Thursday, 15th May 2025

ಅನಘಕ್ಕೆ ಉಪ್ಪಿ ಸಾಥ್

ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್‌ನಲ್ಲಿ ಡಿ.ಪಿ.ಮಂಜುಳಾ ನಾಯಕ್ ನಿರ್ಮಿಸಿರುವ ‘ಅನಘ’ ಚಿತ್ರ ಬಿಡುಗಡೆಗೆ
ಸಿದ್ಧವಾಗಿದೆ. ಸದ್ಯ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ರಿಯಲ್ ಸ್ಟಾರ್ ಉಪೇಂದ್ರ ಟ್ರೇಲರನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ರಾಜು ಎನ್.ಆರ್. ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದು, ಕಥೆ ಚಿತ್ರಕಥೆ, ಸಂಭಾಷಣೆಯನ್ನು ರಚಿಸಿದ್ಧಾರೆ.

ನಿರ್ಮಾಪಕರು ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದು, ಸಸ್ಪೆನ್ಸ್, ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ
‘ಅನಘ’ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಅಣಿಯಾಗಿದ್ದಾರೆ. ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್ ಮುಗಿಸಿರುವ ಚಿತ್ರತಂಡ
ಸಿನಿಮಾದ ರಿಲೀಸ್ ತಯಾರಿಯಲ್ಲಿದೆ. ರಂಗಭೂಮಿ ಪ್ರತಿಭೆಗಳಾದ ನಳೀನ್‌ಕುಮಾರ್ ಮತ್ತು ಪವನ್ ಪುತ್ರ ಈ ಚಿತ್ರದ ಮುಖ್ಯ
ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪೋಷಕ ಪಾತ್ರದಲ್ಲಿ ‘ಸಿಲ್ಲಿಲಲ್ಲಿ’ ಖ್ಯಾತಿಯ ಶ್ರೀನಿವಾಸ್‌ಗೌಡ, ಕಿರಣತೇಜ, ಕಿರಣ್‌ರಾಜ್, ಕರಣ್
ಆರ್ಯನ್, ದೀಪ, ರೋಹಿತ್, ಖುಷಿ, ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ ರಂಗಭೂಮಿ ಮತ್ತು ಹಾಸ್ಯ ಪಾತ್ರದಲ್ಲಿ
ಮೋಟುರವಿ, ಅಭಿ ಮತ್ತು ವಿರೇಶ ಕಾಣಿಸಿಕೊಂಡಿದ್ಧಾರೆ.

ಇನ್ನು ಈ ಚಿತ್ರಕ್ಕೆ ಬೆಂಗಳೂರು ಹಾಗೂ ದೇವರಾಯನ ದುರ್ಗದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶಂಕರ್ ಅವರ ಕ್ಯಾಮೆರಾ ಕೈಚಳಕ ಇದ್ದು, ಅವಿನಾಶ್ ಸಂಗೀತ ನೀಡಿದ್ಧಾರೆ, ಸಂಕಲನ ವೆಂಕಿ ಯುಡಿವಿ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ‘ಅನಘ’ ಸದ್ಯದಲ್ಲೇ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *