Friday, 16th May 2025

ಚಂದನವನಕ್ಕೆ ಮೆಹ್ರೀನ್‌ ಪಿರ್ಜಾಡಾ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಭಜರಂಗಿ 2 ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲಿ. ಹೀಗಿರುವಾಗಲೇ ಶಿವಣ್ಣನ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

ಶಿವರಾಜ್ ಕುಮಾರ್ ಅಭಿನಯದ 124 ನೇ ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆದಿವೆ. ರಾಮ್ ದುಲಿಪುಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 124 ನೇ ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಅಭಿಮಾನಿಗಳನ್ನು ಕಾಡುತ್ತಿತ್ತು. ಅದಕ್ಕೂ ಈಗ ಉತ್ತರ ಸಿಕ್ಕಿದ್ದು, ಮೆಹ್ರೀನ್ ಪಿರ್ಜಾಡಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ತೆಲುಗು, ತಮಿಳಿನ ಚಿತ್ರಗಳಲ್ಲಿ ನಟಿಸಿರುವ ಮೆಹ್ರೀನ್ ಪಿರ್ಜಾಡಾ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.

ಶಿವಣ್ಣನ 124ನೇ ಚಿತ್ರ ಕೌಟುಂಬಿಕ ಕಥೆಯ ಚಿತ್ರವಾಗಿದ್ದು, ಎರಡು ಶೇಡ್‌ನಲ್ಲಿ ಶಿವರಾಜ್ ಕುಮಾರ್ ಕಂಗೊಳಿಸಲಿದ್ದಾರೆ. ಸಾಧುಕೋಕಿಲ, ನಾಸ್ಸರ್, ಸಂಪತ್ ಜತೆಗೆ ಗಾಯಕಿ ಮಂಗ್ಲಿ ಕೂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರಕ್ಕೆ ಚರಣ್ ರಾಜ್ ಸಂಗೀತ, ರವಿಕುಮಾರ್ ಸನಾ ಛಾಯಾಗ್ರಹಣವಿದೆ. ಶ್ರೀಕಾಂತ್ ದುಲಿಪುಡಿ ಹಾಗೂ ನರಲಾ ಶ್ರೀನಿವಾಸ್ ರೆಡ್ಡಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *