ವೈ.ಕೆ.ಸಂಧ್ಯಾ ಶರ್ಮ
ಕಳೆದ ಒಂಭತ್ತು ತಿಂಗಳಿಂದ ಎಲ್ಲೆಡೆ ಕರೋನ ಗ್ರಹಣ ಸಾಂಸ್ಕೃತಿಕ ಲೋಕದಲ್ಲಿ ಉಂಟು ಮಾಡಿರುವ ಅಲ ಕಲ ಅಷ್ಟಿಷ್ಟಲ್ಲ. ಸಂಗೀತ- ನೃತ್ಯ-ನಾಟಕಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಕಲಾವಿದರ ತಲ್ಲಣ ಹೇಳತೀರದು.
ಲಾಕ್ ಡೌನ್ ಅವಧಿಯಲ್ಲಿ ಎಲ್ಲರೂ ಮನೆಯ ಬಂದಿ. ಹೊರಗಣ ಎಲ್ಲ ದೈನಂದಿನ ಚಟುವಟಿಕೆಗಳೂ ಸ್ತಬ್ಧ. ಸೃಜನಾತ್ಮಕ ಕಲಾ
ಚೈತನ್ಯಗಳು ಹಾಗೂ ಹೀಗೂ ಒಂದು ಮೂರ್ನಾಲ್ಕು ತಿಂಗಳು ಅನಿವಾರ್ಯವಾಗಿ ಕೈಕಟ್ಟಿ ಕುಳಿತುಕೊಂಡಿದ್ದು ನಿಜ. ಈಗ ಮೆಲ್ಲನೆ
ನೃತ್ಯಮಂದಿರಗಳಲ್ಲಿ ಸೇರಿ ರಂಗಪ್ರವೇಶದಂಥ ಮುಖ್ಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿರುವ ಸಂದರ್ಭಗಳು ಅವರ ಧೈರ್ಯಕ್ಕೆ ಹಿಡಿದ ಕನ್ನಡಿಯೇ ಸರಿ.
ಇತ್ತೀಚಿಗೆ ನಗರದ ಜೆ.ಎಸ್. ಎಸ್. ರಂಗಮಂದಿರದಲ್ಲಿ ನಡೆದ ವಿದುಷಿ ಪೂರ್ಣಿಮಾ ರಜಿನಿ ಅವರ ಶಿಷ್ಯೆ ಕು. ದೀಕ್ಷಿತಾ ಜಗನ್ನಾಥ್ ‘ರಂಗಪ್ರವೇಶ’ ನೃತ್ಯ ಕಾರ್ಯಕ್ರಮ ಸುಸೂತ್ರವಾಗಿ ನಡೆದದ್ದು ವಿಶೇಷ. ರಂಗಮಂದಿರದ ಬಾಗಿಲಲ್ಲಿ ಸ್ಯಾನಿಟೈಸರ್ ಸಿಂಪರಣೆ, ಮಂದಿರದೊಳಗೆ ಒಂದು ಬಿಟ್ಟು ಒಂದು ಆಸನವನ್ನು ಯಾರೂ ಕೂರದಂತೆ ಸೀಲ್ ಮಾಡಿ ಇಡೀ ಆವರಣವನ್ನು ಶುದ್ಧೀಕರ
ಣಗೊಳಿಸಲಾಗಿತ್ತು.
ಅಂತರರಾಷ್ಟ್ರೀಯ ನೃತ್ಯಕಲಾವಿದೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್-ಆರ್ಟ್ ಅಂಡ್ ಮ್ಯೂಸಿಕ್- ‘ನಿದಂ’ ಸಂಸ್ಥೆಯ ಸಂಸ್ಥಾಪಕಿ ನಾಟ್ಯಗುರು ಪೂರ್ಣಿಮಾ ರಜಿನಿಯ ಗರಡಿಯಲ್ಲಿ ರೂಪುಗೊಂಡ ಕಲಾವಿದೆ ದೀಕ್ಷಿತಾ ಜಗನ್ನಾಥನ್ ಆಹ್ಲಾದಕರ ಪ್ರದರ್ಶನ ನೀಡಿದಳು.