Wednesday, 14th May 2025

ನೈಜ ಘಟನೆಯ ಡಿಸೆಂಬರ್‌ 24

ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಹೊಸ ಹೊಸ ಪ್ರಯತ್ನಗಳು ಮುಂದುವರಿಯುತ್ತಿವೆ. ನಟನೆಯಲ್ಲಿ ಆಸಕ್ತಿಯಿರುವ ಹೊಸಬರೇ ಸೇರಿ ನಿರ್ಮಿಸುತ್ತಿರುವ ‘ಡಿಸೆಂಬರ್ 24’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಯಲ್ಲಾಪುರ, ಯಾನ, ಗೋಕರ್ಣ, ದಾಂಡೇಲಿಯಲ್ಲಿ ಮುಂದಿನ ಭಾಗದ ಚಿತ್ರೀಕರಣ ನಡೆಸಲು ಪ್ಲಾನ್ ಮಾಡಿಕೊಂಡಿದೆ. ‘ಡಿಸೆಂಬರ್ 24’ ಈಗಿನ ಕಾಲಘಟ್ಟದಲ್ಲಿ ನಡೆಯುವಂತಹ ಘಟನೆಗಳನ್ನೇ ಆಧರಿಸಿ ಹೆಣೆದಿರುವ ಕಥೆಯಾಗಿದೆ.

ನಮ್ಮ ದೇಶದಲ್ಲಿ ಪ್ರತಿದಿನ ಜನಿಸುವ, ನೂರರಲ್ಲಿ ಮೂರು ಮಕ್ಕಳು ಉಸಿ ರಾಟದ ಸಮಸ್ಯೆಯಿಂದ ಸಾವನ್ನಪ್ಪುತ್ತಿವೆ. ಇಂದಿನ ಆಧುನಿಕ ಯುಗದಲ್ಲೂ ಇಂತಹ ಸಮಸ್ಯೆಗಳು ಯಾಕೆ ಮಕ್ಕಳನ್ನು ಕಾಡುತ್ತಿವೆ. ಇದು ಯಾಕೆ, ಹೇಗೆ, ಇದಕ್ಕೆ ಮದ್ದೇನು ಎಂಬುದರ ಬಗ್ಗೆ ಸಂಶೋಧನೆ ಕೈಗೊಳ್ಳುವ ವೈದ್ಯಕೀಯ ವಿದ್ಯಾರ್ಥಿಗಳ ತಂಡವೊಂದು, ರೋಗಕ್ಕೆ ಔಷಧಿಯನ್ನು ಕಂಡು ಹಿಡಿದು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆಯುತ್ತಾರೆ.

ಇದೇ ಚಿತ್ರದ ಕಥೆಯ ಒನ್‌ಲೈನ್ ಸ್ಟೋರಿಯಾಗಿದೆ. ಈ ನಡುವೆ ವಿದ್ಯಾರ್ಥಿಗಳು ತಮ್ಮ ಸಂಶೋಧನೆಯ ಹಾದಿಯಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದನ್ನು ಕ್ಯೂರಿಯಾಸಿಟಿ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ಇದು ನೈಜಘಟನೆಯಿಂದ ಸ್ಫೂರ್ತಿ ಪಡೆದು ರಚನೆಯಾದ ಕಥೆಯಾಗಿದೆಯಂತೆ.

ನಾಗರಾಜ್ ಎಂ.ಜಿ ಗೌಡ , ಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಅಪ್ಪು ಬಡಿಗೇರ ನಾಯಕನಾಗಿ ನಟಿಸುತ್ತಿದ್ದು,
ನಾಯಕಿಯಾಗಿ ಭೂಮಿಕಾ ರಮೇಶ್ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಅಭಿನಯ, ಭಾಸ್ಕರ್, ಅನು ಪಮಾ, ಮೈಕಲ್ ದೇವರಾಜ್ ನಟನೆಯಿದೆ. ಉಳಿದಂತೆ ರವಿ.ಕೆ. ಆರ್ ಪೇಟೆ ,ರಘು ಶೆಟ್ಟಿ, ಮಿಲನಾ ರಮೇಶ್, ದಿವ್ಯಾ ಆಚಾರ್, ಜಗದೀಶ್ ಹೆಚ್.ಜಿ ದೊಡ್ಡಿ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಚಿತ್ರದಲ್ಲಿ 4 ಹಾಡುಗಳಿದ್ದು ಗೀತಾ ಆನಂದ್ ಪಾಟೀಲ್ ಮತ್ತು ವಿಶಾಲ್ ಆಲಾಪ ಸಾಹಿತ್ಯ ರಚಿಸಿದ್ದಾರೆ. ಪ್ರವೀಣ್ ನಿಕೇತನ್ ಸಂಗೀತ ನೀಡಿದ್ದಾರೆ. ದೇವ್ ಹಾಸನ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಿರ್ಮಾಣದ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ.

Leave a Reply

Your email address will not be published. Required fields are marked *