Wednesday, 14th May 2025

ಗೋವಾದಲ್ಲಿ ಕಾವ್ಯಾಂಜಲಿ

ಕಿರುತೆರೆ ಪ್ರಿಯರ ‘ಕಾವ್ಯಾಂಜಲಿ’ 150 ಸಂಚಿಕೆಗಳನ್ನು ಪೂರೈಸಿದೆ. ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ‘ಕಾವ್ಯಾಂಜಲಿ’ ತಂಡವು ವೀಕ್ಷಕರಿಗೆ ಸ್ಪೆಷಲ್ ಗಿಫ್ಟ್ ಕೊಡಲು ಸಜ್ಜಾಗಿದೆ.

ಪ್ರೇಮಿಗಳ ನೆಚ್ಚಿನ ತಾಣವಾದ ಗೋವಾದಲ್ಲಿ ‘ಕಾವ್ಯಾಂಜಲಿ ಲವ್ ಇನ್ ಗೋವಾ’ ಅನ್ನುವ 2 ವಾರಗಳ ವಿಶೇಷ ಸಂಚಿಕೆಗಳನ್ನ ಪ್ರಸಾರ ಮಾಡುತ್ತಿದೆ. ಈ ವಿಶೇಷ ಸಂಚಿಕೆಯಲ್ಲಿ ಪ್ರೇಮಿಗಳ ದಿನದ ಸಂಭ್ರಮಾಚರಣೆಯನ್ನು ಕೈಗೊಳ್ಳಲಾಗಿದೆ. ಬೀಚ್ ಹತ್ತಿರ ನೂರಾರು ಆಕಾಶ ದೀಪಗಳನ್ನುಬಳಸಿಕೊಂಡು ದಂಪತಿಗಳಿಂದ ರೋಮ್ಯಾಂಟಿಕ್ ನೃತ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ಇನ್ನು ಇಬ್ಬರು ಜೋಡಿಗಳ ಪ್ರೀತಿಯ ತಪೊಪ್ಪಿಗೆ ಈ ವಿಶೇಷ ಕಂತುಗಳಲ್ಲಿ ಪ್ರಮುಖವಾಗಿದೆ. ಅಲ್ಲದೇ ಚರ್ಚ್, ದೇವಾಲಯಗಳ ಭೇಟಿ ಹಾಗೂ ಪಣಜಿ ಸೇತುವೆ ಬಳಿ ವಿಶೇಷ ವಿಹಾರ ನೌಕೆಯಲ್ಲಿ ಹೊಸ ನಾಯಕಿಯ ಪರಿಚಯ ನಡೆಯಲಿದೆ. ಅಂಜಲಿ, ಸುಶಾಂತ್ ಒಂದು ಮಾಡುವುದಕ್ಕೆ ಕಾವ್ಯಾ, ಸಿದ್ಧಾರ್ಥ ಪರದಾಟ, ಕಾವ್ಯಾ, ಸಿದ್ದಾರ್ಥನನ್ನು ಒಂದು ಮಾಡುವುದಕ್ಕೆ ಅಂಜಲಿ, ಸುಶಾಂತ್ ಒದ್ದಾಟದ ಮಜಲುಗಳ ಜತೆ ಬೆಳ್ಳಿತೆರೆಯ ಹಿರಿಯ ಹಾಸ್ಯಕಲಾವಿದರಾದ ಟೆನ್ನಿಸ್ ಕೃಷ್ಣ ಹಾಗೂ ರೇಖಾದಾಸ್ ವಿಭಿನ್ನಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸುಪ್ರಸಿದ್ಧ ತಾಣಗಳಲ್ಲದೆ ಗೋವಾದ ಸಂಸ್ಕೃತಿಯನ್ನು ಕೂಡ 2 ವಾರದ ಕಥೆಯಲ್ಲಿ ಕಾಣಬಹುದು. ಬಿಸಿಲ ಬೇಗೆಯಲ್ಲೂ ಸಹಕಲಾವಿದರು ಹಾಗೂ ತಂತ್ರಜ್ಞರು ಗೋವಾ ಬೀಚ್‌ನಲ್ಲಿ ಉತ್ಸಾಹದಿಂದ ಶೂಟಿಂಗ್ ನಡೆಸಿದ್ದಾರೆ.

Leave a Reply

Your email address will not be published. Required fields are marked *