ಈ ಬಾಲಕಿಗೆ ವಯಸ್ಸು ಹದಿಮೂರು. ಅದಾಗಲೇ ಈಕೆ ನೂರಾರು ಕವನಗಳನ್ನು ಬರೆದಿದ್ದಾಳೆ! ನಾಲ್ಕು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ, ಓದುತ್ತಿದ್ದಾಳೆ. ತನ್ನ ವಿದ್ಯಾಭ್ಯಾಸದ ನಡುವೆಯೂ ಸಾಹಿತ್ಯ ಕೃಷಿ ನಡೆಸುತ್ತಿರುವ ಅಮನಾಳ ಆಸಕ್ತಿ ನಿಜಕ್ಕೂ ಪ್ರಶಂಸನೀಯ. ಲಾಕ್‌ಡೌನ್ ಸಮಯವು ಅವಳಲ್ಲಿ ಅಡಗಿದ್ದ ಸೃಜನಶೀಲತೆಯನ್ನು ಬೆಳಗಿದ್ದು ವಿಶೇಷ.
ಬಾಲಕೃಷ್ಣ ಎನ್.
ನೋಡಲು ಚಿಕ್ಕಬಾಲೆ. ಆದರೆ ಆಕೆಯಲ್ಲಿ ಅಡಗಿದೆ ಜ್ಞಾನದ ಸಂಕೋಲೆ. 13 ರ ವಯಸ್ಸಿನಲ್ಲೇ ಪುಸ್ತಕ ಪ್ರೇಮ, ಕವನಗಳ ಮೇಲಿನ ವ್ಯಾಮೋಹ ಅಮನಾ ಅವರಿಗೆ. ಆಟ ಆಡುವ ವಯಸ್ಸು, ಅಕ್ಷರಗಳ ನಂಟು, ಸಾಂಗತ್ಯ. ತರ ವಿಚಾರಗಳ ಕುರಿತು ಬಾಲ್ಯ ಸಹಜ
ಆಕರ್ಷಣೆಯಿದ್ದರೂ, ಕವನಗಳ ಮೇಲಿನ ಆಸಕ್ತಿ ಕಿಂಚಿಂತೂ ಕಡಿಮೆಯಾಗಿಲ್ಲ. ದೇಶ ಸುತ್ತು ಕೋಶ ಎಂಬ ಗಾದೆ ಮಾತಿಗೆ ಈಕೆ ಸ್ಫೂರ್ತಿದಾಯಕ.
ಬಿಷಫ್ ಕಾಟನ್ ಶಾಲೆಯಲ್ಲಿ ಓದುತ್ತಿರುವ ಅಮನಾ ಪದ್ಯ ಬರೆಯಲು ಶುರು ಮಾಡಿದ್ದು ಏ.4, 2020. ಈ ಒಂದು ವರ್ಷದಲ್ಲಿ 150ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ. ಜತೆಯಲ್ಲೇ ಸುಮಾರು 400ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹ ಮಾಡಿದ್ದಾರೆ. ಪುಸ್ತಕ ಓದುವುದೆಂದರೆ ಅಮನಾಳಿಗೆ ತುಂಬಾ ಪ್ರೀತಿ.
ಒಂದು ಪುಟ್ಟ ಭಾವುಕ ಮನಸು ಜಗತ್ತಿನ ಹತ್ತಲವು ವಿದ್ಯಮಾನಗಳನ್ನು ಎಂಥಾ ಚಿಂತನಾಲಹರಿಯಲ್ಲಿ ನೋಡುತ್ತೆ, ಅವಲೋಕಿ ಸುತ್ತದೆ, ಕೊನೆಗೆ ತನ್ನ ಚಿಕಿತ್ಸಕ ಮನಸ್ಥಿತಿ ಎಂಥಾ ಪರಿಹಾರ ಹೇಳಲು ಬಯಸುತ್ತೆ ಎನ್ನುವುದು ಪ್ರತಿಯೊಂದು ಕವನದಲ್ಲೂ ಸ್ಪಷ್ಟವಾಗಿ ಕಾಣುತ್ತದೆ. ಅಂತಿಮವಾಗಿ, ಎಲ್ಲರೂ ಮಗುವಿನಂತಾದರೆ ಪ್ರಪಂಚ ಎಷ್ಟು ಸುಂದರವಾಗಿರುತ್ತೆ ಎನ್ನುವ ಇಂಗಿತ ವನ್ನು ಸಾರುತ್ತದೆ.
