Tuesday, 13th May 2025

ಟೆಲಿಗ್ರಾಂನಿಂದ ಪ್ರೀಮಿಯಂ ಸೌಲಭ್ಯ

ಉಚಿತವಾಗಿ ಲಭ್ಯವಿರುವ ಆಪ್‌ಗಳು ಒಂದೊಂದಾಗಿ ಶುಲ್ಕವನ್ನು ಸಂಗ್ರಹಿಸಲು ಆರಂಭಿಸಿದ್ದು, ಹಣ ಪಾವತಿಸಿದವ ರಿಗೆ ಹೆಚ್ಚಿನ ಸೇವೆ ಒದಗಿಸಲು ಆರಂಭಿಸಿವೆ. ಯುಟ್ಯೂಬ್‌ನಲ್ಲೂ ಪ್ರೀಮಿಯಂ ಸೌಲಭ್ಯ ಜಾರಿಗೆ ಬಂದಿದ್ದು, ಈಗ ಟೆಲಿಗ್ರಾಂ ಆಪ್ ಶುಲ್ಕ ಸಂಗ್ರಹಿಸಲು ಮುಂದಾಗಿದೆ.

ಶಶಾಂಕ್ ಮುದೂರಿ

ಇದು ಸಾಮಾಜಿಕ ಜಾಲತಾಣಗಳ ಯುಗ. ಮಕ್ಕಳು, ದೊಡ್ಡವರೆನ್ನದೇ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ವಿಹರಿಸುವವರೇ! ಕೆಲವರು ಹವ್ಯಾಸಕ್ಕಾಗಿ, ಕೆಲವರು ಪ್ರಚಾರಕ್ಕಾಗಿ, ಇನ್ನು ಕೆಲವರು ಕ್ರಿಯಾಶೀಲ ಬದುಕಿಗಾಗಿ, ಇನ್ನು ಕೆಲವರು ಉದ್ಯೋಗ ವಾಗಿಯೂ ಸಾಮಾಜಿಕ ಜಾಲತಣವನ್ನು ಬಳಸುತ್ತಿದ್ದಾರೆ.

ಮೇಲ್ನೋಟಕ್ಕೆ ಇಂದು ಹೆಚ್ಚಿನ ಸಾಮಾಜಿಕ ಜಾಲತಾಣಗಳ ಸದಸ್ಯತ್ವವು ಉಚಿತವಾಗಿಯೇ ಮುಂದುವರಿದಿದೆ. ಫೇಸ್ ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಟೆಲೆಗ್ರಾಂ ಮೊದಲಾದ ಆಪ್‌ಗಳ ಸೇವೆ ಪಡೆಯಲು ಇಂದು ಮುಂಚಿತವಾಗಿ ಹಣ ಪಾವತಿಸಬೇಕಿಲ್ಲ. ನಂತರದ ಸೇವೆ ಸಹ ಉಚಿತವಾಗಿಯೇ ಮುಂದುವರಿ ಯುತ್ತಿದೆ. ಜಾಹೀರಾತು ಮೂಲಕ ಆ ಸಾಮಾಜಿಕ ಜಾಲತಾಣ ಸಂಸ್ಥೆಗಳು ಸಾಕಷ್ಟು ಲಾಭ ಮಾಡಿಕೊಳ್ಳುತ್ತಿರುವುದು ರಹಸ್ಯವಾಗೇನೂ ಇಲ್ಲ.

ಹಾಗಂತ ಈ ‘ಉಚಿತ’ ಸೇವೆ ಎಷ್ಟು ಕಾಲ ಮುಂದುವರಿದೀತು? ಸಾಮಾಜಿಕ ಜಾಲತಾಣಗಳ ಮೂಲಕ ಲಾಭ ಮಾಡಿ ಕೊಳ್ಳುವು ದನ್ನು ಉದ್ಯೋಗ ಮಾಡಿಕೊಂಡಿರುವ ಆ ದೈತ್ಯ ಸಂಸ್ಥೆಗಳು, ಸದಸ್ಯತ್ವ ಶುಲ್ಕದ ಮೂಲಕವೂ ಹಣ ಮಾಡಲು ಮುಂದಾಗುವು ದಿಲ್ಲವೆ? ಈಗ ಇದಕ್ಕೆ ಸ್ಪಷ್ಟ ಉತ್ತರ ದೊರಕಿದೆ. ಟೆಲೆಗ್ರಾಂ ಆಪ್‌ನ ಸದಸ್ಯತ್ವ ಪಡೆದವರು ಎಂದಿನ ಉಚಿತ ಸೇವೆಯನ್ನು ಹೊಂದುವರಾದಾರೂ, ಆ ಸಂಸ್ಥೆಯು ‘ಪ್ರೀಮಿಯಂ’ ಸೌಲಭ್ಯವೊಂದನ್ನು ಈಗ ಜಾರಿಗೆ ತಂದಿದೆ.

ಪ್ರತಿ ತಿಂಗಳು ೫ ಡಾಲರ್ ಶುಲ್ಕ ಹೊಂದಿರುವ ಈ ಸೌಲಭ್ಯದ ಬಳಕೆದಾರರಿಗೆ, ಇತರರಿ ಗಿಂತ ಹೆಚ್ಚಿನ ಸೌಲಭ್ಯಗಳೂ ಲಭ್ಯ! ಪ್ರತಿ ತಿಂಗಳೂ ಶುಲ್ಕವನ್ನು ಪಾವತಿಸುವ ಟೆಲೆಗ್ರಾಂ ಬಳಕೆದಾರರು ಕೆಳಕಂಡ ಕೆಲವು ಹೆಚ್ಚುವರಿ ಸೌಲಭ್ಯಗಳಿಗೆ ಅರ್ಹರಾಗುತ್ತಾರೆ.

ಟೆಲಿಗ್ರಾಂ ಆಪ್‌ನ ಜನಪ್ರಿಯತೆಯು ಈಚಿನ ವರ್ಷಗಳಲ್ಲಿ ಹೆಚ್ಚಳಗೊಂಡಿದೆ. ಸುಮಾರು ೭೦೦ ಮಾಸಿಕ ಬಳಕೆದಾರರನ್ನು ಹೊಂದಿರುವ ಈ ಆಪ್ ನಿರಂತರವಾಗಿ ಹೊಸ ಹೊಸ ಫೀಚರ್ ಗಳನ್ನು ಸೇರಿಸುತ್ತಾ ಬಂದಿದ್ದು, ಈಗ ಪ್ರೀಮಿಯಂ ಸೌಲಭ್ಯವನ್ನು ಒದಗಿಸುವ ಮೂಲಕ ಬಳಕೆದಾರರಿಗೆ ಹೊಸ ಅನುಭವ ನೀಡುವುದರ ಜತೆಯಲ್ಲೇ, ತಾನು ಹೆಚ್ಚಿನ ಲಾಭ ಮಾಡಿಕೊಳ್ಳುವತ್ತ ಸಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಪ್ ಗಳು ಮಾಸಿಕ ಶುಲ್ಕಸಹಿತ ಸೇವೆಯನ್ನು ನೀಡಲು ಮುಂದಾಗು ವುರಲ್ಲಿ ಯಾವುದೇ ಸಂಶಯವಿಲ್ಲ.

ಸಮಾಧಿ ಶಿಲೆ
ಕಳೆದ ವಾರ ‘ಇಂಟನೆಟ್ ಎಕ್ಸ್‌ಪ್ಲೋರರ್’ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಮೈಕ್ರೊಸಾಫ್ಟ್ ಸಂಸ್ಥೆ ಘೋಷಿಸಿದ್ದು ನಿಮ್ಮೆಲ್ಲರಗ ಗಮನಕ್ಕೆ ಬಂದಿರಬಹುದು. ೧೫.೬.೨೦೨೨ ರಿಂದ ‘ಇಂಟರ್‌ನೆಟ್ ಎಕ್ಸ್‌ಪ್ಲೋರರ್’ ಸೇವೆಯನ್ನು ಪ್ರಾಯೋಗಿಕವಾಗಿ ಬಂದ್ ಮಾಡಲಾಗುವುದು ಎಂದಾಗ ಕೆಲವರ ಮನದ ಮೂಲೆಯಲ್ಲಿ ಸಣ್ಣ ನೋವು ಹುಟ್ಟಿದ್ದು ಸಹಜ. ಹಲವು ದಶಕಗಳಿಂದ ಅಂತರ್ಜಾಲದಲ್ಲಿ ಹುಡುಕಾ ನಡೆಸಲು ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ್ನು ಉಪಯೋಗಿಸಿದವರು ಹಲವರು.

