Thursday, 15th May 2025

ಕಂಬ್ಳಿಹುಳ ಮೆಚ್ಚಿದ ಚಂದನವನದ ತಾರೆಯರು

ಕಂಟೆಂಟ್ ಒಳಗೊಂಡ ಸಿನಿಮಾಗಳು ಗೆಲ್ಲುತ್ತವೆ ಎಂಬುದು ಚಂದನವನದಲ್ಲಿ ಈಗಾಗಲೇ ಸಾಬೀತಾಗಿದೆ. ಅಂತಹದ್ದೇ ಹೊಸತನವುಳ್ಳು ಕಂಬ್ಳಿಹುಳ ಸಿನಿಪ್ರಿಯರ ಮನಗೆದ್ದಿದೆ.

ಚಂದನವನದ ತಾರೆಯರೂ ಕೂಡ ಚಿತ್ರ ನೋಡಿ ಕೊಂಡಾಡಿದ್ದಾರೆ. ಸೋಶಿ ಯಲ್ ಮೀಡಿಯಾದಲ್ಲಿ ಎಲ್ಲೆಲ್ಲೂ ಕಂಬ್ಳಿಹುಳ ಸಿನಿಮಾದ್ದೇ ಮಾತು. ಚಿತ್ರ ನೋಡಿದ ಚಿತ್ರ ಪ್ರೇಮಿಗಳು ಸಿನಿಮಾದ ಹೊಸತನವನ್ನು ಒಪ್ಪಿ, ಅಪ್ಪಿ ಕೊಂಡಿದ್ದು ಮಾತ್ರವಲ್ಲದೇ ಹೊಸಬರ ಪ್ರಯತ್ನವಿರುವ ಚಿತ್ರವನ್ನು ಇನ್ನಷ್ಟು ಜನ ನೋಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

ಚಂದನವನದ ಸಿನಿ ತಾರೆಯರು, ನಿರ್ಮಾಪಕರು, ನಿರ್ದೇಶಕರು ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ
ಜಾಲತಾಣದಲ್ಲಿ ಪೋಸ್ಟ್ ಹಾಕಿ ಸಿನಿಮಾ ತಂಡಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಂಬ್ಳಿಹುಳ ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ಕೇಳಿ ಬರುತ್ತಿದೆ. ಆದಷ್ಟು ಬೇಗ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಧನಂಜಯ್, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಚೇತನ್ ಕುಮಾರ್, ಅದಿತಿ ಪ್ರಭುದೇವ ಕೂಡ ಚಿತ್ರವನ್ನು ನೋಡಿ
ಮೆಚ್ಚಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮಲೆನಾಡಿನ ಮಡಿ ಲಲ್ಲಿ ನಡೆಯುವ ಸುಂದರ ಪ್ರೇಮ ಕಾವ್ಯ ಈ ಚಿತ್ರದಲ್ಲಿದೆ. ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಅಂಜನ್ ನಾಗೇಂದ್ರ ನಾಯಕನಾಗಿ ನಟಿಸಿದ್ದಾರೆ. ಅಶ್ವಿತಾ.ಆರ್. ಹೆಗ್ಡೆ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.