Wednesday, 14th May 2025

ತೆರೆಯಲ್ಲಿ ಅವಳಿ ಜವಳಿಯ ಕಥೆ

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ವಿಭಿನ್ನ ಶೈಲಿಯ ಚಿತ್ರಗಳು, ಬಗೆಬಗೆಯ ಶೀರ್ಷಿಕೆಯೊಂದಿಗೆ ನಿರ್ಮಾಣವಾಗುತ್ತಿವೆ.

ಅಂತಹ ಚಿತ್ರಗಳ ಸಾಲಿಗೆ ಸೇರಲಿರುವ ಚಿತ್ರ ‘ಬೈಒನ್ ಗೆಟ್ ಒನ್ ಫ್ರೀ’. ಹರೀಶ್ ಅನಿಲ್‌ಲಾಡ್ ನಿರ್ದೇಶನದಲ್ಲಿ  ಮೂಡಿ ಬರು ತ್ತಿರುವ ಈ ಚಿತ್ರದಲ್ಲಿ ಮಧು ಮಿಥುನ್ ಹಾಗೂ ಮನು ಮಿಲನ್ ಎಂಬ ಅವಳಿ ಸಹೋದರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಇವರೇ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಈ ಚಿತ್ರದ ಟೀಸರನ್ನು ಉಷಾ ಭಂಡಾರಿ
ಬಿಡುಗಡೆ ಮಾಡಿ ಶುಭ ಕೋರಿದರು. ಈ ಸಿನಿಮಾದ ಯೋಜನೆ ನಾಲ್ಕು ವರ್ಷದ್ದು, ನನ್ನ ಎಲ್ಲಾ ಯೋಚನೆಗಳಿಗೂ ನನ್ನ ತಮ್ಮ ಆಲೋಚನೆಯಾಗಿದ್ದ. ಬೈ ಟಿಕೆಟ್ 100% ಎಂಟರ್‌ಟೈನ್‌ಮೆಂಟ್ ಫ್ರೀ ಎಂದು ಹೇಳಿದರು ನಾಯಕ ನಟ ಮಧು.

ಚಿತ್ರದಲ್ಲಿ ಕಿಶೋರ್ ಅವರದ್ದು ಪೋಸ್ಟ್ ಮನ್ ಪಾತ್ರ. ಚಿತ್ರಕಥೆಯಲ್ಲಿ ಅವರ ಪಾತ್ರವೇ ಪ್ರಮುಖವಾಗಿದೆ. ಮೊದಲಾರ್ಧದಲ್ಲಿ ಮೈಸೂರಿನಲ್ಲಿ ಶುರುವಾಗುವ ಕಥೆ, ವಿಭಿನ್ನ ತಿರುವುಗಳನ್ನು ಪಡೆದು ಕೊಂಡು ನಂತರ ಕರಾವಳಿ ಪ್ರಕೃತಿಯ ಮಡಿಲಲ್ಲಿ ಮುಕ್ತಾಯಗೊಳ್ಳುತ್ತದೆ. ಕಮರ್ಷಿಯಲ್ ಎಲಿಮೆಂಟ್ ಹೊಂದಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ.

ಹುಡುಗಾಟದಲ್ಲಿ ಶುರುವಾಗುವ ಅವಳಿ ಜವಳಿಯ ಆಟಗಳು ದ್ವಿತೀಯಾರ್ಧದಲ್ಲಿ ಗಂಭೀರ ಸ್ವರೂಪ ಪಡೆಯುತ್ತಾ, ಒಂದು
ಹುಡುಕಾಟದಲ್ಲಿ ಕೊನೆಯಾಗುತ್ತದೆ ಎಂದು ಚಿತ್ರ ಒಂದು ಎಳೆಯ ಕಥೆಯನ್ನು ಬಿಚ್ಚಿಟ್ಟರು ನಾಯಕ ಮನು. ಅನಿರೀಕ್ಷಿತವಾಗಿ ಈ ತಂಡದಲ್ಲಿ ಸೇರಿಕೊಂಡೆ. ಸೀರಿಯಲ್‌ಗಳಲ್ಲಿ ನೆಗೆಟಿವ್ ಪಾತ್ರಗಳನ್ನೇ ನಿರ್ವಹಿಸಿದ್ದ ನನಗೆ ಈ ಚಿತ್ರದಲ್ಲಿ ನಟಿಸಲು
ಅವಕಾಶ ಬಂತು, ಒಳ್ಳೆಯ ಪಾತ್ರವೇ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು ನಟಿ ರೋಷನಿ ತೇಲ್ಕರ್.

ರಿಶಿತಾ ಮಲ್ನಾಡ್ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *