Saturday, 10th May 2025

ಹೆಲ್ತ್- ವೆಲ್ತ್ : ಕೇಸರಿ

ಜಗತ್ತಿನ ಅತ್ಯಂತ ದುಬಾರಿ ಸಂಬಾರ ಪದಾರ್ಥ ಎಂದು ಗುರುತಿಸಿಕೊಂಡಿರುವ ಕೇಸರಿಯು, ನಮ್ಮ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡಬಲ್ಲದು. ಕ್ರೋಕಸ್ ಸಾಟಿವಸ್ ಎಂಬ ಸಸ್ಯದ ಹೂವಿನಿಂದ ಕೇಸರಿಯನ್ನು ಸಂಗ್ರಹಿಸಲಾಗುತ್ತದೆ.

ಮೂಲತಃ ಇರಾನ್ ಮತ್ತು ಮೆಸಪೋಟಮಿಯಾ ಪ್ರದೇಶದ ಈ ಸಸ್ಯವು ಬಹು ಹಿಂದೆಯೇ ವಿವಿಧ ದೇಶಗಳಿಗೆ ಹರಡಿತು. ಈಗ ಏಷ್ಯ, ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಇತರ ಹಲವು ಪ್ರದೇಶಗಳಲ್ಲಿ ಇದನ್ನು ಬೆಳೆಯುತ್ತಾರೆ. ಕೇಸರಿಯ ಸುವಾಸನೆಗೆ ಅದರಲ್ಲಿರುವ ಕೆಲವು ರಸಾಯನಿಕಗಳು ಕಾರಣ. ಪಿಕ್ರೋ ಕ್ರೋಸಿನ್, ಸಫೆನಾಲ್ ಮೊದಲಾದ ಸಂಯುಕ್ತಗಳ ಹೊರಸೂಸುವ ಸುಗಂಧವು, ಕೇಸರಿಗೆ ಜಗತ್‌ಖ್ಯಾತಿ ಯನ್ನು ಒದಗಿಸಿಕೊಟ್ಟಿದೆ.

ಇಂದು ಇರಾನ್ ದೇಶವು ಜಗತ್ತಿನ ಶೇ.೫೦ರಷ್ಟು ಕೇಸರಿಯನ್ನು ಉತ್ಪಾದಿಸುತ್ತದೆ. ನಮ ದೇಶದ ಕಾಶ್ಮೀರ ಪ್ರದೇಶದಲ್ಲೂ ಸಣ್ಣ ಪ್ರಮಾಣದಲ್ಲಿ ಕೇಸರಿಯ ಉತ್ಪಾದನೆಯಾಗುತ್ತದೆ. ಒಂದು ಕಿಲೊ ಕೇಸರಿಯ ಬೆಲೆಯು ಇಂದು ಸುಮಾರು ರು.೭೦,೦೦೦ ದಿಂದ ಆರಂಭಗೊಂಡು, ರು.೨.೦೦ ಲಕ್ಷದ ತನಕ ಇದೆ.

? ಕೇಸರಿಯು ಉತ್ತಮ ಆಂಟಿ ಆಕ್ಸಿಡೆಂಟ್. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಳಗೊಳ್ಳುತ್ತದೆ.
? ಕೇಸರಿಯ ಸುಗಂಧವು ಮಿದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದರಿಂದ, ಮೂಡ್‌ನ್ನು ಉತ್ತಮಗೊಳಿಸಬಲ್ಲದು.
? ಖಿನ್ನತೆಯನ್ನು ಹೊಡೆದೋಡಿಸಲುಕೇಸರಿಯ ಬಳಕೆ ಇದೆ.ಕಡಿಮೆ ಪ್ರಮಾಣದ ಖಿನ್ನತೆಯನ್ನು ಇದು ಸುಲಭವಾಗಿ ದೂರಮಾಡಬಲ್ಲದು.
? ಕೆಲವು ಅಧ್ಯಯನಗಳ ಪ್ರಕಾರ,ಕೇಸರಿಯ ನಿಯಮಿತ ಸೇವನೆಯುಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಫ್ರೀ ರ‍್ಯಾಡಿಕಲ್ಸ್ ವಿರುದ್ಧ ಹೋರಾಡಲು ಸಹಕಾರಿ.
? ಹಸಿವನ್ನುಕಡಿಮೆ ಮಾಡಿ, ಆಹಾರ ಸೇವನೆಯನ್ನು ಕಡಿಮೆಗೊಳಿಸಬಲ್ಲಕೇಸರಿಯ ಸೇವನೆಯಿಂದಾಗಿ, ಅಽಕ ತೂಕ ಇರುವವರು ತೂಕಕಡಿಮೆ
ಮಾಡಿಕೊಳ್ಳಬಹುದು.

? ವೃದ್ಧರಲ್ಲಿ ತಲೆದೋರುವ ದೃಷ್ಟಿದೋಷವನ್ನುಕೇಸರಿ ಸೇವನೆಯಿಂದ ಶಮನ ಮಾಡಬಹುದು.

Leave a Reply

Your email address will not be published. Required fields are marked *