Saturday, 17th May 2025

ವಿಜಯಾನಂದನಿಗೆ ಕ್ರೇಜಿಸ್ಟಾರ್‌ ಸಾಥ್

ಸಾರಿಗೆ, ಪತ್ರಿಕೋದ್ಯಮ, ಮಾಧ್ಯಮ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ನಾಡಿಗೆ ಸೂರ್ತಿಯಾದ ಡಾ.ವಿಜಯ ಸಂಕೇಶ್ವರ ಅವರ ಯಶೋಗಾಥೆ ಬೆಳ್ಳಿತೆರೆಗೆ ಬರಲಿದೆ.

ವಿಜಯಾನಂದ ಶೀರ್ಷಿಕೆಯಲ್ಲಿ ಚಿತ್ರ ಸೆಟ್ಟೇರಿದ್ದು, ಹುಬ್ಬಳ್ಳಿಯಲ್ಲಿ ಸಿನಿಮಾದ ಅದ್ಧೂರಿ ಮುಹೂರ್ತ ಸಮಾರಂಭ ನೆರವೇರಿತು. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು. ಕ್ರೇಜಿಸ್ಟಾರ್
ರವಿಚಂದ್ರನ್ ಕ್ಯಾಮೆರಾ ಸ್ವಿಚ್ ಆನ್ ಮಾಡಿ ಸಿನಿಮಾ ಟೀಂಗೆ ವಿಶ್ ಮಾಡಿದರು.

೧೯೭೬ ರಿಂದ ಆರಂಭವಾಗಿ, ಇಂದಿನವರೆಗೂ ಸಾಗಿಬಂದ ಡಾ.ವಿಜಯ ಸಂಕೇಶ್ವರರ ರೋಚಕ ಕಥೆಯನ್ನು ಆಧರಿಸಿ, ಚಿತ್ರ ನಿರ್ಮಾಣವಾಗುತ್ತಿದೆ. ವಿಆರ್‌ಎಲ್ ಫಿಲಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದ ಸಂಕೇಶ್ವರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಹಿಂದೆ ಟ್ರಂಕ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಮಹಿಳಾ ನಿರ್ದೇಶಕಿ ರಿಷಿಕಾ ಶರ್ಮ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಟ್ರಂಕ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದ, ನಿಹಾಲ್ ಇದೀಗ ವಿಜಯಾನಂದ ಚಿತ್ರದಲ್ಲಿ ಡಾ.ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ನಿಜವಾಗಿಯೂ ಇದು ನನ್ನ ಜೀವನದಲ್ಲಿ ಎಂದು ಮರೆಯದ ದಿನ ಇಡೀ ದೇಶವೇ ಮೆಚ್ಚಿದ ಸಾಧಕನ ಪಾತ್ರದಲ್ಲಿ ನಾನು ಅಭಿನಯಿಸುತ್ತಿರುವುದು ಸಂತಸತಂದಿದೆ ಎನ್ನುತ್ತಾರೆ ನಿಹಾಲ್. ವಿಜಯ್ ಸಂಕೇಶ್ವರ ಅವರ ತಂದೆಯ ಪಾತ್ರದಲ್ಲಿ ಹಿರಿ ನಟ ಅನಂತ್‌ನಾಗ್ ನಟಿಸುತ್ತಿದ್ದಾರೆ.

ಉಳಿದಂತೆ ವಿನಯಾ ಪ್ರಸಾದ್, ಭರತ್ ಬೋಪಣ್ಣ, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಶೈನ್ ಶೆಟ್ಟಿ , ಪ್ರಸಾದ್ ವಸಿಷ್ಠ ಮತ್ತಿತ ರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ
ವಿಜಯಾನಂದ ಮೂಡಿಬರಲಿದೆ.

***

ಫ್ಯಾಷನ್‌ಗಾಗಿ ಸಿನಿಮಾ ಮಾಡುತ್ತಿಲ್ಲ ಬದಲಾಗಿ ಈ ಚಿತ್ರದಿಂದ ಮತ್ತಷ್ಟು ಜನರಿಗೆ ಸ್ಫೂರ್ತಿಯಾಗಬೇಕು. ಇತರರು ಕೂಡ ಸಾಧನೆ ಮಾಡುವತ್ತ ಹೆಜ್ಜೆ ಇಡಬೇಕು. ಈ ಚಿತ್ರದ ಮೂಲಕ ಹೊಸಬರನ್ನು ಚಿತ್ರರಂಗಕ್ಕೆ ಪರಿಚಯ ಮಾಡಬೇಕು ಎಂಬುದು ನನ್ನ ಆಸೆ.
-ವಿಜಯ ಸಂಕೇಶ್ವರ

ನಾನು ಟ್ರಂಕ್ ಸಿನಿಮಾ ನಿರ್ದೇಶಿಸಿದ ಮೇಲೆ. ಮುಂದಿನ ಸಿನಿಮಾಕ್ಕಾಗಿ ಕಥೆ ಹುಡುಕುತ್ತಿದ್ದೆ. ಆಗ ಕನ್ನಡದಲ್ಲಿ ಬಯೋಪಿಕ್ ಸಿನಿಮಾಗಳನ್ನು ಯಾಕೆ ತೆರೆಗೆ ತರಬಾದು ಎಂದುಕೊಂಡೆ. ಅದಕ್ಕಾಗಿ ಸಾರ್ಧಕರನ್ನು ಹುಡುಕುವಾಗ ನನಗೆ ಸಿಕ್ಕಿದ್ದು ವಿಜಯ್ ಸಂಕೇಶ್ವರರು. ಅವರು ಸಾಗಿಬಂದ ಹಾದಿ ಸ್ಫೂರ್ತಿದಾಯಕ ವಾಗಿತ್ತು. ಹಾಗಾಗಿ ಅವರ ಜೀವನಾಗಾಥೆಯನ್ನು ತೆರೆಗೆ ತರಲು ಬಯಿಸಿದೆ. ಕಥೆ ಸಿದ್ಧವಾದ ಮೇಲೆ ಸಂಕೇಶ್ವರರಿಗೆ ತಿಳಿಸಿದೆ. ಅವರು ಮೆಚ್ಚಿದರು.
-ರಿಷಿಕಾ ನಿರ್ದೇಶಕಿ

ಪ್ರೊಡಕ್ಷನ್ ಹೌಸ್ ಸ್ಥಾಪಿಸಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ನಮ್ಮ ಪ್ರೊಡಕ್ಷನ್ ಹೌಸ್‌ನಲ್ಲಿಯೇ ವಿಜಯಾನಂದ ಚಿತ್ರ ಸಿದ್ಧವಾಗುತ್ತಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ನಿರ್ಮಾಣ ಸಂಸ್ಥೆಯ ಉದ್ದೇಶ.

-ಆನಂದ ಸಂಕೇಶ್ವರ

Leave a Reply

Your email address will not be published. Required fields are marked *