Thursday, 15th May 2025

ಜಾನಿ ವಾಕರ್‌ನಲ್ಲಿ ಖಾಕಿ ತೊಟ್ಟ ರಾಗಿಣಿ

ನಿರ್ದೇಶಕ ವೇದಿಕ್ ವೀರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಜಾನಿ ವಾಕರ್’ ಕ್ರೈಂ, ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರದ ಚಿತ್ರ. ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಟೈಟಲ್ ನಲ್ಲೇ ಕ್ಯೂರಿಯಾಸಿಟಿ ಮೂಡಿಸಿದೆ.

ರಂಜನ್ ಹಾಸನ್ ನಿರ್ಮಾಣದಲ್ಲಿ ಸೆಟ್ಟೇರಿರುವ ಈ ಚಿತ್ರದಲ್ಲಿ, ರಾಗಿಣಿ ದ್ವಿವೇದಿ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಜಾನಿವಾಕರ್’ ಸಿನಿಮಾ ದಲ್ಲಿ ರಾಗಿಣಿ ಸರಣಿ ಕೊಲೆಗಳ ರಹಸ್ಯ ಬೇಧಿಸುವ ಖಡಕ್ ಪೊಲೀಸ್ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೊಲೆ ಯಾರು ಮಾಡಿದರು, ಏಕೆ ಮಾಡಿದರು, ‘ಜಾನಿ ವಾಕರ್’ ಯಾರು ಎಂಬ ವಿಷಯದ ಮೇಲೆ ಕಥೆ ಸಾಗುತ್ತದೆ. ಈ ಚಿತ್ರ ನನ್ನ 5 ವರ್ಷಗಳ ಕನಸು. ಯೂನಿವರ್ಸಲ್ ಕಂಟೆಂಟ್ ಇದಾಗಿದ್ದು, ನಿರ್ಮಾಪಕರಿಗೆ ಕಥೆ ಹೇಳಿದಾಗ ತುಂಬಾ ಇಷ್ಟಪಟ್ಟರು.

‘ಜಾನಿವಾಕರ್’ ಎನ್ನುವುದು ಚಿತ್ರದಲ್ಲಿ ಒಬ್ಬ ವ್ಯಕ್ತಿಯ ಹೆಸರು. ಇಡೀ ಸಿನಿಮಾ ಆ ಪಾತ್ರದ ಮೇಲೇ ಹೋಗುತ್ತದೆ. ಕ್ರೈಂ, ಆ್ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿರು ತ್ತವೆ ಎನ್ನುತ್ತಾರೆ ನಿರ್ದೇಶಕ ವೇದಿಕ್.

ಬುದ್ಧಿವಂತ ಮತ್ತು ಪ್ರಾಮಾಣಿಕ ತನಿಖಾಧಿಕಾರಿಯ ಪಾತ್ರ ನನ್ನದು. ಇಲ್ಲಿ ಕಥೆಯೇ ಹೀರೋ, ಗಟ್ಟಿಯಾದ ಕಥೆ ಚಿತ್ರದಲ್ಲಿದೆ. ಇಡೀ ಸಿನಿಮಾದಲ್ಲಿ ನಾನೊಬ್ಬಳೇ ಮಹಿಳಾ ಪಾತ್ರಧಾರಿ, ಸಿನಿಮಾದ ಕಥೆ ನನ್ನ ಸುತ್ತಲೇ ಗಿರಕಿ ಹೊಡೆಯುತ್ತದೆ.

ಚಿತ್ರದ ನಾಯಕನಾಗಿ ಅಭಯ್ ನಟಿಸುತ್ತಿದ್ದಾರೆ. ಚಿತ್ರ ಕಥೆ ನನಗೆ ಇಷ್ಟವಾಗಿದೆ ಎಂದು ಸಂತಸ ಹಂಚಿಕೊಂಡರು ರಾಗಿಣಿ.

Leave a Reply

Your email address will not be published. Required fields are marked *