ಕಂಪ್ಯೂಟರ್ ಮಾನಿಟರ್ ಸ್ಕ್ರೀನ್ ಗಳು ಈಗ ಹೆಚ್ಚು ಹೆಚ್ಚು ಸ್ಮಾರ್ಟ್ ಆಗುತ್ತಿವೆ. ಅತ್ತ ಟಿವಿಯಾಗಿಯೂ, ಇತ್ತ ಕಂಪ್ಯೂಟರ್ ಆಗಿಯೂ ಕಾರ್ಯ ನಿರ್ವಹಿಸುವ ಮಾನಿಟರ್ ಸ್ಕ್ರೀನ್‌ನ್ನು ಸ್ಯಾಮ್ಸಂಗ್ ಸಂಸ್ಥೆಯು ತಯಾರಿಸಿದೆ.
43 ಇಂಚಿನ ಈ ಸ್ಕ್ರೀನ್ ಇತ್ತ ಕೆಲಸಕ್ಕೂ ಉಪಯೋಗ, ಅತ್ತ ಮನರಂಜನೆ ನೀಡಲೂ ಸಿದ್ಧವಾಗುವಂತೆ ವಿನ್ಯಾಸಗೊಂಡಿದೆ. ಬ್ಯುಲ್ಟ್‌ಇನ್ ಶಕ್ತಿಶಾಲಿ ಸ್ಪೀಕರ್, ಸ್ಮಾರ್ಟ್ ಟಿವಿಯ ಸೌಲಭ್ಯವನ್ನು ಹೊಂದಿರುವ ಈ ವಿಶಾಲ ಸ್ಕ್ರೀನ್ ಮೂಲಕ ಅಮೆಜಾನ್
ಪ್ರೈಮ್ ಅಥವಾ ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಮಾಡಬಹುದು. ಆ ಮೂಲಕ ಹೊಸ ಮತ್ತು ಹಳೆಯ ಸಿನಿಮಾಗಳನ್ನೂ ನೋಡಬಹುದು.
ಇದೇ ಸಮಯದಲ್ಲಿ, ಸ್ಯಾಮ್ಸಂಗ್ ಗೆಲಾಕ್ಸಿ ಸ್ಮಾರ್ಟ್ ಫೋನ್‌ನ್ನು ಇದಕ್ಕೆ ಸಂಪರ್ಕ ನೀಡುವ ಮೂಲಕ, ಈ ಮಾನಿಟರ್ ಸ್ಕ್ರೀನ್ ಅಕ್ಷರಶಃ ಹೋಂ ಆಫೀಸ್ ಆಗಿ ಉಪಯೋಗಕ್ಕೆ ಬರುತ್ತದೆ. ಆಗ ಇದು ಒಂದು ಡೆಸ್ಕ್ ಟಾಪ್ ಕಂಪ್ಯೂಟರ್ ಆಗಿ ಮಾರ್ಪಾಡು ಗೊಳ್ಳುತ್ತದೆ! ಇದಕ್ಕೆ ಸೋಲಾರ್ ಶಕ್ತಿಯ ರಿಮೋಟ್‌ನ್ನು ಒದಗಿಸಲಾಗಿದ್ದು, ಅಲೆಕ್ಸಾ, ಗೂಗಲ್ ಅಸಿಸ್ಟಂಟ್ ಸೌಲಭ್ಯವೂ
ಇದರಲ್ಲಿದೆ.
ಹಿಂದಿನ ವರ್ಷಗಳಲ್ಲಿ 27 ಮತ್ತು 31 ಇಂಚಿನ ಇಂತಹದೇ ಮಾದರಿಗಳನ್ನು ಸ್ಯಾಮ್ಸಂಗ್ ಹೊರತಂದಿದ್ದು, ಈ ಹೊಸ ೪೩ ಇಂಚಿನ ಮಾನಿಟರ್ ಹೆಚ್ಚು ಮನರಂಜನೆ ಒದಗಿಸಲು ವಿನ್ಯಾಸಗೊಂಡಿದೆ ಎಂದೇ ಹೇಳಬಹುದು.