Wednesday, 14th May 2025

ಡೈನಾಮಿಕ್ ಸ್ಟಾರ್‌ ಜತೆಯಾದ ತಾರಕ್‌

ನಟ ತಾರಕ್ ಶೇಖರಪ್ಪ ‘ನಾನೊಂಥರ’ ಎಂದು ತೆರೆಗೆ ಬರಲು ರೆಡಿಯಾಗಿದ್ದಾಾರೆ. ತಾರಕ್‌ಗೆ, ಡೈನಾಮಿಕ್ ಸ್ಟಾರ್ ಸಾಥ್ ನೀಡಿ ದ್ದಾರೆ.

‘ನಾನೊಂಥರಾ’ ಯೂತ್‌ಫುಲ್ ಸ್ಟೋರಿ. ಯುವಕರಿಗೆ ಒಳ್ಳೆಯ ಸಂದೇಶವೂ ಸಿನಿಮಾದಲ್ಲಿದೆಯಂತೆ. ಇಡೀ ಊರಿನವರ ಮೆಚ್ಚುಗೆಗೆ ಪಾತ್ರವಾಗಿದ್ದ ಯುವಕನೊಬ್ಬ ಯಾಕಾಗಿ ತಪ್ಪುದಾರಿ ಹಿಡಿಯುತ್ತಾನೆ. ಆ ಬಳಿಕ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ. ಮತ್ತೆ ಮರಳಿ ಆತ ಮೊದಲಿನಂತಾಗಲು, ಊರಿನವರ ಪ್ರೀತಿಗಳಿಸಲು, ಏನೆಲ್ಲಾ ಸಾಹಸ ಪಡುತ್ತಾನೆ, ಎಂಬ ಅಂಶಗಳು ‘ನಾನೊಂಥರ’ ಚಿತ್ರದ ಕಥೆಯಲ್ಲಿ ಅಡಕವಾಗಿವೆ.

ಆತ ಮಧ್ಯಮ ವರ್ಗದ ಹುಡುಗ, ಜೀವನದಲ್ಲಿ ನಾನಾ ಕನಸು ಕಟ್ಟಿಕೊಂಡಿದ್ದ ಆತ ಇದ್ದಕಿದ್ದಂತೆ ಬದಲಾಗುತ್ತಾನೆ. ರೌಡಿಯಂತೆ, ಆರ್ಭಟಿಸುತ್ತಾನೆ. ಮದ್ಯದ ದಾಸನಾಗಿ ಊರೆಲ್ಲಾ ಅಲೆಯುತ್ತಾನೆ. ಹಾಗಾಗಿಯೇ ಆತನನ್ನು ಕಂಡರೆ ಒಂದು ರೀತಿಯ ಆತಂಕ. ಆತ ಯಾಕೆ, ಹೀಗೆ ಬದಲಾದ ಎಂಬುದು ಯಾರಿಗೂ ಅರ್ಥ ವಾಗುವುದೇ ಇಲ್ಲ. ಹೀಗಿರುವಾಗಲೇ ಆತ ಪ್ರೀತಿಯ ಬಲೆಗೆ ಸಿಕ್ಕು ಚಡಪಡಿಸುತ್ತಾನೆ. ಪೀತಿಗಾಗಿ ಹಂಬಲಿಸುತ್ತಾನೆ. ಅಷ್ಟಕ್ಕೂ ಆತ ಯಾರ ಪ್ರೀತಿಯಲ್ಲಿ ಬಿದ್ದ, ರೌಡಿಯಂತಾಗಿದ್ದ ನಾಯಕನನ್ನು ಸರಿ ದಾರಿಗೆ ತರಲು ನಾಯಕಿ ಪಡುವ ಪಾಡೇನು, ಆಕೆಯ ತ್ಯಾಗ ಎಂತಹದ್ದು ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕಂತೆ.

ವಿಶೇಷ ಪಾತ್ರದಲ್ಲಿ ದೇವರಾಜ್ ಡೈನಾಮಿಕ್ ಸ್ಟಾರ್ ದೇವರಾಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದಾಗಲೇ ಆ ಚಿತ್ರದಲ್ಲಿ ಏನೋ ವಿಶೇಷತೆ ಇದೆ ಎಂದೇ ಅರ್ಥ. ‘ನಾನೊಂಥರ’ ಚಿತ್ರದಲ್ಲಿ ದೇವರಾಜ್, ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಮಗ ಎಂದರೆ ಇವರಿಗೆ ಬಲು ಅಚ್ಚುಮೆಚ್ಚು, ಆತ ಏನು ಕೇಳಿದರೂ ಇಲ್ಲ ಎನ್ನದ ಪ್ರೀತಿಯ ತಂದೆ. ಆದರೆ ಮಗ ತಪ್ಪು ದಾರಿ ತುಳಿದಾಗ ತಾಳಿಕೊಳ್ಳಲಾರದ ದುಃಖ ಅಪ್ಪನಲ್ಲಿ ಮಡುಗಟ್ಟುತ್ತದೆ.

ಮಗನನ್ನು ಸರಿ ದಾರಿಗೆ ತರಲು ಪ್ರಯತ್ನ ಪಡುತ್ತಾರೆ. ಇವರ ದುಃಖವನ್ನು ಅರಿತ ನಾಯಕಿ, ಇವರ ಸಹಾಯಕ್ಕೆ ಧಾವಿಸುತ್ತಾಳೆ. ನವ ನಟಿ ರಕ್ಷಿಕಾ, ತಾರಕ್‌ಗೆ ಜತೆಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ರಮೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

Leave a Reply

Your email address will not be published. Required fields are marked *