Wednesday, 14th May 2025

ಕಿಕ್ಕೇರಿಸಲಿದೆ ಟಕೀಲಾ

ಸಿದ್ಧಿನಾಯಕ ಫಿಲಂಸ್ ಬ್ಯಾನರ್‌ನಲ್ಲಿ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ನಿರ್ಮಿಸು ತ್ತಿರುವ ’ಟಕೀಲಾ’ ಕಿಕ್ಕೋಕಿಕ್ಕು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ನೆಲಮಂಗಲದ ಬಳಿ ಇರುವ ಖಾಸಗಿ ಬಂಗಲೆಯೊಂದರಲ್ಲಿ ೧೦ ದಿನಗಳ ಕಾಲ ಚಿತ್ರೀ ಕರಣ ನಡೆದಿದ್ದು, ಪ್ರಮುಖ ಕಲಾವಿದರು ಶೂಟಿಂಗ್ ‌ನಲ್ಲಿ ಪಾಲ್ಗೊಂಡಿದ್ದರು. ಚಿತ್ರದಲ್ಲಿ ನವಿರಾದ ಪ್ರೇಮಕಥೆಯಿದ್ದು, ಧರ್ಮ ಕೀರ್ತಿರಾಜ್ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಇವರಿಗೆ ಜತೆಯಾಗಿ ನಿಖಿತಾ ನಟಿಸುತ್ತಿದ್ದಾರೆ. ಇಂತಹ ಕಥೆಗಾಗಿ ಬಹುದಿನಗಳಿಂದ ಕಾಯುತ್ತಿದ್ದೆ. ಕೊನೆಗೂ ಒಳ್ಳೆಯ ಕಥೆ ಸಿಕ್ಕಿದೆ.

ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಧರ್ಮ ಕೀರ್ತಿರಾಜ್. ಹಿಂದೆ ’ಝಡ್’, ಹೂಂ ಅಂತೀಯಾ ಉಹೂಂ ಅಂತೀಯಾ’, ’ಮೀಸೆ ಚಿಗುರಿದಾಗ’ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ಪ್ರವೀಣ್ ನಾಯಕ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶನದ ಜವಾಬ್ಧಾರಿ ಹೊತ್ತಿದ್ದಾರೆ. ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಸಂಗೀತ ಟಾಪ್‌ಸ್ಟಾರ್ ರೇಣು, ಸಂಕಲನ ಗಿರೀಶ್,ಕಲೆ ಪ್ರಶಾಂತ್ ಅವರದ್ದಾಗಿದೆ. ಉಳಿದಂತೆ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್ ಸುಮನ್, ಜಯರಾಜ್, ಸ್ಮಿತಾ, ಮುಂತಾದವರಿದ್ದಾರೆ. ಚಿತ್ರದ ಚಿತ್ರೀಕರಣ, ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *