Monday, 12th May 2025

ಜೀವನದಲ್ಲಿ ಸಾರ್ಥಕತೆ

ವಾಣಿ ಭಂಡಾರಿ ಶಿವಮೊಗ್ಗ

ಕಷ್ಟ ಬಂದಾಕ್ಷಣ ಖಿನ್ನತೆಯಿಂದ ಕುಗ್ಗಬೇಕಿಲ್ಲ. ಈ ಆತ್ಮವನ್ನು ಕುಗ್ಗಿಸುವ ಹಕ್ಕು ಯಾರಿಗೂ ಇಲ್ಲ.

ಒಮ್ಮೊಮ್ಮೆ ಬದುಕು ಇಷ್ಟೇ ಅನಿಸುವಷ್ಟರಲ್ಲಿ ಬದುಕಿನ ಪ್ರತಿ ಹಂತ ವಿಭಿನ್ನ ರೀತಿಯಲ್ಲಿ ತಿರುವು ಪಡೆದುಕೊಂಡಿರುತ್ತವೆ. ಹತ್ತಾರು ಆಲೋಚನೆಗಳು ನೂರಾರು ಚಿಂತನೆಗಳು ಮನಃಪಟಲದಲ್ಲಿ ಹಾದು ಹೋಗಿ ಬಾಳು ದುಸ್ತರ ಅನಿಸುತ್ತದೆ.

ಹಾಗಂತ ಜೀವನದ ಅಂತ್ಯ ಅಲ್ಲ ಅದು. ಕಷ್ಟ ಬಂದಾಕ್ಷಣ ಖಿನ್ನತೆಗೆ ಕುಗ್ಗುವ ಅವಶ್ಯಕತೆ ಇಲ್ಲ. ಏಕೆಂದರೆ ಈ ಆತ್ಮವನ್ನು ಕುಗ್ಗಿ ಸುವ ಹಕ್ಕು ಯಾರಿಗೂ ಇಲ್ಲ. ಬಂದಿದ್ದೆಲ್ಲ ಬರಲಿ ಭಗವಂತನ ದಯೆ ಇರಲಿ ಎಂದುಕೊಂಡು ಮುನ್ನುಗಿದಾಗ ಆಗಾಧವಾದ ಶಕ್ತಿ ಸಂಚಯವಾಗುತ್ತೆ ನಮ್ಮ ನರನಾಡಿಗಳಲ್ಲಿ.

ಸಾವು ಕಣ್ಣೆದುರಿಗೆ ಇದೆ ಅಂತ ಗೊತ್ತಾದಾಗಲೂ ಮನುಷ್ಯ ಬದುಕಿನತ್ತ ತನ್ನ ಸಮಚಿತ್ತವನ್ನು ಇರಿಸಿ ಹೆಜ್ಜೆ ಇಡುತ್ತಾರಲ್ಲ
ಅಂತವರೆಂದಿಗೂ ಸ್ಪೂರ್ತಿಸೆಲೆಯಾಗಿ ನಿಲ್ಲುತ್ತಾರೆ. ಸ್ಟೀಪನ್ ಹಾಕಿಂಗ್ ಅಂತಹ ಮಹಾನ್ ವ್ಯಕ್ತಿಗಳು ಸಾವಿಗೂ ಮತ್ತು ದೇವ ರಿಗೂ ಸಹ ಸವಾಲಾಗುವಂತೆ ಬದುಕಿದ ಚಿತ್ರಣ ಕಣ್ಮಂದೆ ಸುಳಿಯುತ್ತದೆ. ತನ್ನ ಇಪ್ಪತ್ತೊಂದನೆ ವಯಸ್ಸಿಗೆ ಗುಣಪಡಿಸಲಾಗ ದಂತಹ ರೋಗಕ್ಕೆ ತುತ್ತಾಗಿ, ತಾನು ಇನ್ನು ಕೇವಲ ಎರಡು ವರ್ಷವಷ್ಟೆ ಬದುಕುಳಿಯುವೆ ಎಂಬ ಸತ್ಯ ಅರಗಿಸಿಕೊಳ್ಳಲಾಗ ದಿದ್ದರೂ, ಮುಂದೆ ನಲತ್ತಾರು ವರ್ಷಗಳ ಕಾಲ ಬದುಕಿ ಮನುಕುಲಕ್ಕೆ, ವಿಜ್ಞಾನಕ್ಕೆ ವಿಸ್ಮಯ ಹುಟ್ಟುವಂತಹ ಸಾಧನೆ ಮಾಡಿ ದರು.

