Tuesday, 13th May 2025

ಸಂಚಾರಿ ಸೌರ ಮೇಲ್ಛಾವಣಿ

ಟೆಕ್‌ ಸೈನ್ಸ್

ಎಲ್‌.ಪಿ.ಕುಲಕರ್ಣಿ

ಈ ವರ್ಷ ಬಿಸಿಲು ಜಾಸ್ತಿ. ಈ ರೀತಿ ಬಿಸಿಲು ಕಾಯುವಾಗ, ಅದನ್ನು ಲಾಭದಾಯಕವಾಗಿ ಉಪಯೋಗಿಸಿಕೊಳ್ಳುವ ಒಂದೇ ಅವಕಾಶವೆಂದರೆ ಸೌರ ವಿದ್ಯುತ್ ಉತ್ಪಾದನೆ. ಈಗ ಸಂಚಾರಿ ಸೌರ ವಿದ್ಯುತ್ ಮೇಲ್ಛಾವಣಿ ವ್ಯವಸ್ಥೆಯನ್ನು ಗುಜರಾತ್‌ನಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಬೇರೆ ಕಡೆಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.

ಭಾರತದಲ್ಲಿ ಕಳೆದ ಸುಮಾರು ಒಂದುವರೆ ಶತಮಾನಗಳಲ್ಲಿ ಬಿಸಿಲ ತಾಪದದ ಹೆಚ್ಚಳದ ದಾಖಲೆ ೨೦೨೨ ರ ಏಪ್ರಿಲ್ -ಮೇ ತಿಂಗಳು ತೋರಿಸುತ್ತಿದೆ. ಇದು ಸರ್ವಕಾಲಿಕ ದಾಖಲೆ ಎನಿಸುತ್ತಿದೆ. ಹೆಚ್ಚು ಬಿಸಿಲು ಇದ್ದಾಗ ಒಂದು ಲಾಭವನ್ನು ಮಾಡಿಕೊಳ್ಳಬಹುದು. ಬಿಸಿಲು ಹೆಚ್ಚಿರುವ ಸ್ಥಳಗಳಲ್ಲಿ ಸೌರ ವಿದ್ಯುತ್ ಫಲಕಗಳನ್ನು ಬಳಸಿ ವಿದ್ಯುತ್‌ನ್ನು ತಯಾರಿಸಬಹುದು. ಆದರೆ, ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಸೌರ ಫಲಕಗಳಿಂದ ಕೂಡಿದರೆ ಹೇಗಿರುತ್ತದೆ?ಈ ನಿಟ್ಟಿನಲ್ಲಿ ಗುಜರಾತ ಸರ್ಕಾರ ಒಂದು ವಿನೂತನ ಕಾರ್ಯವನ್ನು ಮಾಡಿದೆ.

ಭಾರತದಲ್ಲಿ ಕಾರ್ಬನ್ ಫೂಟ್ ಪ್ರಿಂಟ್ (ಇಂಗಾಲದ ಹೆಜ್ಜೆಗುರುತು) ನ್ನು ಕಡಿಮೆ ಮಾಡಲು ನವೀಕರಿಸ ಬಹುದಾದ ಸಂಪನ್ಮೂಲಗಳ ಅಗತ್ಯವನ್ನು ಉಖಿಸಿ, ಮೊದಲ ಪೋರ್ಟಬಲ್ ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ಈಗ ಗುಜರಾತಿನ ಗಾಂಧಿ ನಗರದಲ್ಲಿ ಸ್ಥಾಪಿಸಲಾಗಿದೆ. ಹೊಸ ೧೦ ಪಿವಿ ಪೋರ್ಟ್ ವ್ಯವಸ್ಥೆಯನ್ನು ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ. ಕಡಿಮೆ ನಿರ್ವಹಣೆ ಅಗತ್ಯ ಮತ್ತು ಇದನ್ನು ಸುಲಭವಾಗಿ
ಒಬ್ಬ ವ್ಯಕ್ತಿಯಿಂದ ಸ್ಥಾಪಿಸಬಹುದಾಗಿದೆ.

