ಬೈಕೋಬೇಡಿ
ಅಶೋಕ್ ನಾಯಕ್
ಹೆಚ್ಚು ದೂರ ದ್ವಿಚಕ್ರ ವಾಹನ ಸವಾರಿಯನ್ನುಇಷ್ಟಪಡುವವರು, ಲಾಂಗ್ ಜರ್ನಿಗಾಗಿ ಕ್ರೂಸರ್ ಶೈಲಿಯ ಬೈಕನ್ನೇ ಪ್ರಿಫರ್ ಮಾಡುತ್ತಾರೆ.
ಕಾರಣ, ಸೇಫ್ ಜರ್ನಿಗಾಗಿ. ಬುಲೆಟ್ ಶೈಲಿಯ ಬೈಕ್ ಕೂಡ ಇಲ್ಲಿ ಹೆಚ್ಚು ಬೇಡಿಕೆ ಪಡೆಯುತ್ತದೆ. ಜಾವಾ ಸ್ಟ್ಯಾಂಡರ್ಡ್ ಜಾವಾ ಸ್ಟಾಂಡರ್ಡ್ ಬೈಕ್ ಒಂದು ಕ್ರೂಸರ್ ಶೈಲಿಯ ಬೈಕ್ ಆಗಿದ್ದು, ಒಂದೂವರೆ ಲಕ್ಷ ರೂಪಾಯಿಗಿಂತಲೂ ಮೇಲ್ಪಟ್ಟು ದರದಲ್ಲಿ ಮಾರಾಟಕ್ಕಿದೆ. ಮೂರು ವೇರಿಯಂಟ್ ಮತ್ತು ಐದು ಬಣ್ಣಗಳಲ್ಲಿ ಇದು ಲಭ್ಯವಿದೆ. 293ಸಿಸಿ ಬಿಎಸ್6 ಎಂಜಿನ್ ಸಾಮರ್ಥ್ಯ ದೊಂದಿಗೆ ಈ ಬೈಕ್, ಎಂಟಿ ಲಾಕಿಂಗ್ ಬ್ರೇಕಿಂಗ್ ಸೌಲಭ್ಯ ಹೊಂದಿದೆ.
172 ಕೆಜಿ ತೂಕದ ಈ ಬೈಕ್, 14 ಲೀಟರ್ ಪೆಟ್ರೋಲನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. 293 ಸಿಸಿ ಸಿಂಗಲ್ ಸಿಲಿಂರ್ಡ ಲಿಕ್ವಿಡ್ ಕೂಲ್ಡ ಎಂಜಿನ್, ಆರು ರ್ಗೇ ಬಾಕ್ಸ್ ಒಳಗೊಂಡಿದೆ. ಗ್ರೇ, ಕಪ್ಪು ಹಾಗೂ ಮರೂನ್ ಬಣ್ಣಗಳಲ್ಲಿ ಬೈಕ್ ಲಭ್ಯವಿದೆ. ೨೦೨೧ರ ಜುಲೈನಲ್ಲಿ ಇದೇ ಕಂಪೆನಿಯು ಖಾಕಿ ಹಾಗೂ ಮಿಡ್ನೈಟ್ ಗ್ರೇ ನಲ್ಲಿ ಬೈಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಈ ವಾಹನವು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿರೀಸ್ ಹಾಗೂ ರಾಯಲ್ ಎನ್‌ಫೀಲ್ಡ್ ಥಂಡರ್ಬರ್ಡ್ ಗೆ ಸ್ಪರ್ಧೆ ನೀಡು ವುದು. ಪ್ರತೀ ಲೀಟರ್ ಇಂಧನಕ್ಕೆ 30 ಕಿಮೀ ಮೈಲೇಜ್ ನೀಡುವ ಈ ಬೈಕಿನಲ್ಲಿ ಸುಮಾರು 14 ಲೀಟರ್ ಇಂಧನ ಸಂಗ್ರಹವಾಗು ವುದು.
ಯಾಮಾಹಾ ಏರೋಕ್ಸ್ 155
155 ಸಿಸಿ ಎಂಜಿನ್ ಕೆಪಾಸಿಟಿಯೊಂದಿಗೆ, ಪ್ರತೀ ಲೀಟರ್ ಇಂಧನಕ್ಕೆ 45 ಕಿಮಿ ಮೈಲೇಜ್ ನೀಡುವ ಈ ಬೈಕ್ 126 ತೂಕವನ್ನು ಹೊಂದಿದೆ. ಒಂದೂವರೆ ಲಕ್ಷಕ್ಕಿಂತ ಕಡಿಮೆ ದರ ದಲ್ಲಿ ಈ ಬೈಕ್ ಮಾರಾಟಕ್ಕಿದ್ದು, ಆಯ್ಕೆ ಗಮನಿಸುವುದಾದರೆ, ಒಂದು ವೇರಿಯಂಟ್ ಹಾಗೂ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಇದರ ಇಂಧನ ಸಂಗ್ರಹ ಸಾಮರ್ಥ್ಯ ೫.೫ ಲೀಟರುಗಳು. ಪ್ರೀಮಿಯಮ್ ಉತ್ಪನ್ನದೊಂದಿಗೆ ಯಾಮಾಹಾದ ಈ ವಾಹನದಲ್ಲಿ ಬದಲಾವಣೆ ತರಲಾಗಿದೆ.
೨೪.೫ ಲೀಟರ್ ನಷ್ಟು ಸೀಟ್ ಕೆಳಗಿನ ಸ್ಟೋರೇಜ, ಸ್ಪ್ಲಿಟ್ ಸ್ಟೈಲ್ ಸ್ಟೋರೇಜ, ಯುಎಸ್ಬಿ ಚಾರ್ಜರ್ ಇಡಲು ಫ್ರಂಟ್ ಪಾಕೆಟ್, ಎಲ್‌ಇಡಿ ಹೆಡ್ ಲೈಟ್ಸ್, ಎದುರು ಭಾಗದಲ್ಲಿ ಎಲ್‌ಇಡಿ ಲ್ಯಾಂಪ್‌ಗಳು, ಎಲ್ಇಡಿ ಟೇಲ್ ಲೈಟ್, ಮಲ್ಟಿ ಫಂಕ್ಷನ್ ಕೀ, ಸೈಡ್ ಸ್ಟ್ಯಾಂಡ್ ಎಂಜಿನ್, ಸಿಂಗಲ್ ಚ್ಯಾನೆಲ್ ಎಬಿಎಸ್ ಮುಂತಾದವು ಇತರೆ ಫೀಚರ್ಸ್‌ಗಳು.