Saturday, 10th May 2025

‌Roopa Gururaj Column: ಭಗವಂತನ ಪ್ರೇರಣೆ ಇದ್ದಲ್ಲಿ ಮಾತ್ರ ಕಾರ್ಯಪ್ರಾಪ್ತಿ!

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಅಶೋಕ ವನದಲ್ಲಿ ರಾವಣ… ಸೀತೆಯ ಮೇಲೆ ಕೋಪಗೊಂಡು, ಕತ್ತಿಯಿಂದ ಅವಳನ್ನು ಕೊಲ್ಲಲು ಮುಂದಾದಾಗ…
ಹನುಮಂತನಿಗೆ ನಾನು ಯಾರಿಂದಾದರೂ ಖಡ್ಗ ವನ್ನು ಸೆಳೆದು ತಂದು ರಾವಣಾಸುರನ ‘ಶಿರಚ್ಛೇದ ಮಾಡಬೇಕು’ ಎನ್ನುವಷ್ಟು ಕೋಪ ಉಕ್ಕಿ ಬಂತು. ಆದರೆ ಮರು ಕ್ಷಣದಲ್ಲಿ ಮಂಡೋದರಿ… ರಾವಣನ ಕೈ ಹಿಡಿದು ನಿಲ್ಲಿಸುವು ದನ್ನು ಕಂಡನು!

ಅವನಿಗೆ ಆಶ್ಚರ್ಯವಾಯಿತು. ಹನುಮಂತ ಯೋಚಿಸಿದ, ‘ನಾನಿಲ್ಲಿ ಇಲ್ಲದಿದ್ದರೆ… ಸೀತಮ್ಮನನ್ನು ಕಾಪಾಡುವವ ರಾರು ಎಂದುಕೊಂಡಿದ್ದೇ ಬಹುಶಃ ಇದು ನನ್ನ ಭ್ರಮೆ! ಭಗವಂತ ಸೀತಾ ಮಾತೆಯನ್ನು ರಕ್ಷಿಸುವ ಕೆಲಸವನ್ನು ರಾವಣನ ಹೆಂಡತಿಗೆ ವಹಿಸಿದನು’ ಆಗ ಹನುಮಂತನಿಗೆ ಅರ್ಥವಾಯಿತು, ‘ಯಾರಿಂದ ಯಾವ ಕೆಲಸ
ಆಗಬೇಕು… ಅವರ ಮೂಲಕ ಭಗವಂತ ಮಾಡುತ್ತಾನೆ’ ಎಂದು.

ಮುಂದೆ ಹೋಗುತ್ತಾ ತ್ರಿಜಟಾ – ‘ನೀನು ಲಂಕೆಗೆ ಬಂದು ಲಂಕೆಯನ್ನು ಸುಡುವ ಕನಸನ್ನು ಕಂಡೆ’ ಎಂದು ಹನುಮಂತನಿಗೆ ಹೇಳಿದಳು. ಆದರೆ ಇದು ಹನುಮಂತನಿಗೆ ಪರಮ ಆಶ್ಚರ್ಯವೆನಿಸಿತು. ಏಕೆಂದರೆ ಭಗವಂತನು ಸೀತೆಯನ್ನು ನೋಡಲು ಮಾತ್ರ ಹೇಳಿದ್ದನು ಮತ್ತು ಲಂಕೆಯನ್ನು ಸುಡುವಂತೆ ಹೇಳಿರಲಿಲ್ಲ. ‘ಲಂಕೆಯನ್ನು ಸುಡಲು ತನ್ನಿಂದ ಹೇಗೆ ಸಾಧ್ಯ..’ ಎಂದು ಯೋಚಿಸಿದನು. ಆದರೆ ಇದನ್ನು ತನ್ನ ಕನಸಿನಲ್ಲಿ ಕಂಡೆ ಎಂದು ತ್ರಿಜಟಾ ಹೇಳಿದ್ದಾಳೆ.

ಧರ್ಮ ಮೀಮಾಂಸೆಗೆ ಬಿದ್ದ ಹನುಮಂತ… ‘ಈಗ ಏನು ಮಾಡಬೇಕು? ಸರಿ, ಭಗವಂತನ ಇಚ್ಛೆಯಂತೆ ಆಗಲಿ…’ ಎಂದುಕೊಂಡನು. ರಾವಣನ ಸೈನಿಕರು ಹನುಮಂತನನ್ನು ಕೊಲ್ಲಲು ಓಡೋಡಿ ಬಂದಾಗ… ಹನುಮಂತ ಏನೂ ಮಾಡಲಿಲ್ಲ. ಅವನು ಹಾಗೆಯೇ ಸುಮ್ಮನೆ ನಿಂತನು. ಆದರೆ ಆ ವೇಳೆಗೆ ವಿಭೀಷಣ ಬಂದ, ಆ ಸೈನಿಕರಿಗೆ ದೂತ ನನ್ನು ಕೊಲ್ಲುವುದು ಸರಿಯಲ್ಲ ಎಂದನು.

