ರವಿ ದುಡ್ಡಿನಜಡ್ಡು
ಅಪರಾಧ ಜಗತ್ತಿನ ಹೊಸ ತಂತ್ರ ಎಂದರೆ ಮಾಹಿತಿಯನ್ನು ಕದಿಯುವುದು ಮತ್ತು ಅದನ್ನು ಬಯಲು ಮಾಡುವುದಾಗಿ ಬೆದರಿಸುವುದು.
ಬೇಡಿಕೆ ಇಟ್ಟಷ್ಟು ಹಣವನ್ನು ಕ್ರಿಪ್ಟೊಕರೆನ್ಸಿ ಮೂಲಕ ನೀಡಿದರೆ, ಮಾಹಿತಿ ಯನ್ನು ಪುನಃ ವಾಪಸು ಕೊಡುವ ಭರವಸೆ! ಇಲ್ಲವಾದರೆ ಎಲ್ಲವನ್ನೂ ಬೆತ್ತಲು ಗೊಳಿಸುವ ಬೆದರಿಕೆ! ಇತ್ತೀಚೆಗೆ ಐರ್ಲೆಂಡ್ ದೇಶದ ಆರೋಗ್ಯ ವ್ಯವಸ್ಥೆಯ ಮಾಹಿತಿಯನ್ನು ಹ್ಯಾಕ್ ಮಾಡಲಾಗಿತ್ತು.
ಇದೇ ರೀತಿ ಅಮೆರಿಕ ಮತ್ತು ಯುಕೆನಲ್ಲಿನ ಆರೋಗ್ಯ ವ್ಯವಸ್ಥೆಯ ಮಾಹಿತಿಯನ್ನೂ ಕಳವು ಮಾಡುವ ಪ್ರಯತ್ನ ನಡೆದಿದೆ ಎಂದು ಅಮೆರಿಕದ ಕಂಪ್ಯೂಟರ್ ರಕ್ಷಣಾ ಸಂಸ್ಥೆಗಳು ಗುರುತಿಸಿವೆ. ಒಟ್ಟು ಕನಿಷ್ಟ 16 ಸರ್ವರ್ಗಳ ಮಾಹಿತಿಯು ಕಳವಿನ ಅಪಾಯದಲ್ಲಿದೆ ಎಂದೂ ಗುರುತಿಸಲಾಗಿದೆ.
ರಷ್ಯಾದ ವಿಸಾರ್ಡ್ ಸ್ಪೈಡರ್ ಕ್ರೈಮ್ ಗುಂಪಿನ ಕೈವಾಡವಿರುವ ಈ ಅಪರಾಧಗಳಲ್ಲಿ, ಕೊಂತಿ ರ್ಯಾನ್ಸಮ್ ವೇರ್ನ ಬಳಕೆ ಯಾಗಿದೆ. ಐರ್ಲೆಂಡ್ನ ಆರೋಗ್ಯ ವ್ಯವಸ್ಥೆಯ ಮಾಹಿತಿ ಕದ್ದ ನಂತರ, ಅದನ್ನು ಮಾರುವುದಾಗಿ ಈ ಕಳ್ಳರು ಬೆದರಿಕೆ ಹಾಕಿದ್ದಾರೆ. ಜತೆಗೆ ಆ ರೀತಿ ಮಾಹಿತಿ ಬಯಲು ಮಾಡದೇ ಇರಲು ಕ್ರಿಪ್ಟೊಕರೆನ್ಸಿಯ ರೂಪದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಂತ್ರಜ್ಞಾನ ಅತಿ
ಮುಂದುವರಿದಾಗ ಆಗುವ ಪೇಚು ಇಲ್ಲಿ ಬಯಲಾಗಿದೆ. ಏಕೆಂದರೆ ಬಿಟ್ ಕಾಯಿನ್ ನಂತರ ಕ್ರಿಪ್ಟೊಕರೆನ್ಸಿಯಲ್ಲಿ ಹಣವನ್ನು ಪಡೆಯುವ ಈ ಕಳ್ಳರು, ಅದನ್ನು ವಿತ್ಡ್ರಾ ಮಾಡಿ ಎಲ್ಲಿಬೇಕಾದರೂ ಬಳಸಬಹುದು.
ಕ್ರಿಪ್ಟೊಕರೆನ್ಸಿಯ ಮೂಲವನ್ನು ಪತ್ತೆ ಹಚ್ಚುವುದು ಕಷ್ಟ! ಇದೇ ಈ ಕುತಂತ್ರಜ್ಞರ ತಂತ್ರವಾಗಿಬಿಟ್ಟಿದೆ. ಕ್ರಿಪ್ಟೊಕರೆನ್ಸಿಯ ಮೂಲಕ ಹಣ ಪಾವತಿ ಮಾಡಿದಾಗಲೂ ರಹಸ್ಯ ಕಾಪಾಡಬಹುದು. ಆದ್ದರಿಂದಲೇ ಈ ಡಿಜಿಟಲ್ ಕರೆನ್ಸಿಯನ್ನು ಹಲವು
ದೇಶಗಳು ಬ್ಯಾನ್ ಮಾಡಿವೆ.