Sunday, 11th May 2025

ಶಿವಣ್ಣ- ಅಪ್ಪು ಒಂದೇ ಚಿತ್ರದಲ್ಲಿ ನಟಿಸಬೇಕಿತ್ತು ಕೊನೆಗೂ ನನಸಾಗಲೇ ಇಲ್ಲ ಆ ಕನಸು

ಅಪ್ಪು ಹಾಗೂ ಶಿವಣ್ಣ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಹದಾಸೆ ಚಂದನವನದಲ್ಲಿತ್ತು

ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಇಪ್ಪತ್ತು ದಿನಗಳು ಕಳೆದಿದ್ದರು ಅಭಿಮಾನಿಗಳಲ್ಲಿ ದುಃಖ ಕಡಿಮೆಯಾಗಿಲ್ಲ. ಅಪ್ಪು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂದಿಗೂ ದೂರದ ಊರುಗಳಿಂದ ಬಂದು ಅಪ್ಪು ಸಮಾಧಿಯ ದರ್ಶನ
ಮಾಡುತ್ತಿರುವ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರು ಸುರಿಸುತ್ತಿದ್ದಾರೆ. ಈ ನಡುವೆಯೇ ಅಪ್ಪು ಕಂಡಿದ್ದ ಕೆಲವೊಂದು ಕನಸುಗಳು ಹಾಗೇ ಉಳಿದಿವೆ.

ಅಭಿಮಾನಿಗಳ ಕನಸು ಕೂಡ ಕನಸಾಗಿಯೇ ಉಳಿದಿದೆ. ದೊಡ್ಮನೆ ಕುಟುಂಬದ ಮಕ್ಕಳನ್ನು ಒಂದೇ ಸಿನಿಮಾದಲ್ಲಿ ಕಣ್ತುಂಬಿ ಕೊಳ್ಳಬೇಕು ಎಂದು ಅಭಿಮಾನಿಗಳು ದಶಕಗಳಿಂದಲೂ ಕಾದುಕುಳಿತಿದ್ದರು. ಕೊನೆಗೂ ಆ ಆಸೆ ಈಡೇರಲೇ ಇಲ್ಲ. ಅಪ್ಪು ಹಾಗೂ ಶಿವಣ್ಣ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಹದಾಸೆ ಚಂದನವನದಲ್ಲಿತ್ತು. ಇದಕ್ಕಾಗಿ ವೇದಿಕೆಯೂ ಸಜ್ಜಾಗಿತ್ತು. ಶಿವಣ್ಣ ಹಾಗೂ ಅಪ್ಪು ಒಂದೇ ಚಿತ್ರದಲ್ಲಿ ತೆರೆಗೆ ತರಲು ಹಲವು ಪ್ರಸಿದ್ಧ ನಿರ್ದೇಶಕರು ಕಥೆ ಹೆಣೆದಿದ್ದರು. ಈ ಇಬ್ಬರ ಚಿತ್ರಕ್ಕೆ ಬಂಡವಾಳ ಹೂಡಲು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳೇ ಮುಂದಾಗಿದ್ದವು.

ಈ ಇಬ್ಬರ ಚಿತ್ರ ಎಂದಾಕ್ಷಣ ಚಂದನವನದಲ್ಲಿ ದೊಡ್ಡ ನಿರೀಕ್ಷೆ ಒಡ ಮೂಡಿತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಚಂದನವನದತ್ತ ತಿರುಗಿ ನೋಡುತ್ತಿತ್ತು. ಈ ನಡುವೆ ಪುನೀತ್ ಹಾಗೂ ಶಿವಣ್ಣ ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ಈ ಇಬ್ಬರನ್ನು ಒಂದೇ ಚಿತ್ರದಲ್ಲಿ ತರಲು ಸಾಧ್ಯವಾಗಲಿಲ್ಲ.

ಮುಂದಿನ ದಿನಗಳಲ್ಲಾದರೂ ಅಪ್ಪು- ಶಿವಣ್ಣ ಒಟ್ಟಾಗಿ ತೆರೆಗೆ ಬರುತ್ತಾರೆ ನಮ್ಮನ್ನು ರಂಜಿಸುತ್ತಾರೆ ಎಂದು ಪ್ರೇಕ್ಷಕರು ಕಾದು ಕುಳಿರುವಾಗಲೇ ವಿದಿಯ ಆಟವೇ ಬೇರೆಯಾಗಿತ್ತು. ಅಭಿಮಾನಿಗಳ ಪ್ರೀತಿಯ ಅಪ್ಪು ಬಾರದ ಲೋಕಕ್ಕೆ ಪಯಣಿಸಿದರು. ಅಭಿಮಾನಿಗಳ ಕನಸು ಕನಸಾಗಿಯೇ ಉಳಿಯಿತು.

Leave a Reply

Your email address will not be published. Required fields are marked *