Thursday, 15th May 2025

ಮತ್ತೆ ಒಂದಾದ ಭಜರಂಗಿ ಜೋಡಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಿವಣ್ಣ, ಸೆಂಚೂರಿ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಮೂವತ್ತೈದು ವಸಂತಗಳನ್ನು ಪೂರೈಸಿರುವ ಶಿವಣ್ಣ ಅವರನ್ನು ಇತ್ತೀಚೆಗಷ್ಟೇ ಅಭಿಮಾನಿಗಳು ಅಭಿನಂದಿಸಿದ್ದರು. ಈ ವೇಳೆ ಶಿವಣ್ಣ ಅವರ 125ನೇ ಚಿತ್ರ ಯಾವುದಿರ ಬಹುದು, ಆ ಚಿತ್ರಕ್ಕೆ ಆಕ್ಷನ್‌ಕಟ್ ಹೇಳುವ ನಿರ್ದೇಶಕ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅಂತೂ ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ.

ಈಗಾಗಲೇ 124 ಚಿತ್ರಗಳಲ್ಲಿ ನಟಿಸಿರುವ ಶಿವಣ್ಣ, ಶಿವರಾತ್ರಿಯ ಶುಭದಿನದಂದೇ ಸಿಹಿಸುದ್ದಿ ನೀಡಿದ್ದು, ತಮ್ಮ 125ನೇ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದ್ಯ ತಮ್ಮ ಮುಂದಿನ ಚಿತ್ರದ ಪೋಸ್ಟರ್ ಹಾಗೂ ಟೈಟಲ್ ಅನ್ನು ಬಿಡುಗಡೆ ಮಾಡಿದ್ದಾರೆ. ಶಿವಣ್ಣ ಅವರ 125ನೇ ಚಿತ್ರಕ್ಕೆ ’ವೇದ’ ಎಂದು ಟೈಟಲ್ ಇಡಲಾಗಿದೆ. ‘ಬ್ರೂಟಲ್ 1960’ ಎನ್ನುವ ಟ್ಯಾಗ್ ಲೈನ್ ಕೂಡ ಇದೆ.

ಹಾಗಾಗಿ ಇದು ರೆಟ್ರೋ ಶೈಲಿಯ ಚಿತ್ರವೇ ಇರಬೇಕು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮೂಲಗಳ ಪ್ರಕಾರ ಇದು ಗ್ರಾಮೀಣ ಸೊಗಡಿನ ಹಿನ್ನಲೆಯಲ್ಲಿ ಮೂಡಿಬರುವ ಸಿನಿಮಾ ಎನ್ನಲಾಗುತ್ತಿದೆ. ’ವೇದ’ ಸಿನಿಮಾದ ಪೋಸ್ಟರ್ ಹೊಸ ನಿರೀಕ್ಷೆ ಮೂಡಿಸಿದೆ. ಆದರೆ ಯಾವುದೇ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಶಿವರಾಜ್ ಕುಮಾರ್ ವಯಸ್ಸಾದ ಗೆಟಪ್‌ಲ್ಲಿ ಕಾಣಿಸಿಕೊಂಡಿzರೆ. ಬೆಳ್ಳಗಾಗಿರುವ ಉದ್ದನೆಯ ಗಡ್ಡ ಮತ್ತು ಕೂದಲು ಬಿಟ್ಟಿರುವ ಶಿವಣ್ಣ, ಗಂಭೀರ ನೋಟ ಬೀರುತ್ತಿರುವ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ವಿಶೇಷ ಎಂದರೆ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ನಿರ್ದೇಶಕ ಎ.ಹರ್ಷ
ವಹಿಸಿಕೊಂಡಿದ್ದಾರೆ. ಈ ಮೂಲಕ ಹರ್ಷ ಮತ್ತು ಶಿವಣ್ಣ 4ನೇ ಬಾರಿ ಒಂದಾಗುತ್ತಿದ್ದಾರೆ. ‘ಭಜರಂಗಿ’,‘ವಜ್ರಕಾಯ’ ಮತ್ತು
‘ಭಜರಂಗಿ-2’ ಬಳಿಕ ಇದೀಗ ಮತ್ತೆ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ಹರ್ಷ ಮುಂದಾಗಿದ್ದಾರೆ. ಈ ಹಿಂದೆಯೇ ಹರ್ಷ ಶಿವಣ್ಣ ಅವರಿಗಾಗಿಯೇ ಮತ್ತೊಂದು ಸಿಸಿನಿಮಾ ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಕಥೆಯನ್ನು ಬರೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಈ ವಿಚಾರವನ್ನು ಶಿವರಾಜ್ ಕುಮಾರ್ ಆಗಲಿ, ಹರ್ಷ ಖಚಿತಪಡಿಸಿರಲಿಲ್ಲ. ಅಂತು ಈಗ ಮತ್ತೆ ಶಿವಣ್ಣ ಮತ್ತು ಹರ್ಷ ಒಂದಾಗಿದ್ದು, ಚಿತ್ರೀಕರಣಕ್ಕೆ ತಯಾರಿ ನಡೆಸಿದ್ದಾರೆ.

Leave a Reply

Your email address will not be published. Required fields are marked *