ಹಾಗಾದರೆ ಇದೆಲ್ಲ ಹೇಗೆ ಸಾಧ್ಯ ಆಯ್ತು? ಬದುಕನ್ನು ಬದುಕಿಗಾಗಿ ಬದುಕಿಂದ ಬದುಕಿಗೋಸ್ಕರ ಪ್ರೀತಿಸಿ ಬದುಕಿದಾಗ ಮಾತ್ರ ಜೀವನದಲ್ಲಿ ಅಗಾಧವಾದ ಜೀವಜಲ ಸಂಚಾರವಾಗಲು ಸಾಧ್ಯ. ನಾಳೆ ಎಂಬುದೊಂದು ಇಲ್ಲದಿದ್ದರೆ ಮನುಷ್ಯನ ಜೀವನಕ್ಕೆ ಅರ್ಥವೇ ಇರುತ್ತಿರಲಿಲ್ಲ. ಇರುವೆಗಳ ಶಿಸ್ತುಬದ್ಧ ಜೀವನ ಕ್ರಮವು ಇದಕ್ಕೆ ಮಾದರಿ. ಗಂಡಿರುವೆ ಒಂದೆ ವಾರಕ್ಕೆ ಸಾವನ್ನಪ್ಪುದಾ ದರೂ ಕೊನೆ ಕ್ಷಣದವರೆಗೆ ಬದುಕನ್ನು ಪ್ರೀತಿಸಿ ಸಾಯುತ್ತದೆ.

ಇಂದು ಅರಳುವ ಗುಲಾಬಿ ಹೂ ಸಂಜೆಗೆ ಬಾಡುವುದಾದರೂ ಇರುವಷ್ಟು ಸಮಯ ಬಾಳಿನ ರಸಕ್ಷಣಗಳನ್ನು ಮುಡಿಯಲ್ಲೋ
ಅಥವಾ ದೇವರ ಗುಡಿಯಲ್ಲೋ ಕಳೆದು ಬದುಕನ್ನು ಸಾರ್ಥಕ ಮಾಡಿಕೊಳ್ಳುತ್ತದೆ. ಹಾಗಾದರೆ ಬದುಕಿನ ಸಾರ್ಥಕತೆ ಎಲ್ಲಿದೆ?
ಬದುಕನ್ನು ಬಂದಂತೆ ಸ್ವೀಕರಿಸಿ ನಡೆದು, ಸ್ವಾರ್ಥ ನಮ್ಮ ಕೈಲಾದ ಕೆಲಸವನ್ನು ನಿಷ್ಠೆಯಿಂದ ಮಾಡಿದಾಗ, ಕಷ್ಟದಿಂದ ಪಾರಾ ದವರ ಕಿರುನಗೆ ಬದುಕಿನ ನಿಜ ಅರ್ಥ ಮತ್ತು ಸಾರ್ಥಕತೆಯ ಭಾವ ತೋರಿಸುತ್ತದೆ.

ಬಾಳಿನ ಆಳವನ್ನು ಅರಿತವರಿಲ್ಲ. ಅರಿಯಲಾಗದಂತಹ ಮಹಾಸಾಗರವಿದು. ನಾಳೆಗಾಗಿ ಇಂದಿನ ಸಂತಸದ ಕ್ಷಣಗಳನ್ನು ಕಳೆದು ಕೊಂಡರೆ ಮೂರ್ಖರಾಗುತ್ತೇವೆ. ಈ ದಿನ ನಮ್ಮದೆ ಎಂಬ ಆಶಾಭಾವದೊಂದಿಗೆ ಸುಂದರ ಕ್ಷಣಗಳನ್ನು ಸವಿಯುತ್ತಾ ಸಂತಸದ ಒಡೆಯರಾಗೋಣ.

Leave a Reply

Your email address will not be published. Required fields are marked *