Saturday, 17th May 2025

ಕಾಡನಾಗಿ ಕಾಡಲಿರುವ ಜೆ.ಕೆ

ನಟ ಜೆ.ಕೆ ಐರಾವನ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಭರ್ಜರಿಯಾಗಿ ಎಂಟ್ರಿಕೊಡಲು ರೆಡಿಯಾಗಿದ್ದಾರೆ. ಈ ನಡುವೆಯೇ ಕಾಡನಾಗಿ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ಕಾಡ, ಕ್ರೈಂ ಥ್ರಿಲ್ಲರ್ ಕಥೆಯ ಚಿತ್ರವಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ಇದನ್ನು ಸ್ಪಷ್ಟೀಕರಿಸುತ್ತದೆ. ಜೆ.ಕೆ ಕಾಡನಾಗಿ ಹೊಸ ಗೆಟಪ್‌ನಲ್ಲಿ ಮಿಂಚಲಿದ್ದಾರೆ. ಜತೆಗೆ ರಗಡ್ ಲುಕ್‌ನಲ್ಲಿಯೂ ಗಮನಸೆಳೆಯಲಿದ್ದಾರೆ. ಕಾಡ, ಮಾನಸಿಕ ಕ್ಷೋಭೆಗೆ ಒಳಗಾದ ವ್ಯಕ್ತಿಯ ಬಗ್ಗೆ ಹೆಣೆಯಲಾದ ಕಥೆಯಾಗಿದೆ. ಇದು ಕಾಲ್ಪನಿಕ ಕಥೆಯಾದರೂ, ಚಿತ್ರಕಥೆಯಲ್ಲಿ ನೈಜತೆಯ ಸ್ಪರ್ಶ ವಿದೆ.

ಇಂತಹ ವ್ಯಕ್ತಿತ್ವವಿರುವ ವ್ಯಕ್ತಿಗಳು ಪ್ರಪಂಚದಲ್ಲಿ ಬೆರಳಿಕೆಯಷ್ಟು ಮಾತ್ರ ಇದ್ದಾರೆ. ಇವರು ಮಾಡುವುದೇ ಸರಿ ಅಂದುಕೊಂಡಿರುತ್ತಾರೆ. ಸಮಾಜಕ್ಕೂ ಮಾರಕವಾಗಿಯೇ ಪರಿಣಮಿಸುತ್ತಾರೆ. ಇದೇ ಕಥೆಯನ್ನು ಹೊತ್ತು ಕಾಡ ತೆರೆಗೆ ಬರಲಿದ್ದಾನೆ. ಎರಡು ಭಾಗದಲ್ಲಿ ಈ ಚಿತ್ರ ಮೂಡಿಬಲಿದೆ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಕಾಡ ರಿಲೀಸ್ ಆಗಲಿದೆ.

ನಾಯಕ ಇದೇ ರೀತಿಯ ವ್ಯಕ್ತಿತ್ವ ಹೊಂದಿದ್ದವನಾಗಿರುತ್ತಾನೆ. ಸೈಲಂಟಾಗಿರುವ ಕಾಡನ ತಂಟೆಗೆ ಬಂದರೆ ವೈಲಂಟಾಗುತ್ತಾನೆ. ತಮ್ಮ ವೈರಿಗಳ ಸದ್ದಡಗು ವವರೆಗೂ ಕಾಡುತ್ತಲೇ ಇರುತ್ತಾನೆ. ಅದು ಹೇಗೆ ಎಂಬುದನ್ನು ಬಲು ರೋಚಕವಾಗಿ ತೆರೆಗೆ ತರುತ್ತಿದ್ದಾರೆ ನಿರ್ದೇಶಕ ವಿಶ್ರುತ್ ನಾಯಕ್. ದೆಹಲಿ ಮೂಲದ ನಿರ್ಮಾಣ ಸಂಸ್ಥೆ ಸ್ಪೆಂಡಿಡ್ ಪ್ರೊಡಕ್ಸನ್ಸ್‌ನಲ್ಲಿ ಈ ಚಿತ್ರ ನಿರ್ಮಾಣ ವಾಗುತ್ತಿದೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಮುಂದಿನ ತಿಂಗಳ ಮೊದಲ ವಾರದಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕಾಗಿ ಸಕಲೇಶಪುರಕ್ಕೆ ತೆರಳಲಿದೆ ಚಿತ್ರತಂಡ. ಜೆ.ಕೆ ಜತೆಯಾಗಿ ಕಾವ್ಯಾ ಶೆಟ್ಟಿ ನಟಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಉಗ್ರಂ ಮಂಜು ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

***

ನಿರ್ದೇಶಕರು ಬಂದು ಕಥೆ ಹೇಳಿದಾಗ ಜಗತ್ತಿನಲ್ಲಿ ಇಂತಹ ವ್ಯಕ್ತಿಗಳು ಇರುತ್ತಾರಾ ಎಂದು ಒಂದು ಕ್ಷಣ ನಾನೇ ಅಚ್ಚರಿಪಟ್ಟೆ. ಚಿತ್ರದ ಕಥೆ ಇಂಟ್ರೆಸ್ಟಿಂಗ್ ಅನ್ನಿಸಿತು. ಸ್ಟೋರಿ ಕೇಳಿದಾಗಲೇ ನಟಿಸಲು ಸಿದ್ಧವಾದೆ. ಚಿತ್ರ ಪ್ರತಿ ಕ್ಷಣಕ್ಕೂ ಕೂತೂಹಲ ಕೆರಳಿಸುತ್ತದೆ. ಮೂವರು ಹುಡುಗರು ಮತ್ತು ಒಂದು ಹುಡುಗಿಯ
ಗುಂಪು ಕಾಡನನ್ನು ಕೆರಳಿಸುತ್ತಾರೆ. ಆಗ ಕಾಡನ ರಿಯಾಕ್ಷನ್ ಹೇಗಿರುತ್ತದೆ. ಆತ ಏನು ಮಾಡುತ್ತಾನೆ ಎಂಬುದು ರೋಚಕವಾಗಿ ಮೂಡಿಬರಲಿದೆ. ಚಿತ್ರದ ಪ್ರತಿ ದೃಶ್ಯವೂ ಅದ್ಭುತವಾಗಿ ಮೂಡಿಬರುತ್ತಿದೆ.
-ಜೆ.ಕೆ ನಟ

Leave a Reply

Your email address will not be published. Required fields are marked *