ಅಂತಹ ನೊಂದವರಲ್ಲಿ ಒಬ್ಬನಾದ ಜುಂಗ್ ಕಿ ಎಂಬಾತನು, ತನ್ನ ಪ್ರೀತಿಯ ‘ಇಂಟರ್‌ನೆಟ್ ಎಕ್ಸ್‌ಪ್ಲೋರರ್’ ನೆನಪಿಗೆ, ಒಂದು ಸಮಾಽ ಶಿಲೆಯನ್ನು ವಿನ್ಯಾಸಗೊಳಿಸಿದೆ. ಸುಮಾರು ೩೩೦ ಡಾಲರ್ ಪಾವತಿಸಿ, ‘ಜನನ ೧೭.೮.೧೯೯೫ – ಮರಣ ೧೫.೬.೨೦೨೨’ ಎಂಬ ವಿವರಗಳೊಂದಿಗೆ ‘ಇಂಟರ್ ನೆಟ್ ಎಕ್ಸ್‌ಪ್ಲೋರರ್ ಇಲ್ಲಿ ಚಿರನಿದ್ರೆಗೆ ಜಾರಿದ್ದಾರೆ’ ಎಂಬ ಬರಹವನ್ನು ಹೊಂದಿರುವ ಶಿಲೆಯನ್ನು ತನ್ನ ಸಹೋದರನ ಕಚೇರಿಯ ಮುಂಭಾಗದಲ್ಲಿ ನೆಡಿಸಿದ್ದಾನೆ!

ಪ್ರಾಯೋಗಿಕವಾಗಿ ‘ಇಂಟರ್ನೆಟ್ ಎಕ್ಸ್‌ಪ್ಲೋರರ್’ ಸೇವೆ ಸ್ಥಗಿತಗೊಂಡಿರಬಹುದು, ಆದರೆ ಕೆಲವು ನಿರ್ದಿಷ್ಟ ವಲಯಗಳಲ್ಲಿ ಅದರ ಸೇವೆಯನ್ನು ೨೦೨೯ರ ತನಕವೂ ಮುಂದುವರಿಸುವ ಅವಕಾಶವನ್ನು ಮೈಕ್ರೊಸಾಫ್ಟ್ ಸಂಸ್ಥೆ ಒದಗಿಸಿದೆ. ಎಜ್ ಆಪ್‌ನ ಐಇ ಮೋಡ್, ಕೆಲವು ಅಧಿಕೃತ ಸರಕಾರಿ ಬ್ರೌಸರ್‌ಗಳಲ್ಲಿ ಇದನ್ನು ಉಪಯೋಗಿಸುವ ಅವಕಾಶವು ಮುಂದುವರಿಯುತ್ತಿದೆ.

ಅದೇನೇ ಇದ್ದರೂ, ಅಧಿಕೃತವಾಗಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಇನ್ನು ಮುಂದೆ ನೆನಪು ಮಾತ್ರ.

