Thursday, 15th May 2025

ಜಗ್ಗೇಶ್ ಅವರಿಗೆ ಸಂಭಾವನೆಯನ್ನೇ ಕೊಡಲಿಲ್ಲವಂತೆ ನಿರ್ಮಾಪಕರು !

ನವರಸ ನಾಯಕ ಜಗ್ಗೇಶ್ ತಮ್ಮ ಜೀವನದಲ್ಲಿ ತಮಗಾದ ಕೆಲವು ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಳ್ಳುತ್ತಾರೆ. ಈ ಬಾರಿಯೂ ಕೂಡ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ.

ಅದು ತಮಗೆ ಸಂಭಾವನೆಯನ್ನೇ ನೀಡದ ನಿರ್ಮಾಪಕರ ಬಗ್ಗೆ. 1990ರ ದಶಕದಲ್ಲಿಯೇ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿದ್ದರು. ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದರು. ಆ ಸಮಯದಲ್ಲಿ ಜಗ್ಗಣ್ಣ ನಟಿಸಿದ ಹಿಟ್ ಚಿತ್ರಗಳಲ್ಲಿ ರಾಯರ ಮಗ ಕೂಡ ಒಂದು. ಹಿರಿಯ ನಟರಾದ ರಾಜೇಶ್, ಶ್ರೀನಾಥ್, ನಟಿ ಲಕ್ಷ್ಮಿ ಹೀಗೆ ದೊಡ್ಡ ತಾರಾ ಬಳಗವೇ ಇದ್ದ ಈ ಚಿತ್ರದಲ್ಲಿ ಜಗ್ಗಣ್ಣ ನಾಯಕನಾಗಿ ಬಣ್ಣಹಚ್ಚಿದ್ದರು.

ಕೌಟುಂಬಿಕ ಕಥೆಯ ಈ ಚಿತ್ರ ಯಶಸ್ವಿಯೂ ಆಗಿತ್ತು. ಆದರೆ ಈ ಚಿತ್ರದಲ್ಲಿ ನಟಿಸಿದ್ದಕ್ಕೆ ನಿರ್ಮಾಪಕರು ಸಂಭಾವನೆಯನ್ನೇ ನೀಡಲಿಲ್ಲವಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. 1994 ರಾಯರ ಮಗ ಚಿತ್ರ. ಇಂದಿನ ಪೊಗರು
ನಿರ್ಮಾಪಕ ಗಂಗಾಧರ ಅವರ ತಂದೆ ಈ ಚಿತ್ರದ ವಿತರಕರು. ಅಂದಿನ ಮೆಗಾಹಿಟ್ ಚಿತ್ರ. ಆದರು ನನಗೆ ಸ್ವಂತ ಮನೆಯಿರಲಿಲ್ಲ 4000 ಬಾಡಿಗೆ ಮನೆಯಲ್ಲಿ ಇದ್ದೆ. ಈ ಚಿತ್ರದ ನಿರ್ಮಾಪಕ ನನಗೆ ಸಂಬಳ ಕೊಡದೆ ಮೋಸ ಮಾಡಿದ.

ಸಾಲ ಮಾಡಿ ಸಂಸಾರ ನಿಭಾಯಿಸುತ್ತಿದ್ದೆ. ಹಿಟ್ ಕೊಟ್ಟರು ಕಾಸಿಲ್ಲದೆ ಬರಿ ಹೆಸರಿಗೆ ಬದುಕಿದವರು ಅಂದು’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಸದ್ಯ ಜಗ್ಗೇಶ್ ತೋತಾಪುರಿ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಬಳಿಕ ಕಮಲಾಕರ ಚಿತ್ರದಲ್ಲಿ ಬ್ಯುಸಿ ಯಾಗಲಿದ್ದಾರೆ.

Leave a Reply

Your email address will not be published. Required fields are marked *