟಿಸಿದ್ದಾರೆ. ಚಿತ್ರದಲ್ಲಿ ಹಿರಿಯ ಕಲಾವಿದರಾದ ಜೈ ಜಗದೀಶ್, ತಾರಾ ಅನುರಾಧ, ರಾಕ್ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು, ಸಂಪತ್ ಮೈತ್ರೇಯ, ಶೇಖರ್ ಮತ್ತಿತರರಿದ್ದಾರೆ.

Leave a Reply

Your email address will not be published. Required fields are marked *