Thursday, 15th May 2025

ಐದು ಭಾಷೆಗಳಿಗೂ ಹಾರಲಿದೆ ಪಾರಿವಾಳ

ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗಕ್ಕೆ ಬರುವವರಿಗೆ ಆಲ್ಬಂ, ಷಾರ್ಟ್ ಫಿಲ್ಮ್ ಮೇಕಿಂಗ್ ಒಂದು ವೇದಿಕೆ ಆಗುತ್ತಿದೆ.

ಇತ್ತೀಚೆಗಷ್ಟೇ ‘ಪಬ್ಲಿಕ್ ಟಾಯ್ಲೆಟ್’  ಕಿರುಚಿತ್ರ ನಿರ್ಮಿಸಿದ ಭಾನವಿ ಕ್ಯಾಪ್ಚರ್ ಸಂಸ್ಥೆ ಇದೀಗ ‘ಪಾರಿವಾಳ’ ಎಂಬ ಆಲ್ಬಂ ವೀಡಿಯೋ ಸಾಂಗನ್ನು ಸಿದ್ಧಪಡಿಸಿದೆ. ಚಿನ್ನಿಪ್ರಕಾಶ್ ಅವರ ಶಿಷ್ಯ, ಮೂಲತ: ನೃತ್ಯ ಸಂಯೋಜಕರಾದ ರಾಮ್‌ಕಿರಣ್ ಈ ಹಾಡಿನಲ್ಲಿ ಅಭಿನಯಿಸುವುದರ ಜತೆಗೆ ತಾವೇ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಶೇಷವಾಗಿ ಈ ಹಾಡನ್ನು ಸಿಂಗಲ್
ಟೇಕ್‌ ನಲ್ಲಿ ಛಾಯಾಗ್ರಾಹಕ ಅಭಿಷೇಕ್ ಜಿ.ಕಾಸರಗೋಡು ಸೆರೆಹಿಡಿದಿದ್ದಾರೆ.

ಅಗಸ್ತ್ಯಯ ಸಂತೋಷ್ ಸಾಹಿತ್ಯ ರಚಿಸಿ, ರಾಗ ಸಂಯೋಜನೆ ಮಾಡಿದ್ದಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಈ ‘ಪಾರಿವಾಳ’ದ ಹಾಡು ಬಿಡುಗಡೆಯಾಗಲಿದ್ದು, ಸದ್ಯ ಕನ್ನಡ ಸಾಂಗ್ ಮಾತ್ರ ರಿಲೀಸ್ ಆಗಿದೆ. ಹಿರಿಯ ನೃತ್ಯನಿರ್ದೇಶಕ ಚಿನ್ನಿಪ್ರಕಾಶ್ ಈ ವೀಡಿಯೋ ಆಲ್ಬಂ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿ ದರು.

ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯ ಹಾಡನ್ನು ರಿಲೀಸ್ ಮಾಡುವ ಯೋಜನೆಯನ್ನು ಈ ತಂಡ ಹಮ್ಮಿ ಕೊಂಡಿದೆ. ಕನ್ನಡ ಸೇರಿದಂತೆ ಪಂಚ ಛಾಷೆಯಲ್ಲೂ ಗಾಯಕ ಶಶಾಂಕ್ ಶೇಷಗಿರಿ ಅವರೇ ಹಾಡಿದ್ದಾರೆ. ನಾಯಕ ರಾಮ್‌ಕಿರಣ್ ಹಾಗೂ ನಾಯಕಿ ತೇಜಸ್ವಿನಿ ಶರ್ಮ ಅಭಿನಯಿಸಿರುವ ಈ ಹಾಡಿನಲ್ಲಿ ಭಗ್ನಪ್ರೇಮಿಯೊಬ್ಬನ ಮನದ ವಿರಹ ವೇದನೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ.

ನಾವೆಲ್ಲ ಸೇರಿ ಏನಾದರೂ ಡಿಫರೆಂಟಾಗಿ ಟ್ರೈಮಾಡಬೇಕು ಎಂದು ಹೊರಟಾಗ ಈ ಕಾನ್ಸೆ್ಟೆ್‌ೃ ಹೊಳೆಯಿತು. ಆಗಲೇ ಆರು ಚಿತ್ರಗಳಲ್ಲಿ ಕೆಲಸ ಮಾಡಿದ್ದ ಅಭಿಷೇಕ್, ವಿಭಿನ್ನ ಪ್ರಯತ್ನವಾಗಿ ಒಂದೇ ಟೇಕ್‌ನಲ್ಲಿ ಈ ಹಾಡನ್ನು ಸೆರೆಹಿಡಿದಿದ್ದಾರೆ. ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಒಂದೇ ರಾತ್ರಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ತಮ್ಮ ಪ್ರಯತ್ನವನ್ನು ಬಿಚ್ಚಿಟ್ಟರು ರಾಮ್ ಕಿರಣ್.

Leave a Reply

Your email address will not be published. Required fields are marked *