Wednesday, 14th May 2025

ಗ್ಲಾಮರ್‌’ನಲ್ಲೇ ಮನಸೆಳೆದ ಲಕ್ಕಿ ಗರ್ಲ್‌ ಅನಿತಾ ಭಟ್‌

ಸೈಕೋ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಬೆಡಗಿ ಅನಿತಾ ಭಟ್. ಗ್ಲಾಮರ್ ಗೊಂಬೆಯಾಗಿ ಗಮನ ಸೆಳೆದ ಅನಿತಾ, ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದರು. ಚಿತ್ರರಂಗಕ್ಕೆ ಬಂದು ಹನ್ನೆರಡು ವರ್ಷಗಳೇ ಕಳೆದಿವೆ. ಆದರೂ ಅನಿತಾಭಟ್‌ಗೆ ಅದೇ ಬೇಡಿಕೆ ಇಂದಿಗೂ ಇದೆ. ಈ ಬೆಡಗಿ ಅಭಿನಯದ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

ಮತ್ತಷ್ಟು ಚಿತ್ರಗಳಲ್ಲಿ ನಟಿಸಲು ರೆಡಿಯಾಗುತ್ತಿದ್ದಾರೆ. ಅದು ಮುಖ್ಯಪಾತ್ರಗಳಲ್ಲಿ. ವಿಶೇಷ ಎಂದರೆ ವಿಭಿನ್ನ ಲುಕ್. ವಿಭಿನ್ನ ಪಾತ್ರದಲ್ಲಿಯೇ ಮಿಂಚಿದ್ದಾರೆ. ಸೈಕೋ ಚಿತ್ರದಿಂದ ಶುರುವಾದ ಅನಿತಾ ಸಿನಿ ಜರ್ನಿ, ಇಂದಿಗೂ ಸಾಗಿದೆ. ಹಳ್ಳಿ ಹುಡುಗಿಯ ಪಾತ್ರಕ್ಕೂ ಸೈ, ಗ್ಲಾಮರಸ್ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ ಅನಿತಾಭಟ್. ಗನ್‌ಹಿಡಿದ ಅನಿತಾ ಅನಿತಾಭಟ್ ನಟನೆಯ ಬೆಂಗಳೂರು 69 ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಯಾಗಿದ್ದು, ಕ್ಯೂರಿಯಾಸಿಟಿ ಮೂಡಿಸಿದೆ. ಚಿತ್ರದ ಹಾಡೊಂದರಲ್ಲಿ ಅನಿತಾ, ಫುಲ್ ಗ್ಲಾಮರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಇದನ್ನು ನೋಡಿದ ಸಿನಿಪ್ರಿಯರು ಇದು ಪಕ್ಕಾ ಲವ್‌ಸ್ಟೋರಿಯ ಚಿತ್ರವೇ ಇರಬೇಕು ಎಂದುಕೊಂಡಿದ್ದಾರೆ. ಆದರೆ ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್ ಕಥೆಯ ಚಿತ್ರ. ಮೂರು ಪಾತ್ರಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಆಕ್ಷನ್ ಇದ್ದರೂ ತೀರ ಹೊಡಿಬಡಿ ದೃಶ್ಯಗಳು ಚಿತ್ರದಲ್ಲಿ ಇಲ್ಲ. ಸ್ಪೆೆಷಲ್ ಗೆಟಪ್‌ನಲ್ಲಿ ಅನಿತಾ ಗನ್ ಹಿಡಿದು ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರು 69 ಚಿತ್ರದಲ್ಲಿನ ಪಾತ್ರ ನನಗೆ ಖುಷಿ ತಂದಿದೆ. ಪ್ರೇಕ್ಷಕರು ಗುರುತಿಸುವ ಪಾತ್ರ ಇದಾಗಿದೆ ಎನ್ನುತ್ತಾರೆ ಅನಿತಾ.
ಕಲಿವೀರನ ಲೇಡಿಡಾನ್ ಕಲಿವೀರನ ಜತೆಯಾದ ಅನಿತಾ ನಾಯಕಿಯಾಗಿ ನಟಿಸಿದ್ದು, ಸ್ವಲ್ಪ ಡಿಫರೆಂಟ್ ಗೆಟಪ್‌ನಲ್ಲಿ  ಕಾಣಿಸಿ ಕೊಂಡಿದ್ದಾರೆ. ಇಲ್ಲಿ ಲೇಡಿ ಡಾನ್ ಆಗಿ ಅಬ್ಬರಿಸಲಿದ್ದಾಾರೆ. ಕಲಿವೀರನಿಗೆ ಕೊಂಚ ಅಂಡರ್‌ವಲ್ಡ್ ಕಥೆಯ ಸ್ಪರ್ಶವಿದೆ. ಹಾಗಾಗಿ ಇಲ್ಲಿ ಆಕ್ಷನ್‌ಗೆ ಹೆಚ್ಚು ಒತ್ತು ನೀಡಲಾಗಿದೆ. ಸಾಹಸಕ್ಕಾಗಿ ತರಬೇತಿ ಪಡೆದಿರುವ ಅನಿತಾ, ತಾವೇ ಫೈಟ್ ಮಾಡಿದ್ದಾರೆ.

