Friday, 16th May 2025

ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌

Actor Darshan

ನಟ ದರ್ಶನ್ ಕನ್ನಡ ಚಿತ್ರರಂಗದಲ್ಲಿ 24 ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ತಮ್ಮ ಸ್ನೇಹಿತರ ಜತೆ ಸಂಭ್ರಮ ಆಚರಿಸಿದ್ದಾರೆ. ಲೈಟ್‌ಮ್ಯಾನ್ ಆಗಿ ಕೆಲಸ ಆರಂಭಿಸಿದ ಚಾಲೆಂಜಿಂಗ್ ಸ್ಟಾರ್, ಇಂದು ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನನಾಗಿ ಹೊರಹೊಮ್ಮಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿ ದ್ದಾರೆ. 24 ವರ್ಷಗಳನ್ನು ಪೂರೈಸಿರುವ ಈ ಶುಭ ಸಂದರ್ಭದಲ್ಲಿ ದರ್ಶನ್‌ಗೆ ನಟ, ನಟಿಯರು ಹಾಗೂ ಅಭಿಮಾನಿ ಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ದರ್ಶನ್ ಖ್ಯಾತನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ. ಆದರೂ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಅಪಾರ ಶ್ರಮಪಡಬೇಕಾಯಿತು. ಲೈಟ್ ಬಾಯ್ ಆಗಿ ಶ್ರದ್ಧೆಯಿಂದ ಕೆಲಸ ಆರಂಭಿಸಿದ ದಚ್ಚು, ಒಂದೊಂದೇ ಯಶಸ್ಸಿನ ಮೆಟ್ಟಿಲು ಏರುತ್ತಾ ಬಂದರು.

ಕಿರುತೆರೆಯ ಸಣ್ಣಪುಟ್ಟ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿಬಂದ ಮಹಾಭಾರತ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟರು. ಈ ಸಿನಿಮಾದಲ್ಲಿ ವಿನೋದ್ ರಾಜ್ ನಾಯಕನಾಗಿ ನಟಿಸಿದರೆ, ದರ್ಶನ್ ಖಳ ನಾಯಕನಾಗಿ ಬಣ್ಣಹಚ್ಚಿದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರು.

ಅಭಿಮಾನಿಗಳ ಪಾಲಿನ ದಾಸ 
೨೦೦೨ರಲ್ಲಿ ತೆರೆಗೆ ಬಂದ ಮೆಜೆಸ್ಟಿಕ್ ಚಿತ್ರ ದಚ್ಚು ಸಿನಿ ಪಯಣವನ್ನೇ ಬದಲಾಯಿಸಿತು. ಕೈಯಲ್ಲಿ ಲಾಂಗ್ ಹಿಡಿದು ಅಬ್ಬರಿಸಿದ್ದ ದರ್ಶನ್ ಕಂಡು ಸಿನಿಪ್ರಿಯರು ಮನಸೋತರು. ಪ್ರೇಮ್ ನಿರ್ದೇಶನದ ಕರಿಯಾ ಚಿತ್ರದಲ್ಲೂ ಲಾಂಗ್ ಹಿಡಿದು ಪ್ರೇಕ್ಷಕರನ್ನು ರಂಜಿಸಿದರು. ಕರಿಯಾ ದಚ್ಚುಗೆ ಮತ್ತಷ್ಟು ಯಶಸ್ಸು ತಂದು ಕೊಟ್ಟಿತು. ಅತಿ ಹೆಚ್ಚು ಬಾರಿ ರಿ ರಿಲೀಸ್ ಆದ ಸಿನಿಮಾಗಳಲ್ಲಿ ಕರಿಯಾ ಮೊದಲ ಸ್ಥಾನದಲ್ಲಿದೆ.

ಸ್ಯಾಂಡಲ್‌ವುಡ್ ಸಾರಥಿ
ಏಳುಬೀಳುಗಳ ನಡುವೆ ಸಾಗಿದ ದರ್ಶನ್, ಸ್ಯಾಂಡಲ್‌ವುಡ್ ಸಾರಥಿಯಾಗಿ ಮಿಂಚಿದರು. ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಿದರು. ಈ ವರ್ಷ ತೆರೆಗೆ ಬಂದ ರಾಬರ್ಟ್ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಸೇರಿತು. ಸದ್ಯ ದರ್ಶನ್, ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಸೆಟ್ಟೇರಿರುವ ರಾಜವೀರ ಮದಕರಿ ನಾಯಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೈಲಜಾ ನಾಗ್ ನಿರ್ಮಾಣದಲ್ಲಿ ಹೊಸ ಸಿನಿಮಾಗೆ ಚಾಲನೆ ಕೊಟ್ಟಿದ್ದಾರೆ. ಇದರ ಜತೆಗೆ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಯ ರಾಯಬಾರಿಯಾಗಿಯೂ ದರ್ಶನ್ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *