Saturday, 10th May 2025

ದೈವಂ ಮಾನುಷ ರೂಪೇಣ

* ನಳಿನಿ. ಟಿ. ಭೀಮಪ್ಪ

ಕಳೆದ ತಿಂಗಳು ರಾಘವೇಂದ್ರ ಗುರುಗಳ ದರ್ಶನಕ್ಕೆೆಂದು ಮಂತ್ರಾಾಲಯಕ್ಕೆೆ ಹೋಗಿದ್ದೆೆವು. ಅಂದು ರಾತ್ರಿಿ ಬೃಂದಾವನ ಮಾಡಿ, ಅನ್ನ ಪ್ರಸಾದ ಸೇವಿಸಿ ರೂಮಿಗೆ ವಾಪಸಾದೆವು. ಮರುದಿನ ಏಕಾದಶಿ ಇದ್ದುದ್ದರಿಂದ ಪೂಜೆಯೂ ಇಲ್ಲ, ಅನ್ನ ಪ್ರಸಾದದ ವ್ಯವಸ್ಥೆೆ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.

ಮರುದಿನ ಏಕಾದಶಿ ಇದ್ದರೂ ಕಾಲಿಡಲು ಜಾಗವಿಲ್ಲದಷ್ಟು ಜನಸಾಗರ. ಕ್ಯೂ ನಿಂತು ಮತ್ತೊೊಮ್ಮೆೆ ದರ್ಶನ ಮಾಡಿಕೊಂಡು, ಊರಿಗೆ ತೆಗೆದುಕೊಂಡು ಹೋಗಲು ಲಡ್ಡು ಪ್ರಸಾದಕ್ಕಾಾಗಿ ಕ್ಯೂ ನಿಂತೆವು. ನಮ್ಮ ಸರದಿ ಇನ್ನೇನು ಬರುತ್ತದೆ ಎನ್ನುವ ಹೊತ್ತಿಿಗೆ ಪ್ರಸಾದ ಖಾಲಿ ಎಂದು ಅಲ್ಲಿನ ಸಿಬ್ಬಂದಿ ಶಟರ್ ಇನ್ನೂ ತುಂಬಾ ಜನಕ್ಕೆೆ ಪ್ರಸಾದ ಸಿಕ್ಕಿಿರಲಿಲ್ಲ. ಎಲ್ಲರೂ ಗಲಾಟೆ ಮಾಡತೊಡಗಿದರು. ನಮ್ಮ ಯಜಮಾನರು ಪ್ರಸಾದ ಸಿಕ್ಕ ಒಂದಿಬ್ಬರ ಹತ್ತಿಿರ ಹೋಗಿ ಐದು ಲಡ್ಡುಗಳ ಪ್ಯಾಾಕಿನಲ್ಲಿರುವುದರಲ್ಲಿ ಒಂದಾದರೂ ಕೊಡಿ, ದೂರದಿಂದ ಬಂದಿದ್ದೇವೆ ಎಂದು ಕೇಳಿಕೊಂಡರು. ಎಲ್ಲರಿಗೂ ಅದರ ಅವಶ್ಯಕತೆ ಇದ್ದುದರಿಂದ ನಯವಾಗಿ ನಿರಾಕರಿಸಿದರು. ಸುಮ್ಮನೆ ಪೆಚ್ಚುಮೋರೆ ಹಾಕಿಕೊಂಡು ಕಾರಿನ ಹತ್ತಿಿರ ನಡೆಯಲು ಸಜ್ಜಾಾದೆವು.

ಅಷ್ಟರಲ್ಲಿ ‘ಸಾರ್, ಸಾರ್’ ಎಂದು ಯಾರೋ ಜೋರಾಗಿ ಕೂಗುವುದು ಕೇಳಿಸಿತು. ತಿರುಗಿ ನೋಡಿದರೆ ಒಬ್ಬರು ಪ್ರಸಾದದ ಪ್ಯಾಾಕನ್ನು ಹಿಡಿದು ನಮ್ಮತ್ತ ಓಡಿ ಬರುತ್ತಿಿದ್ದರು. ಅದನ್ನು ಯಜಮಾನರ ಕೈಗಿಟ್ಟು, ನೀವು ಅಲ್ಲಿ ಪ್ರಸಾದ ಕೇಳುತ್ತಿಿದ್ದನ್ನು ನೋಡಿದೆ, ನಾವು ಒಂದು ಪ್ಯಾಾಕ್ ಎಕ್ಸ್ಟ್ರಾಾ ಪ್ರಸಾದವನ್ನು ತೆಗೆದುಕೊಂಡಿದ್ದೆೆವು, ನಾವು ಇರುವುದರಲ್ಲಿ ಅಡ್ಜಸ್‌ಟ್‌ ಮಾಡಿಕೊಳ್ಳುತ್ತೇವೆ, ನೀವು ಇದನ್ನು ತೆಗೆದುಕೊಂಡು ಹೋಗಿ ಎಂದು ಹೊರಟರು. ಪ್ರಸಾದ ಹಾಗೇ ಪಡೆಯಬಾರದು ದುಡ್ಡು ತೆಗೆದುಕೊಳ್ಳಿಿ ಎಂದು ಯಜಮಾನರು ಕೂಗುತ್ತಿಿದ್ದರೂ, ಇರಲಿ ಬಿಡಿ ಎನ್ನುತ್ತಾಾ ಜನಸಾಗರದಲ್ಲಿ ಕರಗಿಯೇ ಹೋದರು.
ಅಂದು ಪ್ರಸಾದ ಸಿಗಲು ಸಾಧ್ಯವೇ ಇಲ್ಲವೆಂಬ ನಿರಾಸೆಯಲ್ಲಿದ್ದ ರಾಘವೇಂದ್ರ ಗುರುಗಳೇ ಮಾನವನ ರೂಪದಲ್ಲಿ ಬಂದು ಪ್ರಸಾದ ಕೊಟ್ಟು ಹೋದರೇನೋ ಎನ್ನಿಿಸಿಬಿಟ್ಟಿಿತು. ದೈವೀರೂಪದಲ್ಲಿ ಸಿಕ್ಕ ಆ ಅಚ್ಚರಿಯ ಉಡುಗೊರೆಯನ್ನು ಪಡೆದ ನಾವು ಧನ್ಯ ಎನಿಸಿತು. ಈ ಘಟನೆಯನ್ನು ತಂಗಿ ಫೋನಿನ ಮೂಲಕ ಹೇಳುವಾಗ ನನ್ನ ಮನಸೂ ಸಹ ‘ದೈವಂ ಮಾನುಷ ರೂಪೇಣ’ ಎನ್ನುವುದನ್ನು ನೆನೆದು ಪುಳಕಿತವಾಯಿತು.

Leave a Reply

Your email address will not be published. Required fields are marked *