ಲಾಕ್‌ಡೌನ್‌ನಲ್ಲಿ ಅರಳಿದ ಸೃಜನಶೀಲತೆ
ಕರೋನಾ ಲಾಕ್ ಡೌನ್ ಮಕ್ಕಳ ಸೃಜನಶೀಲತೆ-ಕ್ರಿಯಾಶೀಲತೆ ಹಾಳು ಮಾಡಿದ್ದೇ ಹೆಚ್ಚು. ಆದರೆ ಒಂದು ಕ್ಷಣವೂ ವ್ಯರ್ಥ ಮಾಡದ ಮಕ್ಕಳು ಸಾಧನೆಗೆ ಇದೇ ಸಮಯವನ್ನು ಮೆಟ್ಟಿಲುಗಳನ್ನಾಗಿಸಿಕೊಂಡಿದ್ದೂ ಉಂಟು. ಅಂಥ ಮಕ್ಕಳ ಪೈಕಿ ಅಮನಾ ಕೂಡ ಒಬ್ಬಳು. ಮನಸು ಹಾಗೂ ಯೋಚನಾಲಹರಿಯನ್ನು ಬೇರೆ ಚಟುವಟಿಕೆಗೆ ಹರಿಯಗೊಡದೆ ಅದನ್ನು ಸೃಜನಶೀಲ ಆಲೋಚನೆಗಳತ್ತ ಕೇಂದ್ರೀಕರಿಸಿದ್ದರ ಫಲವೇ ಕವನಗಳು. ಸೂಕ್ಷ್ಮ ಸಂವೇದನೆಯ ಮನಸಿಗೆ ಹೊಳೆದ ಹತ್ತಾರು ಯೋಚನೆ ಗಳನ್ನು ಕವನಗಳನ್ನಾಗಿಸಿದ ಅಮನಾ ಅವನ್ನೆಲ್ಲಾ ಕ್ರೋಢೀಕರಿಸಿದ್ದಾರೆ.
ಕವನಗಳ ಸಂಕಲನ
13 ರ ಹರೆಯದ ಈ ಬಾಲೆ 68 ಕವನಗಳಿರುವ ಭಾವಪೂರ್ಣ ಪದ್ಯಗಳ ‘ಪ್ರತಿಧ್ವನಿಗಳು’ ಎಂಬ ಗುಚ್ಛವೊಂದನ್ನು ಸಾಹಿತ್ಯ
ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ಈ ಕೃತಿಯಲ್ಲಿನ ಪದ್ಯಗಳನ್ನು ಕಂಡು ಚಂದ್ರಯಾನ 1, 2, ಮಂಗಳಯಾನ 1 ಯೋಜನಾ ನಿರ್ದೆಶಕ ಮೂನ್ ಮ್ಯಾನ್ ಆಫ್ ಇಂಡಿಯಾ ಎಂದೇ ಕರೆಸಿಕೊಂಡ ಡಾ.ಎಂ.ಅಣ್ಣಾದುರೈ ಬೆರಗುಗೊಂಡಿದ್ದಾರೆ.
ಆಕೆಯ ಈ ಮೊದಲ ಕೃತಿಗೆ ಇವರೇ ಮುನ್ನುಡಿ ಬರೆದು ‘ಭವಿಷ್ಯದ ಸಾಹಿತಿ’ ಎಂದು ಪ್ರಶಂಸಿಸಿದ್ದಾರೆ. ಈ ಪುಸ್ತಕ ಲೋಕಾ
ರ್ಪಣೆಯ ಸಮಾರಂಭದಲ್ಲಿ ಸಚಿವ ಸುರೇಶ್ ಕುಮಾರ್, ಕವಿ ದೊಡ್ಡರಂಗೇಗೌಡ, ಪತ್ರಕರ್ತ ಜೋಗಿ ಮೊದಲಾದ ಗೌರವಾ
ನ್ವಿತರು ಭಾಗವಹಿಸಿ, ಶುಭ ಹಾರೈಸಿದ್ದು ವಿಶೇಷ ಎನಿಸಿದೆ. ತನ್ನ ಮೊದಲ ಕೃತಿಯಲ್ಲಿರುವ ಕವನಗಳಿಗೆ ಕರೋನಾ ವಾರಿಯರ್ಸ್ ಕಾರ್ಯವೈಖರಿ, ಮನಶಾಂತಿ, ಕ್ಷಮೆ ಹೀಗೆ ವಸ್ತುಗಳಾಗಿವೆ.
ಮನಸಿನ ಭಾವನೆಗಳನ್ನು ಅಕ್ಷರಗಳಲ್ಲಿ ಕಟ್ಟಿ ಕೊಟ್ಟಿರುವ ಅಮನಾಗೆ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ. ಸುಧಾ ಮೂರ್ತಿ, ಶಶಿ ತರೂರು, ರಬೀಂದ್ರನಾಥ ಟ್ಯಾಗೋರ್ ಮುಂತಾದವರ ಕೃತಿಗಳು ಈಕೆಯ ಬಳಿ ಇವೆ. ಪುಸ್ತಕ ಓದಲು ಆಕೆಗೆ ಅದೆಷ್ಟು ಆಸಕ್ತಿ ಎಂದರೆ, ಓದಲೇ ಬೇಕೆಂದುಕೊಂಡ ಕೆಲವು ಪುಸ್ತಕಗಳನ್ನು ಪ್ರಕಟಣೆಯ ಮುನ್ನವೇ ಪ್ರೀ ಬುಕ್ಕಿಂಗ್ ಮಾಡಿ ತರಿಸಿಕೊಳ್ಳುವ ತರಾತುರಿ.
