Wednesday, 14th May 2025

ಐತಿಹಾಸಿಕ ಪಾತ್ರವೇ ನನಗಿಷ್ಟ

ಹಿಂದೆ ಬಾಲ ಕಲಾವಿದೆಯಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ನಟಿ ಬಿಂದುಶ್ರೀ, ಈಗ ನಾಯಕಿಯಾಗಿ ಮತ್ತೆ ನಟನೆಗೆ ಮರಳಿ ದ್ದಾರೆ.

ಗ್ಲಾಮರ್ ಲೋಕದಲ್ಲೂ ಸಂಸ್ಕೃತಿಯನ್ನು ಬಿಂಬಿಸುವ ಪಾತ್ರವೇ ಬೇಕು ಎಂಬುದು ಬಿಂದ್ರಶ್ರೀ ಬಯಕೆಯಾಗಿದೆ. ಮೆಚ್ಚಿನ ಪಾತ್ರಗಳ ಬಗ್ಗೆ ಮಾತು ಆರಂಭಿಸಿದ ಚನ್ನಗಿರಿ ಚೆಲುವೆ ಬಿಂದುಶ್ರೀ, ಬಾಲ್ಯದಲ್ಲಿಯೇ ಸಿನಿಮಾದಲ್ಲಿ ಅಭಿನಯಿಸುವ ಆಸೆಯಿತ್ತು. ನನ್ನ ಅಜ್ಜಿ ಇದಕ್ಕೆ ಪ್ರೇರಣೆ ನೀಡುತ್ತಿದ್ದರು.

ಅದರಿಂದಲೇ ಬಾಲನಟಿಯಾಗಿ ‘ಶ್ರೀರಸ್ತುಶುಭಮಸ್ತು’, ‘ಶಿವಪ್ಪನಾಯಕ’, ‘ಪ್ರೀತ್ಸೋದ್‌ತಪ್ಪ’ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದೆ. ‘ಕಾವ್ಯಾಂಜಲಿ’,  ‘ಗೌತಮಿ’ ಧಾರವಾಹಿಗಳಲ್ಲೂ ಅಭಿನಯಿಸಿದೆ. ಬಳಿಕ ವ್ಯಾಸಾಂಗಕ್ಕಾಗಿ ಚಿತ್ರರಂಗ ದಿಂದ ದೂರ ಉಳಿದೆ. ಅಪ್ಪ ಅಮ್ಮನ ಆಸೆಯಂತೆ ಇಂಜಿನಿರಿಂಗ್ ಪೂರ್ಣಗೊಳಿಸಿದೆ. ಕೈತುಂಬಾ ಸಂಬಳ ನೀಡುವ ನೌಕರಿ ಸಿಕ್ಕರೂ ನನಗೆ ನಟನೆಯಲ್ಲಿಯೇ ಆಸಕ್ತಿಯಿತ್ತು.

ಹಾಗಾಗಿ ಮನೆಯವರ ಮನವೊಲಿಸಿ ಮತ್ತೆ ನಟನೆಗೆ ಮರಳಿದ್ದೇನೆ. ಇದರ ಪರಿಣಾಮವೇ ’ಮಹಿಷಾಸುರ’ ಚಿತ್ರದಲ್ಲಿ ನಟಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಮತ್ತೆ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಸಂತಸ ತಂದಿದೆ ಎನ್ನುತ್ತಾರೆ
ಬಿಂದು ಶ್ರೀ.’ಮಿ. ಅಂಡ್ ಮಿಸಸ್ ಜಾನು’ಚಿತ್ರದಲ್ಲಿ ಬ್ಯುಸಿ ಇದ್ದು, ಇನ್ನು ಮೂರು ಕಥೆಗಳನ್ನು ಕೇಳಿದ್ದೇನೆ.

ಮಾತುಕತೆ ನಡೆಯುತ್ತಿದೆ. ಮರಳಿ ಬಣ್ಣದ ಲೋಕಕ್ಕೆ ಬಂದದ್ದು ಸಂತಸ ತಂದಿದೆ ಎನ್ನುತ್ತಾರೆ ಬಿಂದುಶ್ರೀ.

Leave a Reply

Your email address will not be published. Required fields are marked *