Saturday, 17th May 2025

ಕಲರ್‌ಫುಲ್‌ ಜಗತ್ತಿನಲ್ಲಿ ಕಾಣೆಯಾದವರು

ವಿಭಿನ್ನ ಶೀರ್ಷಿಕೆಯ ಜತೆಗೆ ವಿಭಿನ್ನ ಕಥಾಹಂದರ ಹೊಂದಿರುವ ಕಾಣೆಯಾದವರ ಬಗ್ಗೆ ಪ್ರಕಟಣೆ ಚಿತ್ರದ ಟ್ರೇಲರ್ ರಿಲಿಸ್ ಆಗಿದೆ.

ನಟ ದುನಿಯಾ ಹಾಗೂ ಡಾಲಿ ಧನಂಜಯ ಟ್ರೇಲರ್ ರಿಲೀಸ್ ಮಾಡಿದರು. ಅರವತ್ತರ ದಶಕದಿಂದ ಆರಂಭವಾಗುವ ಕಥೆ ಪ್ರಸ್ತುತ
ಸನ್ನಿವೇಶದಲ್ಲಿ ಸಾಗುತ್ತದೆ. ಒಂದಷ್ಟು ಸಸ್ಪೆನ್ಸ್, ಸೆಂಟಿಮೆಂಟ್, ಆಕ್ಷನ್ ಕಥೆಯಲ್ಲಿ ಬೆರೆತಿದ್ದು, ಕಲರ್ ಫುಲ್ ಆಗಿ ಚಿತ್ರ ಮೂಡಿ ಬಂದಿರುವುದು ಟ್ರೇಲರ್‌ನಲ್ಲಿ ಸ್ಪಷ್ಟವಾಗುತ್ತದೆ. ರವಿಶಂಕರ್, ರಂಗಾಯಣ ರಘು ಹಾಗೂ ತಬಲನಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುತೂಹಲದ ಕಣಜವಾಗಿರುವ ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ.

ಪ್ರೇಕ್ಷಕರಿಗೆ ಒಳ್ಳೆಯ ಕಥೆಯಿರುವ ಚಿತ್ರವನ್ನು ನಿಡಬೇಕು ಎಂಬ ಆಸೆ ನನ್ನಲ್ಲಿತ್ತು. ಅದರಂತೆ ಈ ಕಥೆ ಹೊಳೆಯಿತು. ರೆಟ್ರೋ ಲುಕ್‌ನಲ್ಲಿ ಮೂಡಿಬಂದಿರುವ ಈ ಚಿತ್ರ, ಪ್ರಸ್ತುತ ಕಾಲಘಟ್ಟದಲ್ಲಿ ಸಾಗುತ್ತದೆ. ಕಾಣಿಯಾದವರ ಬಗ್ಗೆ ಪ್ರಕಟಣೆ ಎಂಬ ಶೀರ್ಷಿಕೆ ಯಾಕೆ ಇಟ್ಟಿದ್ದಾರೆ ಎಂಬ ಪ್ರಶ್ನೆಗೆ ಸಿನಿಮಾ ನೋಡಿದ ಮೇಲೆ ಉತ್ತರ ಸಿಗಲಿದೆ ಎನ್ನುತ್ತಾರೆ ನಿರ್ದೇಶಕ ಅನಿಲ್.

ಕನ್ನಡದಲ್ಲಿ ಕಾಲ ಕಾಲಕ್ಕೆ ತಕ್ಕ ಹಾಗೆ ಉತ್ತಮ ಕಥಾವಸ್ತುವುಳ್ಳ ಚಿತ್ರಗಳು ಬರುತ್ತಿವೆ. ಕನ್ನಡಿಗರು ಉತ್ತಮ ಕಥೆಯುಳ್ಳ ಚಿತ್ರ ವನ್ನು ಖಂಡಿತಾ ಮೆಚ್ಚುತ್ತಾರೆ. ನಿರ್ದೇಶಕರೂ ಕೂಡ ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರ ಗೆಲ್ಲುವ ಭರವಸೆ ಯಿದೆ ಎಂದರು ರಂಗಾಯಣ ರಘು. ಮುಗುಳುನಗೆ ಬೆಡಗಿ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಮಿಂಚಿದ್ದಾರೆ. ಬೀಚ್ ಸೈಡ್‌ನಲ್ಲಿ ಬಾಟಲ್ ಹಿಡಿದು ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತಾರೆ. ಜಿತೇಂದ್ರ ಮಂಜುನಾಥ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಮೇನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

***

ನಾಯಕ, ನಾಯಕಿ ಅಂತ ಇಲ್ಲದೇ, ಕಥೆಯನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಕಾಣೆಯಾದವರ ಬಗ್ಗೆ ಪ್ರಕಟಣೆ. ಇದು ಹೊಸ ಪ್ರಯತ್ನ. ಕಲಾವಿದನಿಗೆ ತಾನು ಮಾಡಿದ್ದ ಪಾತ್ರಗಳಲ್ಲಿ ಕೆಲವು ಪಾತ್ರಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಈ ಚಿತ್ರದಲ್ಲಿ ಅಂತಹ ಪಾತ್ರ ನನಗೆ ಸಿಕ್ಕಿದೆ.

-ರವಿಶಂಕರ್ ನಟ