ಅಷ್ಟರಮಟ್ಟಿಗೆ ಓದುವ ಹುಚ್ಚು. ಪುಸ್ತಕಗಳ ಮಧ್ಯೆ ಇರಬೇಕೆಂಬ ಕನಸು. ಮುಂದೊಂದು ದಿನ ಪುಸ್ತಕಗಳ ಮನೆಯನ್ನೇ ಕಟ್ಟಬೇಕೆಂಬ ಹಂಬಲ ಅವರದ್ದು. ವಿದ್ಯಭ್ಯಾಸ ಪೂರ್ಣಗೊಂಡ ನಂತರ ಅಮನಾ ಅವರಿಗೆ ವಿಜ್ಞಾನಿಯಾಗುವ ಆಸೆ ಇದೆ. ಈಗ ಸದ್ಯಕ್ಕೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಸಹ ಕವನಗಳನ್ನು ಬರೆಯುತ್ತಿದ್ದಾರೆ. ಕನ್ನಡದ ಮೇಲಿನ ಅತೀವ ಪ್ರೀತಿಯಿಂದಾಗಿ ಹಲವಾರು ಕವನಗಳನ್ನು ಬರೆದಿದ್ದಾರೆ. ಸಾಮಾಜಿಕ ಹಾಗೂ ಸೇವಾಮನೋಭಾವವುಳ್ಳ ಕವನಗಳ ರಚನೆ ಇವರದ್ದಾಗಿದೆ. ಹೊರಗಿನ ಜಗತ್ತಿಗಿಂತ, ಪುಸ್ತಕ ಲೋಕವೇ ಇವರಿಗೆ ಜೀವಾಳ.
ಕರೋನಾ ಜಾಗೃತಿ ಸಂದೇಶ
ಕರೋನಾ ಕುರಿತು ಅಮನಾ ಚಿಂತನೆ ನಡೆಸಿದ್ದಾರೆ. ‘ಈ ವೈರಸ್ ಹರಡುವ ರೀತಿಯ ಬಗ್ಗೆ ಯಾರನ್ನೂ ದೂಷಿಸುವಂತಿಲ್ಲ. ಯಾಕೆಂದರೆ ನಾವು ಈಗ ಇನ್ನೇನು ಕತ್ತರಿಸಿಯೇ ಹೋಗಲಿದೆ ಎನ್ನುವ ದಾರದ ಮೇಲೆ ನಿಂತಿದ್ದೀವೆ. ಯಾವುದೇ ಚಲನೆ ಇಲ್ಲ, ಶಬ್ದವಿಲ್ಲ, ಅನಿವಾರ್ಯದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ದೇಶಕ್ಕೋಸ್ಕರ ಎಲ್ಲರೂ ಒಂದಾಗೋಣ, ಯಾವುದೇ ಸಂದರ್ಭ ಬಂದರೂ ಒಗ್ಗಟ್ಟಾಗಿರೋಣ, ಒಬ್ಬರಿಗೊಬ್ಬರು ಸಹಾಯ ಮಾಡೋಣ.
ನಮ್ಮ ಒಳಿತಿಗೋಸ್ಕರ ಸರಕಾರ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ. ನಿಮ್ಮ ನಿಮ್ಮ ಕೈಲಾದ ಸಹಾಯವನ್ನು ಮಾಡಿ. ದೇವರಲ್ಲಿ
ಬೇಡಿಕೊಳ್ಳಿ, ನೀವು ಬೇರೆಯವರಿಗೆ ಸಹಾಯ ಮಾಡಿದರೆ ಇನ್ನೊಬ್ಬರು ನಿಮಗೆ ಸಹಾಯ ಮಾಡುತ್ತಾರೆ. ಆಗ ಕರೋನಾವನ್ನು ನಾವೆಲ್ಲಾ ಸುಲಭವಾಗಿ ತಡೆಯಬಹುದು. ಎಲ್ಲರೂ ಮನೆಯಲ್ಲಿಯೇ ಇರಿ , ಸುರಕ್ಷಿತವಾಗಿ’ ಎಂಬ ವಿಚಾರವನ್ನು ಅಮನಾ ಎಲ್ಲರಿಗೂ ಹೇಳುತ್ತಿದ್ದಾರೆ.