Wednesday, 14th May 2025

ಸಂಬಂಧಗಳ ಸಂಕಥನ ಅರಿಷಡ್ವರ್ಗ

ಅರಿಷಡ್ವರ್ಗಗಳು ಪ್ರತಿಯೊಬ್ಬರಲ್ಲೂ ಇರುತ್ತದೆ. ಇರಬೇಕು. ಆಗಲೇ ಆತ ಮಾನವ ಅಂತ ಅನ್ನಿಸಿಕೊಳ್ಳುವುದು. ಯಾರು ತನ್ನಲ್ಲಿ ರುವ ‘ಅರಿಷಡ್ವರ್ಗ’ಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾನೋ ಅವನು ಸಾಧಕನಾಗುತ್ತಾನೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕುತ್ತಾನೆ. ಇದನ್ನೇ ‘ಅರಿಷಡ್ವರ್ಗ’ಗಳು ಸಿನಿಮಾ ಹೇಳಲು ತೆರೆಗೆ ಬಂದಿದೆ. ಇದು ನಮ್ಮೆಲ್ಲರಿಗೂ ಸಂಬಂಧಿಸಿದ ವಿಚಾರ ವಾದರೂ ಅದನ್ನು ತತ್ವದಂತೆ ಬೋಧಿಸುವ ಬದಲು ಮನರಂಜನಾತ್ಮಕವಾಗಿ ತೋರಿಸುವ ನಿಟ್ಟಿನಲ್ಲಿ ತೆರೆಗೆ ತಂದಿದ್ದಾರೆ
ನಿರ್ದೇಶಕ ಅರವಿಂದ್.

‘ಅರಿಷಡ್ವರ್ಗ’ಗಳು ಮೂರು ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಚಿತ್ರ. ಹಲವು ಅಡಚಣೆಗಳು ಎದುರಾದರೂ ಅವೆಲ್ಲವನ್ನು ಬಗೆ ಹರಿಸಿ ಅಂದುಕೊಂಡಂತೆ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು ಒಳ್ಳೆಯ ಸಂದೇಶವನ್ನು ಹೊತ್ತು ತಂದಿದೆ. ಆ ಒಂದು ಕೊಲೆಯ ಸುತ್ತ ‘ಅರಿಷಡ್ವರ್ಗ’ಗಳು ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನಲ್ಲಿ ಸಾಗುವ ಸಿನಿಮಾ. ಮಂಜುನಾಥ್ ಭಟ್ ಸಿನಿಮಾ ನಿರ್ಮಾಪಕ, ನಗರದ ಖ್ಯಾತ ಉದ್ಯಮಿಯೂ ಆಗಿರುತ್ತಾರೆ.

ಉದ್ಯಮಕ್ಕಿಂತ ಸಿನಿಮಾ ಮೇಲೆಯೇ ಅವರಿಗೆ ಪ್ರೀತಿ ಜಾಸ್ತಿ. ಒಂದು ದಿನ ಇದ್ದಕ್ಕಿದ್ದ ಹಾಗೆ ಈ ಉದ್ಯಮಿಯ ಕೊಲೆಯಾಗುತ್ತದೆ. ಆ ಕೊಲೆ ಯಾರು ಮಾಡಿದ್ದು, ಯಾತಕ್ಕಾಗಿ ಕೊಲೆ ಮಾಡಿದರು. ಎಂಬುದು ನಿಗೂಢವಾಗಿರುತ್ತದೆ. ಈ ನಿಗೂಢತೆಯನ್ನು ಪತ್ತೆ ಮಾಡಲು ಹೊರಟ ತನಿಖಾಧಿಕಾರಿಗಳಿಗೂ ಅದು ಸವಲಾಗಿಯೇ ಕಾಣುತ್ತದೆ. ಅಷ್ಟಕ್ಕೂ ಆ ಉದ್ಯಮಿಯನ್ನು ಕೊಂದದ್ದಾದರೂ
ಯಾರು? ಕೊಲೆಗೆ ಕಾರಣವಾದರೂ ಏನು? ಎಂಬ ವಿಚಾರ ಚಿತ್ರದ ಕೊನೆಯವರೆಗೂ ಕಾಡುತ್ತದೆ.

ಉದ್ಯಮಿಯ ಪಾತ್ರದಲ್ಲಿ ಹಿರಿಯ ನಟ ಅವಿನಾಶ್ ನಟಿಸಿದ್ದಾರೆ. ಆಸೆಯ ಬೆನ್ನತ್ತಿ… ಇನ್ನು ತಾನು ನಟಿಯಾಗಬೇಕೆಂಬ ಆಸೆ ಯಲ್ಲಿ ಯುವತಿಯೊಬ್ಬಳು ಎಲ್ಲಾ ಪ್ರಯತ್ನವನ್ನು ಮಾಡುತ್ತಾಳೆ. ನಟನೆಗೆ ಅಗತ್ಯವಾದ ತರಬೇತಿಯಾಗಲಿ, ಹಿನ್ನಲೆಯಾಗಲಿ ಯಾವುದೂ ಆಕೆಯಲ್ಲಿ ಇರುವುದಿಲ್ಲ. ಹಾಗಿದ್ದರೂ ತಾನು ನಟಿಯಾಗಲೇಬೇಕೆಂಬ ತುಡಿತ ಅವಳದ್ದು, ಅದಕ್ಕಾಗಿ ಆಕೆ ಏನೆಲ್ಲಾ ಪ್ರಯತ್ನಪಡುತ್ತಾಳೆ ಎಂಬುದನ್ನು ತೆರೆಯಲ್ಲಿಯೇ ನೋಡಬೇಕು. ಈ ನಡುವೆ ನಿರ್ಮಾಪಕನ ಕೊಲೆಯಲ್ಲಿ ಈಕೆಯ ಪಾತ್ರ ಏನು
ಎಂಬುದು ಕೂಡ ಕುತೂಹಲ ಕೆರಳಿಸುತ್ತದೆ. ಚಿತ್ರದಲ್ಲಿ ಕಥೆಯೇ ನಾಯಕ.

***

ನಮ್ಮ ತನವನ್ನು ಕಾಪಾಡಿಕೊಂಡು ನಾವು ಜೀವನದಲ್ಲಿ ಯಶಸ್ಸಿನತ್ತ ಸಾಗಬೇಕು. ಒಂದು ವೇಳೆ ಹಿಡತ ತಪ್ಪಿದರೆ ಆಗುವ ಅನಾಹುತವನ್ನು ಜೀವನ ಪರ್ಯಾಂತ ಅನುಭವಿಸಬೇಕಾಗುತ್ತದೆ. ಇದನ್ನು ಹಾಗೆಯೇ ಹೇಳ ಹೊರಟರೆ ಯಾರಿಗೂ ರಚಿಸುವು ದಿಲ್ಲ. ಅದಕ್ಕಾಗಿಯೇ ಎಲ್ಲರಿಗೂ ಹೊಂದುವ ಕಥೆಗೆ ಒಂದಷ್ಟು ಮನರಂಜನೆಯನ್ನು ಬೆರೆಸಿ, ಸಿನಿಮಾ ರೂಪದಲ್ಲಿ ತೆರೆಗೆ ತಂದಿ ದ್ದೇನೆ – ಅರವಿಂದ್, ನಿರ್ದೇಶಕ

Leave a Reply

Your email address will not be published. Required fields are marked *