Thursday, 15th May 2025

ಮತ್ತೊಂದು ಪ್ರೇಮಕಥೆ

ಆರಂಭವಾಗಲಿದೆ ಪ್ರೇಮ ಯುದ್ಧ ಕನ್ನಡದಲ್ಲಿ ಮತ್ತೊಂದು ಪ್ರೇಮಕಥೆಯ ಚಿತ್ರ ಸಿದ್ಧವಾಗುತ್ತಿದೆ. ಅದೇ ಲವ್ ವಾರ್. ಚಿತ್ರದ ಹೆಸರೇ ಹೇಳುವಂತೆ ಇದು ಎರಡು ಧರ್ಮಗಳ ಪ್ರೇಮ ಯುದ್ಧ.

ಚಿತ್ರದ ನಾಯಕ ಹಾಗೂ ನಾಯಕಿ ಇಬ್ಬರೂ ಬೇರೆ ಬೇರೆ ಧರ್ಮಕ್ಕೆೆ ಸೇರಿದವರು. ಈ ಇಬ್ಬರ ನಡುವೆ ಪ್ರೀತಿ ಚಿಗುರಿದಾಗ ಹೇಗೆ ಧರ್ಮಗಳ ನಡುವೆ ವೈಷಮ್ಯ ಮೂಡುತ್ತದೆ. ಈ ನಡುವೆ ಪ್ರೇಮಿಗಳ ಕಿತ್ತಾಟ, ಕುಟುಂಬದ ಜತೆಗಿನ ಸಂಘರ್ಷ, ಇವೆಲ್ಲವು ಚಿತ್ರದ ಕಥೆಯಲ್ಲಿ ಅಡಕವಾಗಿವೆ.

ಈ ಹಿಂದೆ ಸರ್ಕಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಎಸ್.ಮಂಜು ಪ್ರೀತಮ್ ಈ ಚಿತ್ರಕ್ಕೂ ಕಥೆ ಚಿತ್ರಕಥೆ ಬರೆದು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕನ್ನಡ, ತಮಿಳು,  ಮಲಯಾಳಂ, ತೆಲುಗು, ಹಿಂದಿ ಹೀಗೆ ಐದು ಭಾಷೆಗಳಲ್ಲಿ ಚಿತ್ರ ಮೂಡಿಬರುತ್ತಿದ್ದು, ಎಸ್ ಕೆಎಫ್ ಬ್ಯಾನರ್‌ನಲ್ಲಿ ಇಮ್ರಾನ್ ಆರಿಫ್ ಪಾಶಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ನಾಯಕನಾಗಿ ಸಾಹಿಲ್ ಖಾನ್ ನಟಿಸತ್ತಿದ್ದಾರೆ. ಮರಾಠಿ ಧಾರವಾಹಿಗಳಲ್ಲಿ ಕಾಣಸಿಕೊಂಡಿದ್ದ ಸಂಯೋಜಕ ಕಾರ್ತಿಕ್ ವೆಂಕಟೇಶ್ ಈಗ ಆರೋನ್ ಕಾರ್ತಿಕ್ ಎಂದು ನಾಮಕರಣ ಮಾಡಿಕೊಂಡಿದ್ದು, ನಾಲ್ಕು ಹಾಡುಗಳಿಗೆ ರಾಗ ಹೊಸೆಯುತ್ತಿದ್ದಾರೆ.

ಛಾಯಾಗ್ರಹಣ ಆಶುಮೋಹನ್ ಕುಮಾರ್, ಸಂಕಲನ ನಾಗರಾಜ.ಜಿ.ಹಾರಸೂರ್, ಸಂಭಾಷಣೆ ಚಂದ್ರು, ಸಾಹಸ ಡಾ.ಥ್ರಿಲ್ಲರ್ ‌ಮಂಜು, ನೃತ್ಯ ಕರಿಯಾನಂದ ಅವರದಾಗಿದೆ. ಚಿತ್ರದುರ್ಗ, ಚಿಕ್ಕಮಗಳೂರು, ಮಡಿಕೇರಿ, ಗೋವ ಮತ್ತು ಮಹಾರಾಷ್ಟ್ರದ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ.

Leave a Reply

Your email address will not be published. Required fields are marked *