Tuesday, 13th May 2025

ಉಗ್ರಾವತಾರ ತಾಳಿದ ಪ್ರಿಯಾಂಕಾ

ನಟಿ ಪ್ರಿಯಾಂಕಾ ಉಪೇಂದ್ರ ಉಗ್ರಾವತಾರ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿ ಕೊಂಡಿದ್ದಾರೆ. ಶ್ರೀ ದುರ್ಗಿಯ ಪಾತ್ರದಲ್ಲಿ, ತೆರೆಯಲ್ಲಿ ದುಷ್ಟರ ಸಂಹಾರ ಮಾಡಲಿದ್ದಾರೆ. ಸಾಹಸ ದೃಶ್ಯಗಳು ರಿಯಲ್ ಆಗಿ ಬರಲೆಂದು ರವಿ ಅವರಿಂದ ಆಕ್ಷನ್‌ಗಂತಲೇ ತರಬೇತಿ ಪಡೆದುಕೊಂಡು ಕ್ಯಾಮೆರಾ ಮುಂದೆ ಸುಲಲಿತವಾಗಿ ಡ್ಯೂಪ್ ಬಳಸದೆ ಫೈಟ್ ಮಾಡಿದ್ದಾರೆ.

ಹೆಚ್ಎಂಟಿ ಕಾರ್ಖಾನೆಯಲ್ಲಿ ನಡೆದ ಚಿತ್ರೀಕರಣದಲ್ಲಿ ಪೆಡ್ಲರ್, ಕಿಡ್ನಾಪರ್, ಕೊಲೆಗಾರ ಪಾತ್ರ ಮಾಡಿ ರುವ ಕಾಕ್ರೋಚ್‌ನನ್ನು ಪೊಲೀಸ್ ಅಧಿಕಾರಿ ಶ್ರೀದುರ್ಗಿ ಎನ್‌ಕೌಂಟರ್ ಮಾಡುವ ದೃಶ್ಯವನ್ನು ಛಾಯಾಗ್ರಾಹಕ ನಂದಕುಮಾರ್ ಸಾರಥ್ಯದಲ್ಲಿ ಸೆರೆ ಹಿಡಿಯಲಾಗಿದೆ.

ಮರ್ಡರ್ ಮಿಸ್ಟರಿ ಕಥೆಯ ಚಿತ್ರದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವಾಗುತ್ತದೆ. ಈ ಬಗ್ಗೆ ತನಿಖೆ ನಡೆಸಿದಾಗ ಒಂದೊಂದೇ ಘಟನೆಗಳು ತೆರೆದುಕೊಳ್ಳುತ್ತದೆ. ಅನಿವಾರ್ಯ ಸಂದರ್ಭ ಎದುರಾದರೆ ಮಹಿಳೆಯು ಹೇಗೆ ಉಗ್ರಾವತಾರ ತಾಳಿ ದುಷ್ಟರ ಮಟ್ಟ ಹಾಕುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮಹಿಳೆಯರನ್ನು ಗೌರವ ಭಾವನೆಯಿಂದ ಕಾಣಿರಿ, ಎಂಬ
ಸಂದೇಶವನ್ನು ಚಿತ್ರದಲ್ಲಿ ಹೇಳಲಾಗಿದೆ.

ಹಾಸನದ ನವಪ್ರತಿಭೆ ನಿಸರ್ಗಾ, ಸುಮನ್, ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಇವರೊಂದಿಗೆ ಬಾಲಿವುಡ್ ನಟ ಜಾಕಿಶ್ರಾಫ್, ಆಶಿಷ್ ವಿದ್ಯಾರ್ಥಿ ಕೂಡ ನಟಿಸುವ ಸಾಧ್ಯತೆ ಇದೆ. ಗುರು ಮೂರ್ತಿ ಮೊದಲ ಬಾರಿಗೆ ಚಿತ್ರಕಥೆ ರಚಿಸಿ, ನಿರ್ದೇಶನ ಮಾಡು ತ್ತಿದ್ದಾರೆ. ಕಿನ್ನಾಳ್ ರಾಜ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ರವಿಬಸ್ರೂರು ಸೋದರ ರಾಧಾಕೃಷ್ಣಬಸ್ರೂರು ಸಂಗೀತ ಸಂಯೋ ಜಿಸಿದ್ದಾರೆ. ನಿರ್ಮಾಪಕ ಮುನಿಕೃಷ್ಣ ಎಂ.ಕೆ ಪಿಕ್ಚರ್‌ಸ್‌ ಮೂಲಕ ಸಿನಿಮಾ ಕೃಷಿಗೆ ಬಂಡವಾಳ ಹೂಡುತ್ತಿದ್ದಾರೆ.

Leave a Reply

Your email address will not be published. Required fields are marked *