Saturday, 17th May 2025

ಅವಲಕ್ಕಿ ಪವಲಕ್ಕಿ ಟ್ರೇಲರ್‌ಗೆ ಭಾರೀ ಮೆಚ್ಚುಗೆ

ಪ್ರಣವ್ ಪಿಕ್ಚರ್ಸ್ ಲಾಂಛನದಲ್ಲಿ ರಂಜಿತಾ ಸುಬ್ರಹ್ಮಣ್ಯ ನಿರ್ಮಿಸಿರುವ ಅವಲಕ್ಕಿ ಪವಲಕ್ಕಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮಿಲಿಯನ್‌ಗಟ್ಟಲೆ ವೀಕ್ಷಣೆ ಕಂಡಿದೆ.

ಟ್ರೇಲರ್ ಗೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ. ಚಿತ್ರದ ಶಿರ್ಷಿಕೆ ಕೇಳಿದರೆ ಇದು ಮಕ್ಕಳ ಚಿತ್ರ ಅನ್ನಿಸಬಹುದು. ಈ ಚಿತ್ರದ ಕಥೆಯನ್ನು ಮಕ್ಕಳ ಮೇಲೆ ಹೆಣೆಯಲಾಗಿದ್ದರೂ, ಪೂರ್ಣವಾಗಿ ಮಕ್ಕಳ ಚಿತ್ರವಲ್ಲ. ವಿಭಿನ್ನ ಕಥೆಯಿಟ್ಟುಕೊಂಡು ಸಿನಿಮಾ ನಿರ್ದೇಶಿಸಿದ್ದೇನೆ. ಸಿನಿಮಾ ನೋಡಿದ ಮೇಲೆ ಅದು ತಿಳಿಯುತ್ತದೆ ಎನ್ನುತ್ತಾರೆ ನಿರ್ದೇಶಕ ದುರ್ಗಾಪ್ರಸಾದ್.

ನಾನು ಹೈದರಾಬಾದ್ ಮೂಲದವನು, ಇದು ನನ್ನ ಮೊದಲ ಚಿತ್ರ. ಈ ಚಿತ್ರಕ್ಕಾಗಿ ಇಷ್ಟಪಟ್ಟು ಕನ್ನಡ ಕಲಿತ್ತಿದ್ದೀನಿ. ಕನ್ನಡಿಗರು ನಮ್ಮ ಕೈಹಿಡಿಯುತ್ತಾರೆ ಎಂಬ ನಂಬಿಕೆಯಿದೆ. ನಮ್ಮ ಚಿತ್ರ ಈಗಾಗಲೇ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವ ಗಳಲ್ಲಿ ಪ್ರದರ್ಶನ ವಾಗಿದ್ದು, ಪ್ರಶಸ್ತಿಗಳನ್ನು ಪಡೆದಿದೆ ಎಂದು ದುರ್ಗಾಪ್ರಸಾದ್ ಹೇಳಿದರು.

ಚಿತ್ರದ ಕಥೆ ತುಂಬಾ ಹಿಡಿಸಿತು, ಹಾಗಾಗಿಯೆ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಹೆಬ್ರಿ ಕಾಡಿನಲ್ಲೇ ಇಪ್ಪತ್ತು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಏನು ಸಿಗದ ಜಾಗದಲ್ಲಿ ಯಾವುದಕ್ಕೂ ಕೊರತೆ ಬರದ ಹಾಗೆ ಶೂಟಿಂಗ್ ಪೂರ್ಣಗೊಳಿಸಿದ್ದೇವೆ. ರಂಗಭೂಮಿ ಕಲಾವಿದರ ದಂಡೆ ಚಿತ್ರದ ತಾರಾಬಳಗದಲ್ಲಿದೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವತುಂಬಿ ನಟಿಸಿದ್ದಾರೆ. ಹಾಗಾಗಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂದು ಸಂತಸ ಹಂಚಿಕೊಂಡರು ನಿರ್ಮಾಪಕಿ ರಂಜಿತಾ ಸುಬ್ರಹ್ಮಣ್ಯ.
ಇಂದಿರಾ ನಾಯರ್, ರಾಘವೇಂದ್ರ, ಸಿಂಚನಾ, ಪ್ರವೀಣ್, ಪ್ರಿಯಾ ಶಂಕರ್, ಉದಯಕುಮಾರ್, ನಾಗರಾಜ್ ಭಂಡಾರಿ, ವಿನೋದ್, ಅನೂಪ್ ಹಾಗೂ ಸುಖೇಶ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ. ಛಾಯಾಗ್ರಹಣ ನಿರೀಕ್ಷಿತ್, ಸಂಗೀತ ನಿರ್ದೇಶನ ಜುಬಿನ್ ಪಾಲ್ ಅವರದಾಗಿದೆ.

Leave a Reply

Your email address will not be published. Required fields are marked *