Thursday, 15th May 2025

ರಶ್ಮಿಕಾಗೆ ಪ್ರಭಾಸ್ ಮೇಲೆ ಕ್ರಶ್ !

ಸ್ಯಾಂಡಲ್‌ವುಡ್ ಸಾನ್ವಿ ರಶ್ಮಿಕಾ ಮಂದಣ್ಣ, ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ಹಿಟ್ ಚಿತ್ರಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಮನೆಮಾಡಿದ್ದಾರೆ.

ಹಾಗಾಗಿಯೇ ರಶ್ಮಿಕಾ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದರು. ಈಗ ರಶ್ಮಿಕಾಗೆ ಸ್ಟಾರ್ ನಟರೊಬ್ಬರ ಮೇಲೆ ಕ್ರಶ್ ಆಗಿದೆಯಂತೆ. ಆ ನಟ ಬೇರೇ ಯಾರೂ ಅಲ್ಲ, ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಮೇಲೆ. ಹೌದು ಈ ವಿಚಾರವನ್ನು ಸ್ವತಃ ರಶ್ಮಿಕಾ ಅವರೇ ಬಹಿರಂಗ ಪಡಿಸಿದ್ದಾರೆ. ನನಗೆ ಪ್ರಭಾಸ್ ಎಂದರೆ ಬಲು ಅಚ್ಚುಮೆಚ್ಚು. ಅವರ ಮೇಲೆ ನನಗೆ ಕ್ರಶ್ ಆಗಿದೆ. ಒಂದು ವೇಳೆ ಅವಕಾಶ ಸಿಕ್ಕಿದರೆ, ಅವರು ಒಪ್ಪಿದರೆ ಖಂಡಿತಾ ಡೇಟಿಂಗ್ ಮಾಡು ತ್ತೇನೆ ಎಂದಿದ್ದಾರೆ.

ಅಲ್ಲದೆ ಅವರ ಬಾಬುಬಲಿ ಚಿತ್ರ ನನಗೆ ತುಂಬಾ ಇಷ್ಟವಾಯಿತು. ಅವರ ನಟನೆ, ಕಥೆಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುವ ಅವರ ಶ್ರಮ ಎಲ್ಲವೂ ನನಗೆ ಹಿಡಿಸಿತು. ನನಗೂ ಅವರೊಂದಿಗೆ ನಟಿಸುವ ಆಸೆ ಇದೆ, ಅದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ತಮ್ಮ ಮನ ದಾಳವನ್ನು ಹಂಚಿಕೊಂಡಿದ್ದಾರೆ ರಶ್ಮಿಕಾ. ಈ ಹಿಂದೆ ಪ್ರಭಾಸ್ ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರೆ ಎಂಬ ಗಾಸಿಪ್ ಕೂಡ ಹಬ್ಬಿತ್ತು. ಆದರೆ ಅದು ಗಾಸಿಪ್ ಆಗಿಯೇ ಉಳಿಯಿತು.

ಕೆಲವು ದಿನಗಳ ಹಿಂದೆಯಷ್ಟೇ ರಶ್ಮಿಕಾ, ನನಗೆ ತಮಿಳು ನಾಡಿನ ಸಂಸ್ಕೃತಿ, ಇಲ್ಲಿನ ಆಚಾರ ವಿಚಾರ ಇಷ್ಟ ಎಂದಿದ್ದರು. ತಮಿಳು ನಾಡಿನ ಸೊಸೆಯಾಗಬೇಕು ಎಂಬ ಆಸೆಯೂ ಇದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಈಗ ಪ್ರಭಾಸ್ ಮೇಲೆ ಕ್ರಶ್ ಆಗಿದ್ದಾಗಿ ತಿಳಿಸಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಟನೆಗೆ ಎಂಟ್ರಿಕೊಟ್ಟ ರಶ್ಮಿಕಾ, ಆ ಚಿತ್ರದಲ್ಲಿನ ಸಾನ್ವಿ ಪಾತ್ರದ ಮೂಲಕವೇ ಗಮನ ಸೆಳೆದಿದ್ದರು. ಚಿತ್ರವೂ ಸಕ್ಸಸ್ ಆಗಿತ್ತು. ಬಳಿಕ ರಕ್ಷಿತ್ ಶೆಟ್ಟಿ ಜತೆಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು.

ಇನ್ನೇನು ಈ ಇಬ್ಬರು ಹಸೆಮಣೆ ಏರಲಿದ್ದಾರೆ ಎನ್ನುವಷ್ಟರಲ್ಲೇ, ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು, ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಆ ನಂತರದಲ್ಲಿ ತೆಲುಗಿಗೆ ಕಾಲಿಟ್ಟ ರಶ್ಮಿಕಾ ಅಲ್ಲಿಯೂ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು.

ವಿಜಯ್ ದೇವರಕೊಂಡ ಮುಂತಾದವರ ಜತೆ ರಶ್ಮಿಕಾ ಹೆಸರು ತಳುಕು ಹಾಕಿಕೊಂಡಿತು. ಅದೆಲ್ಲವನ್ನು ರಶ್ಮಿಕಾ ತಳ್ಳಿ ಹಾಕಿದರು. ಹೈದರಾಬಾದ್‌ನಲ್ಲಿ ನೆಲೆಸಿರುವ ರಶ್ಮಿಕಾ, ತೆಲುಗಿನ ಪುಷ್ಪಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಬಾಲಿವುಡ್‌ನ ಮಿಷನ್ ಮಜ್ನು ಹಾಗೂ ಗುಡ್‌ಬೈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

Leave a Reply

Your email address will not be published. Required fields are marked *