Wednesday, 14th May 2025

ಲವ್’ಯೂ ರಚ್ಚುಗೆ ಚಾಲನೆ

 

ಕೃಷ್ಣ ಅಜಯ್ ರಾವ್ ಮತ್ತು ಡಿಂಪಲ್ ಬೆಡಗಿ ರಚಿತಾರಾಮ್ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ‘ಲವ್ ಯೂ ರಚ್ಚು’
ಚಿತ್ರದ ಮುಹೂರ್ತ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ನೆರವೇರಿತು.

ನಿರ್ದೇಶಕ ಶಂಕರ್ ಎಸ್.ರಾಜ್ ಪ್ರಥಮ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದ್ದು, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಅವರ ಆಶ್ರವುದಲ್ಲಿ ನಡೆದ ಚಿತ್ರದ ಮುಹೂರ್ತ ದೃಶ್ಯಕ್ಕೆ ದಯಾನಂದ್ ಕ್ಲಾಪ್ ಮಾಡಿದರು, ಮಂಜು ನಾಥ್ ಕ್ಯಾಮೆರಾ ಚಾಲನೆ ಮಾಡಿದರು.

ಮೊದಲ ದೃಶ್ಯವನ್ನು ಗುರೂಜಿ ಅವರ ಮೇಲೆ ಚಿತ್ರೀಕರಿಸಲಾಯಿತು, ಜಿ.ಸಿನಿ ಮಾಸ್ ಮೂಲಕ ನಿರ್ದೇಶಕ ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜತೆಗೆ ಕ್ರಿಯೇಟಿವ್ ಹೆಡ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಈ  ಚಿತ್ರದ ಮೂರು ಹಾಡುಗಳಿಗೆ ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನ ವಿದೆ. ನಿರ್ದೇಶಕ ಶಶಾಂಕ್ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ಈ ಶೀರ್ಷಿಕೆಯನ್ನು ಕೇಳಿದಾ ಗಲೇ ಇದೊಂದು ಲವ್ ಸ್ಟೋರಿ ಅನ್ನುವುದು ಗೊತ್ತಾಗುತ್ತದೆ.

ನನಗೆ ತುಂಬಾ ಹತ್ತಿರದ ನಿರ್ದೇಶಕರು ಮಾಡಿದ ಕಥೆಯಿದು, ಎಲ್ಲರೂ ಮದುವೆಗೆ ಮುಂಚಿನ ಲವ್‌ಸ್ಟೋರಿಯನ್ನು ಹೇಳುತ್ತಾರೆ. ಆದರೆ ಇಲ್ಲಿ ಮದುವೆಯಾದ ನಂತರವೂ ಯಾಕೆ ಪ್ರೀತಿಸಬಾರದು ಎಂದು ತೋರಿಸುತ್ತಿರುವುದಲ್ಲದೆ, ಮದುವೆಯಾದ ಹೊಸದ ರಲ್ಲಿ ನಾವು ಜೀವನದಲ್ಲಿ ಕೆಲವೊಂದು ಘಟನೆಗಳನ್ನು ಎದುರಿಸಬೇಕಾಗುತ್ತದೆ, ಅದು ಯಾವ ರೀತಿ ಇರುತ್ತೆ ಎಂಬುದನ್ನು ಹ್ಯೂಮರಸ್ ಆಗಿ ಚಿತ್ರದಲ್ಲಿ ಹೇಳಲಾಗಿದೆ. ಅಲ್ಲದೆ ರಚಿತಾರಾಮ್ ಅವರ ಜತೆ ಮೊದಲ ಬಾರಿಗೆ ನಟಿಸುತ್ತಿದ್ದೇನೆ.

ರೊಮ್ಯಾಂಟಿಕ್ ಕಥೆಯ ಜತೆಗೆ ಒಂದು ಥ್ರಿಲ್ಲಿಂಗ್ ಎಳೆ ಕೂಡ ಈ ಸಿನಿಮಾದಲ್ಲಿದೆ. ಅದೇ ಚಿತ್ರದ ಕ್ಯೂರಿಯಾಸಿಟಿ ಎನ್ನುತ್ತಾರೆ ಅಜಯ್ ರಾವ್ ಶೀರ್ಷಿಕೆ ಕೇಳಿದಾಗಲೇ ನನಗೆ ಖುಷಿಯಾಯಿತು. ನನ್ನ ಸಹಿಯೇ ಚಿತ್ರದ ಶೀರ್ಷಿಕೆ ವಿನ್ಯಾಸ ಆಗಿದೆ. ಕಥೆ ಕೇಳಿದ ತಕ್ಷಣ ಈ ಪಾತ್ರ ಮಾಡಲು ಒಪ್ಪಿಕೊಂಡೆ. ನಾಲ್ಕೆೆದು ವರ್ಷಗಳಿಂದ ನಾನು ಅಜಯ್‌ರಾವ್ ಕಾಂಬಿನೇಷನ್‌ನಲ್ಲಿ ಅಭಿನಯಿಸ ಬೇಕು ಅಂದುಕೊಂಡಿದ್ದೆ, ಈಗ ಅದು ಸಾಧ್ಯವಾಯಿತು.

ನಮ್ಮಿಬ್ಬರಿಗೂ ಈ ಪಾತ್ರ ಹೇಳಿ ಮಾಡಿಸಿದಂತಿದೆ. ಮನರಂಜನೆಗೇನೂ ಮೋಸವಿಲ್ಲ ಎಂದು ನಗು ಬೀರಿದರು ರಚಿತಾ.

Leave a Reply

Your email address will not be published. Required fields are marked *