ಆಗ ಹನುಮಂತನಿಗೆ ಭಗವಂತ ತನ್ನನ್ನು ರಕ್ಷಿಸುವ ಹೊಣೆಯನ್ನು ವಿಭೀಷಣನ ಮೇಲಿರಿಸಿzನೆಂದು ಅರಿವಾಯಿತು.
ಅಚ್ಚರಿಯ ಪರಾಕಾಷ್ಠೆ ಎಂದರೆ ವಿಭೀಷಣ ಹೇಳಿದಾಗ… ರಾವಣನು ಒಪ್ಪಿ ‘ಕೋತಿಯನ್ನು ಕೊಲ್ಲಬೇಡ. ಮಂಗಗಳು ತಮ್ಮ ಬಾಲವನ್ನು ಹೆಚ್ಚಾಗಿ ಪ್ರೀತಿಸುತ್ತವೆ. ಬಾಲಕ್ಕೆ ಬೆಂಕಿ ಹಚ್ಚಿರಿ’ ಎಂದನು. ಆಗ ತ್ರಿಜಟಾಳ ಕನಸು ನನಸಾಗಲಿದೆ
ಎಂದು ಹನುಮಂತನಿಗೆ ಹೆಚ್ಚು ಮನದಟ್ಟಾಯಿತು. ‘ಒಂದು ವೇಳೆ ಭಗವಂತ ನನಗೆ ಹೇಳಿದ್ದರೆ… ನಾನು ಎಣ್ಣೆ ಯನ್ನು ಎಲ್ಲಿ ತರಬೇಕು, ಬಟ್ಟೆ ಎಲ್ಲಿ ಪಡೆಯಬೇಕು, ಬೆಂಕಿಯನ್ನು ಎಲ್ಲಿಂದ ತರುವುದು, ಲಂಕೆಯನ್ನು ಸುಡುವುದು ಯಾವಾಗ! ಆಲೋಚನೆಗಳ ಕೋಲಾಹಲದಲ್ಲಿ ಮುಳುಗಿ ಹೋಗಿರುತ್ತಿದ್ದೆ.’

ವಿಸ್ಮಯಕಾರಿ ಸಂಗತಿಯೆಂದರೆ ಎಲ್ಲ ವ್ಯವಸ್ಥೆಗಳನ್ನು ರಾವಣನೇ ಮಾಡಿದನು. ರಾವಣಾಸುರನಿಂದ ಸಹ ತನ್ನ ಕೆಲಸ ಮಾಡಿಸಬಲ್ಲ ಅವನ ಒಡೆಯ ರಾಮನು ಲಂಕೆಯನ್ನು ನೋಡಿ ಬಾ ಎಂದು ಮಾತ್ರ ಅಪ್ಪಣೆ ಕೊಟ್ಟದ್ದು ಆಶ್ಚರ್ಯವೇ ಸರಿ! ಒಮ್ಮೆ ಯೋಚಿಸಿ ನೋಡಿ ಮಾಡಿದ ಚಿಕ್ಕ ಕೆಲಸವನ್ನೇ ನಾನು ಮಾಡಿದ್ದು ಎಂದು ನೂರು ಬಾರಿ ಹೇಳುತ್ತಾ ಜತಾಯಿಸುವ ನಾವು, ಎಲ್ಲ ಭಗವಂತನ ದಯೆ ಎನ್ನುವ ವಿನಯವನ್ನು ತೋರಿಸುವುದನ್ನೇ ಮರೆಯು ತ್ತೇವೆ.

ಯಾರಿಗಾದರೂ ಸಹಾಯ ಮಾಡಿ ಅವರು ಆಜೀವ ಪರ್ಯಂತ ನಮಗೆ ಋಣಿಯಾಗಿರಬೇಕು ಎಂದು ಬಯಸುತ್ತೇವೆ. ಪದೇ ಪದೇ ಅದನ್ನ ನೂರು ಜನರ ಮುಂದೆ ಹೇಳುತ್ತಾ ನಮ್ಮ ಹಿರಿತನವನ್ನು ಮೆರೆಯುತ್ತೇವೆ. ಆದರೆ ಭಗವಂತನ ಪ್ರೇರಣೆ ಇಲ್ಲದೆ ಹೋದರೆ ಒಂದು ಹುಲ್ಲು ಕಡ್ಡಿಯನ್ನು ನಾವು ಅಡಿಸಲು ಸಾಧ್ಯವಿಲ್ಲ. ಈ ಮಾತುಗಳು
ನಮಗೆ ನೆನಪಿzಗ ಮಾತ್ರ ನಾವು ವಿನೀತರಾಗಿ ಬದುಕುವುದನ್ನು ಕಲಿಯುತ್ತೇವೆ.

ಜಗತ್ತಿನಲ್ಲಿ ನಡೆಯುವ ಎಲ್ಲವೂ ದೇವರ ಪ್ರಕಾರ ಅವನ ಆಣತಿಯಂತೆ ಮಾತ್ರ ನಡೆಯುತ್ತದೆ. ನಾವೆಲ್ಲರು ಅದಕ್ಕೆ ತಕ್ಕಂತೆ ನಡೆಯುತ್ತೇವೆ. ನಾವೆಲ್ಲರೂ ಕೇವಲ ನಿಮಿತ್ತ ಮಾತ್ರ. ಆದ್ದರಿಂದ ‘ನಾನು ಮಾಡದಿದ್ದರೆ ಏನೂ ಆಗುವು ದಿಲ್ಲ, ನಾನೇ ಶ್ರೇಷ್ಠ’ ಎಂಬ ಭ್ರಮೆಗೆ ಖಂಡಿತ ನಾವು ಬೀಳುವುದು ಬೇಡ. ಎಲ್ಲವೂ ಭಗವಂತನ ಪ್ರೇರಣೆ ನಾವು ನಿಮಿತ್ತ ಮಾತ್ರ.

ಇದನ್ನೂ ಓದಿ: #VishwaSwaroopam

Leave a Reply

Your email address will not be published. Required fields are marked *