ಅಮೆಜಾನ್‌ಗೆ ಕೆಲಸಗಾರರ ಕೊರತೆ?
ಆನ್‌ಲೈನ್ ಶಾಪಿಂಗ್ ಎಂದಾಕ್ಷಣ ಮೊದಲು ನೆನಪಾಗುವುದು ಅಮೆಜಾನ್. ಮೊಬೈಲ್‌ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು
ಸುಭದ್ರ ಪ್ಯಾಕಿಂಗ್‌ನೊಂದಿಗೆ ಮನೆ ಬಾಗಿಲಿಗೆ ತಲುಪಿಸುವ ಆ ಆನ್‌ಲೈನ್ ದೈತ್ಯನು, ಈ ಜಗತ್ತಿನ ಹಲವರ ಶಾಪಿಂಗ್ ಅನುಭವ ವನ್ನು ವಿಭಿನ್ನವಾಗಿಸಿದ್ದರ ಜತೆಯಲ್ಲೇ, ಎಷ್ಟೋ ಬಾರಿ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲೂ ವಸ್ತುಗಳನ್ನು ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಇಂತಹ ಉತ್ತಮ ಸೇವೆ ನೀಡುವಲ್ಲಿ ಅಮೆಜಾನ್‌ಗೆ ಒದಗಿ ಬಂದದ್ದು ನುರಿತ ಕೆಲಸಗಾರರು. ಇಂತಹ ಕೆಲಸಗಾರರ ಪಡೆಯೇ ಒಂದೊಮ್ಮೆ ಕೈಕೊಟ್ಟರೆ? ಅಂತಹ ಒಂದು ಸಾಧ್ಯತೆಯು ೨೦೨೪ರಲ್ಲಿ ಎದುರಾಗಬಹುದು ಎಂದು ಅಮೆಜಾನ್ ಸಂಸ್ಥೆಯು ರಹಸ್ಯ ಟಿಪ್ಪಣಿ ಸೂಚಿಸಿದೆ! ಅಂದರೆ, ೨೦೨೪ರ ಸಮಯದಲ್ಲಿ ಅಮೆಜಾನ್ ಸಂಸ್ಥೆಗೆ ಕೆಲಸಗಾರರ ಕೊರತೆ ಎದುರಾಗಬಹುದಂತೆ. ಅದರ ಕೆಲವು ಅಂಗಸಂಸ್ಥೆಗಳಲ್ಲಿ ಮುಂದಿನ ವರ್ಷಗಳಿಂದ ಕೆಲಸ ಗಾರರ ಕೊರತೆ ಕಂಡುಬರಲೂ ಬಹುದು ಮತ್ತು ಉತ್ತಮ ಮತ್ತು ನುರಿತ ಕೆಲಸಗಾರರು ಹೊಸದಾಗಿ ಸೇರ್ಪಡೆಗೊಳ್ಳದೇ ಇರುವ ಸಾಧ್ಯತೆ ಇದೆ ಎಂದು ಆ ಟಿಪ್ಪಣಿ ಎಚ್ಚರಿಸಿದೆ.

ಇದನ್ನು ಎದುರಿಸಲು, ನುರಿತ ಕೆಲಸಗಾರರನ್ನು ಉಳಿಸಿಕೊಳ್ಳಲು ಮತ್ತು ಹೊಸ ಹೊಸಕೆಲಸಗಾರರನ್ನು ಆಕರ್ಷಿಸಲು ಸಂಸ್ಥೆಯು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಟಿಪ್ಪಣಿ ಹೇಳಿದೆ. ಇಂತಹ ಸನ್ನಿವೇಶವನ್ನು ಎದುರಿಸಲು, ಸ್ವಯಂ ಚಾಲಿತ ಯಂತ್ರಗಳ ಮತ್ತು ರೋಬೋಟ್‌ಗಳ ಬಳಕೆಯನ್ನು ಹೆಚ್ಚಿಸಲು ಸಹ ಅಮೆಜಾನ್ ಕ್ರಮ ಕೈಗೊಡಿದೆ. ಸದ್ಯದ ಪರಿಸ್ಥಿತಿಯಲ್ಲಿ, ಅಮೆರಿಕದಲ್ಲಿ ಅಮೆಜಾನ್ ಸಂಸ್ಥೆಯು ೨ನೇ ಅತಿ ದೊಡ್ಡ ಉದ್ಯೋಗಸ್ಥ ಸಂಸ್ಥೆ. ಜತೆಗೆ, ವಾಲ್‌ಮಾರ್ಟ್, ಟಾರ್ಜೆಟ್ ನಂತಹ ಸಂಸ್ಥೆಗಳು ಅಮೆಜಾನ್‌ಗೆ ಪ್ರತಿಸ್ಪರ್ಧಿ ಎನಿಸಿದ್ದು, ಅಮೆಜಾನ್ ನೀಡುವ ಸೌಲಭ್ಯಗಳನ್ನೇ ನೀಡುತ್ತಿದ್ದು, ಕೆಲಸ ಗಾರರನ್ನು ಸಹ ಆಕರ್ಷಿಸುತ್ತಿವೆ.