ಜರ್ಮನಿಯ ಡೆವಲಪ್ಮೆಂಟ್ ಏಜೆನ್ಸಿಯಾದ ಡ್ಯೂಷೆ ಗೆಸೆಲ್ಶಾ- ಫಾರ್ ಇಂಟರ್ನ್ಯಾಶನಲ್ ಜುಸಮ್ಮೆನಾರ್ಬೀಟ್ (ಜಿ.ಐ.ಝಡ್) ಅಭಿವೃದ್ಧಿಪಡಿಸಿದ ೧೦ ಪಿವಿ ಪೋರ್ಟ್ ವ್ಯವಸ್ಥೆಯನ್ನು ಇತ್ತೀಚೆಗೆ ಗಾಂಧಿನಗರದ ಸ್ವಾಮಿನಾ ರಾಯಣ ಅಕ್ಷರಧಾಮ ದೇವಾಲಯದ ಸಂಕೀರ್ಣದಲ್ಲಿ ಸ್ಥಾಪಿಸಲಾಗಿದೆ. ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಉಪಕ್ರಮದಿಂದ ಇದನ್ನು ನೋಡಿಕೊಳ್ಳಲಾಗಿದೆ. ಪಿವಿ ಪೋರ್ಟ್ ವ್ಯವಸ್ಥೆಗಳು ಸ್ಟ್ಯಾಂಡರ್ಡ್ ಪ್ಲಗ್-ಅಂಡ್-ಪ್ಲೇ ದ್ಯುತಿವಿದ್ಯುಜ್ಜನಕ ವ್ಯವಸ್ಥೆಗಳಾಗಿದ್ದು, ಬ್ಯಾಟರಿ ಸಂಗ್ರಹಣೆಯೊಂದಿಗೆ ಅಥವಾ ಇಲ್ಲದೆಯೇ ಬರುವ ಕನಿಷ್ಠ ೨ ಕೆಡ್ಬ್ಲಯುಪಿ ಅನ್ನು ಒಳಗೊಂಡಿರುತ್ತದೆ.

ಪಿವಿ ಪೋರ್ಟ್ ವ್ಯವಸ್ಥೆಗಳನ್ನು ಶೇ.೧೦೦ ಸ್ವಯಂ-ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದರರ್ಥ ಗ್ರಿಡ್‌ಗೆ ಯಾವುದೇ ಶಕ್ತಿಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಶಕ್ತಿ ಮತ್ತು ಹೆಚ್ಚಿನ ದಕ್ಷತೆಯನ್ನು ತಲುಪಿಸಲು ಸೌರ ಫಲಕಗಳ ಕೆಳಗಿರುವ ಜಾಗವನ್ನು ಬಳಸಿಕೊಳ್ಳಲು ವ್ಯವಸ್ಥೆಗಳನ್ನು ವಿನ್ಯಾಸಗೊಳಿಸ ಲಾಗಿದೆ. ಈ ವ್ಯವಸ್ಥೆಯನ್ನು ಅಳವಡಿಸಿದಲ್ಲಿ, ಪ್ರತಿ ಕುಟುಂಬವು ಪ್ರತಿ ವರ್ಷ ವಿದ್ಯುತ್ ಬಿಲ್‌ನಲ್ಲಿ ಸರಾಸರಿ ೨೪,೦೦೦ ರೂ.ತನಕ ಉಳಿಸಲು ಸಾಧ್ಯ.
ಇಂತಹ ಸಹಯೋಗಗಳು ಮತ್ತು ಪರಿಣಾಮವಾಗಿ ಸಿನರ್ಜಿಗಳು ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜಿ.ಐ.ಝಡ್ ಭಾರತದಲ್ಲಿ ಭಾರತೀಯ ವಿದ್ಯುತ್ ವ್ಯವಸ್ಥೆ (ಐಫ್ಆರ್.ಇ) ಯೋಜನೆಯಲ್ಲಿದೆ. ಭಾರತೀಯ ಹವಾಮಾನಕ್ಕಾಗಿ ವಿನ್ಯಾಸಗೊಳಿಸಲಾದ ೧೦ ಪಿವಿ ಪೋರ್ಟ್ ಸಿಸ್ಟಮ್‌ಗಳನ್ನು ನವ ದೆಹಲಿ ಮೂಲದ ಕಂಪನಿ ಸರ್ವೋಟೆಕ್ ಪವರ್ ಸಿಸ್ಟಮ್ಸ ಲಿಮಿಟೆಡ್ ತಯಾರಿಸಿದೆ. ಇದು ಉನ್ನತ-ಮಟ್ಟದ ಸೌರ ಉತ್ಪನ್ನಗಳ ಪ್ರಮುಖ ತಯಾರಕರಲ್ಲಿ ಒಂದಾಗಿದೆ. ಕಂಪನಿಯು ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು
ಗಾಂಽನಗರದಾದ್ಯಂತ ಅಂತಹ ೪೦ ಪಿವಿ ಪೋರ್ಟ್ ಸಿಸ್ಟಮ್ ಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಕಂಪನಿಯು ಈಗಾಗಲೇ ಪಂಡಿತ್ ದೀನದಯಾಳ್ ಎನರ್ಜಿ ಯೂನಿವರ್ಸಿಟಿ, ಇಂದ್ರೋಡಾ ಪಾರ್ಕ್, ಎನ್‌ಐಎಫ್ಟಿ, ಆರ್ಯ ಭವನ, ಜಿಎಸ್ಪಿಸಿ ಭವನ ಮತ್ತು ಇತರ ಸ್ಥಳಗಳಲ್ಲಿ ೩೦ ಸಿಸ್ಟಮ್‌ಗಳನ್ನು ಸ್ಥಾಪಿಸಿದೆ. ಇದೇ ವ್ಯವಸ್ಥೆಯನ್ನು ಮುಂದೆ ನಮ್ಮ ದೇಶದ ವಿವಿಧ ಭಾಗಗಳಿಗೆ ವಿಸ್ತರಿಸುವ ಅವಕಾಶವಿದೆ.