ಚೇಸ್ ಮಾಡಿದ್ದಾರೆ. ಆ ಮೂಲಕ ಆಕ್ಷನ್‌ಗೂ ಸೈ ಎನಿಸಿಕೊಂಡಿದ್ದಾರೆ. ಈ ಚಿತ್ರದ ಜತೆಗೆ ಜೆನಿಟಿಕ್ ಕಥೆಯನ್ನು ಒಳಗೊಂಡ ಡಿಎನ್‌ಎ ಚಿತ್ರದಲ್ಲೂ ಅನಿತಾ ಸಿಂಪಲ್ ಹುಡುಗಿಯಾಗಿ ಬಣ್ಣಹಚ್ಚಿದ್ದಾರೆ. ಡಿಎನ್‌ಎ, ಎರಡು ಕುಟುಂಬಗಳ ನಡುವೆ ನಡೆ ಯುವ ಕಥೆಯಾಗಿದೆ. ಈ ಎರಡು ಕುಟುಂಬಗಳ ನಡುವೆ ಬೆಸುಗೆ ಬೆಸೆಯುವ ಪಾತ್ರದಲ್ಲಿ ಅನಿತಾ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರದಲ್ಲಿ ಬಣ್ಣಹಚ್ಚಿದ್ದರೂ, ಇದು ಕಥೆಗೆ ಒಂದು ತಿರುವು ಕೊಡುವ ಪ್ರಮುಖ ಪಾತ್ರವಂತೆ.

ಹಳ್ಳಿಹುಡುಗಿಯ ಪಾತ್ರವೇ ಇಷ್ಟ ಗ್ಲಾಮರ್‌ನಲ್ಲೇ ಕಣ್ ಸೆಳೆಯುವ ಅನಿತಾಗೆ ಹಳ್ಳಿ ಹುಡುಗಿ ಯಾಗಿ ನಟಿಸಬೇಕೆಂಬ ಆಸೆಯಂತೆ. ಈ ಹಿಂದೆ ಡೇಸ್ ಆಪ್ ಬೋರಾಪುರ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ, ಅವತಾರ ತಾಳಿದ್ದ ಅನಿತಾ, ಮುಂದೆ ನಟಿಸುವ ಚಿತ್ರಗಳ ಲ್ಲಿಯೂ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಬೇಕು. ಅದರ ಜತೆಗೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಬೇಕೆಂಬ ಹಂಬಲ ವ್ಯಕ್ತ ಪಡಿಸಿದ್ದಾರೆ. ಅಂತಹ ಪಾತ್ರಗಳಿಗಾಗಿ ಕಾಯುತ್ತಿದ್ದಾ ರಂತೆ.

ಜೂಟಾಟ ಆಡಲು ರೆಡಿ

ಇದೆಲ್ಲದರ ಜತೆಗೆ ಅನಿತಾ ತೆರೆಯಲ್ಲಿ ಜೂಟಾಟ ಆಡಲು ರೆಡಿಯಾಗಿದ್ದಾರೆ. ಹಳ್ಳಿಯಿಂದ ಬರುವ ಮೂವರು ಮುಗ್ಧ ಹುಡುಗರ ಹುಡುಗಾಟದ ಕಥೆಯೇ ಜೂಟಾಟ. ಈ ಮೂವರು ಹುಡುಗರನ್ನು ಆಟ ಆಡಿಸುವ ಪಾತ್ರದಲ್ಲಿ ಗಮನ ಸೆಳೆದಿದ್ದು, ತುಂಟಾಟದ ಹುಡುಗಿಯಾಗಿ ಅನಿತಾ ಮಿಂಚಿದ್ದಾರೆ. ಈ ಎಲ್ಲಾ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಿದ್ಧವಾಗಿವೆ.

 

 

 

 

Leave a Reply

Your email address will not be published. Required fields are marked *