ಅಮೆಜಾನ್ ತನ್ನ ಸ್ಥಾನದಲ್ಲಿ ಮುಂದುವರಿಯಲು ನುರಿತ ಕೆಲಸಗಾರರ ಪಡೆಯನ್ನು ಉಳಿಸಿಕೊಳ್ಳುವುದು ಪ್ರಮುಖ ಅಂಶ ಎಂಬುದಂತೂ ನಿಜ. ಟಿಕ್ ಟಾಕ್ ವಾಗ್ದಾನ ನಮ್ಮ ದೇಶದಲ್ಲಿ, ಭದ್ರತಾ ದೃಷ್ಟಿಯಿಂದ ಟಿಕ್‌ಟಾಕ್‌ನ್ನು ಬ್ಯಾನ್ ಮಾಡಿರುವುದು ಸರಿಯಷ್ಟೇ? ಅಮೆರಿಕದಲ್ಲಿ ಅದಿನ್ನೂ ಜನಪ್ರಿಯ ಆಪ್ ಆಗಿ ಮುಂದುವರಿದಿದ್ದು, ಅಲ್ಲಿನ ಸರಕಾರವು ಟಿಕ್‌ಟಾಕ್ ಮೇಲೆ ಸಾಕಷ್ಟು ನಿಯಮಗಳನ್ನು, ಅಂಕುಶಗಳನ್ನು ಹೇರಿದೆ. ಟಿಕ್‌ಟಾಕ್ ಮೇಲೆ ಇದ್ದ ಪ್ರಮುಖ ಆರೋಪವೆಂದರೆ, ಡಾಟಾವನ್ನು ಹೊರ ದೇಶಗಳಲ್ಲಿ ಸಂಗ್ರಹಿಸುತ್ತದೆ ಎಂದು. ಮುಖ್ಯವಾಗಿ, ಟಿಕ್‌ಟಾಕ್ ಸಂಗ್ರಹಿಸಿದ ಡಾಟಾವನ್ನು ಚೀನಾದವರು ಅನಧಿಕೃತವಾಗಿ ಉಪಯೋಗಿಸುತ್ತಾರೆ ಎಂಬ ಬಲವಾದ ಗುಮಾನಿಯೂ ಇದೆ.

ಇಂತಹ ಸಂಶಯಗಳನ್ನು ಎದುರಿಸಲೆಂದೇ, ಟಿಕ್‌ಟಾಕ್ ಹೊಸ ವಾಗ್ದಾನವನ್ನು ಮುಂದಿಟ್ಟಿದೆ. ತಾನು ಸಂಗ್ರಹಿಸಿದ ಮಾಹಿತಿ
ಯನ್ನು, ಅಮೆರಿಕದ ಸರ್ವರ್‌ಗಳನ್ನು ಸಂಗ್ರಹಿಸುತ್ತಿರುವುದಾಗಿಯೂ, ಇದಕ್ಕಾಗಿ ವರ್ಜೀನಿಯಾದ ಡಾಟಾ ಕೇಂದ್ರವನ್ನು ಉಪಯೋಗಿಸುತ್ತಿರುವುದಾಗಿಯೂ, ಒರಾಕಲ್ ಕ್ಲೌಡ್ ವ್ಯವಸ್ಥೆಯನ್ನು ಬಳಸುತ್ತಿರುವುದಾಗಿಯೂ ಟಿಕ್‌ಟಾಕ್ ಹೇಳಿದೆ. ಆದರೂ, ಚೀನಾ ಮೂಲಕ ಉದ್ಯೋಗಿಗಳು ಟಿಕ್ ಟಾಕ್‌ನ ಅಮೆರಿಕನ್ ಬಳಕೆದಾರರ ಮಾಹಿತಿಯನ್ನು ನೋಡುವ ಅವಕಾಶವಿದೆ ಎಂಬ ಕಳವಳ ಇಂದಿಗೂ ಇದೆ!