Saturday, 10th May 2025

Roopa Gururaj Column: ಅರ್ಜುನನ ಅಹಂಕಾರ ಅಳಿಸಿದ ಶ್ರೀಕೃಷ್ಣ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಮಹಾಭಾರತ ಯುದ್ಧದ ಸಮಾಪ್ತಿಯ ನಂತರ ಅರ್ಜುನನಿಗೆ ತಾನು ಶ್ರೀ ಕೃಷ್ಣನೇ ನನಗೆ ಸಾರಥಿಯಾಗಿದ್ದ ಆದ್ದರಿಂದ ತಾನು ಅವನ ಸರ್ವ ಶ್ರೇಷ್ಠ ಭಕ್ತನಾಗಿದ್ದೇನೆ ಎನಿಸತೊಡಗಿತು. ಆದರೆ ಅರ್ಜುನನಿಗೆ ಶ್ರೀಕೃಷ್ಣನ
ಧರ್ಮ ಸ್ಥಾಪನೆಗಾಗಿ ಅರ್ಜುನನನ್ನೇ ಒಂದು ದಾರಿಯಾಗಿ ಉಪಯೋಗಿಸಿದ್ದ ಎಂಬುದು ಅರಿವಾಗಿರಲಿಲ್ಲ. ಆಗ ಅರ್ಜುನನಿಗೆ ಪಾಠ ಕಲಿಸಲು ಕೃಷ್ಣ ನಿರ್ಧರಿಸಿದ್ದ. ಶ್ರೀಕೃಷ್ಣ ಮತ್ತು ಅರ್ಜುನ ಸಾಧುಗಳ ವೇಷ ಹಾಕಿ ಕಾಡಿನಲ್ಲಿ ಒಂದು ಸಿಂಹವನ್ನು ಹಿಡಿದು ವಿಷ್ಣುವಿನ ಪರಮಭಕ್ತನಾದ ರಾಜ ಮೋರಧ್ವಜನ ಪ್ರವೇಶ ದ್ವಾರಕ್ಕೆ ಬಂದು ನಿಲ್ಲುತ್ತಾರೆ.

ರಾಜ ಮೋರಧ್ವಜನು ಬಹಳ ಉದಾರ ಮತ್ತು ಅತಿಥಿ ಸತ್ಕಾರದವರಾಗಿದ್ದನು. ತನ್ನ ಬಾಗಿಲಿಗೆ ಯಾರೇ ಬಂದರೂ ಅವರಿನ್ನು ಬರಿ ಕೈಯಲ್ಲಿ ಎಂದು ಕಳಿಸುತ್ತಿರಲಿಲ್ಲ. ಇಬ್ಬರು ಸಾಧುಗಳು ಒಂದು ಸಿಂಹದ ಜೊತೆ ಬಾಗಿಲಿಗೆ ಬಂದಿದ್ದಾರೆ. ಇದನ್ನು ತಿಳಿದ ರಾಜನು ಬರಿಗಾಲಿನಿಂದ ಧಾವಿಸಿ ಬಂದ ಮತ್ತು ದೇವ ಕಳೆಯುಳ್ಳ ಇಬ್ಬರಿಗೂ ನಮಸ್ಕರಿಸಿ ಆತಿಥ್ಯವನ್ನು ಸ್ವೀಕರಿಸಲು ಕೇಳಿಕೊಂಡ. ‘- ನಿನ್ನ ಆಹ್ವಾನ ಸ್ವೀಕರಿಸಬೇಕೆಂದರೆ ನಮ್ಮ ಕೆಲವು ಶರತ್ತುಗಳಿವೆ. ಹಾಗಿದ್ದರೆ ಮಾತ್ರ ಆತಿಥ್ಯ ಸ್ವೀಕರಿಸುವೆವು ’ ಎಂದು ಶ್ರೀಕೃಷ್ಣನು ಹೇಳುತ್ತಾನೆ.

‘- ನೀವು ಹೇಳಿದ ಹಾಗೆ ಆಗಲಿ. ನಾನು ಅದಕ್ಕೆ ಸಿದ್ಧನಾಗಿದ್ದೇನೆ ’ ಹುಮ್ಮಸ್ಸಿನಿಂದ ಹೇಳಿದ ರಾಜ. ಆಗ ಶ್ರೀ ಕೃಷ್ಣನು ಹೇಳಿದ ‘-ನಾವು ಬ್ರಾಹ್ಮಣರು. ಏನು ಕೊಟ್ಟರೂ ಸ್ವೀಕರಿಸುವೆವು. ಆದರೆ ಸಿಂಹ ನರಭಕ್ಷಕ ಪ್ರಾಣಿ. ಒಂದು ವೇಳೆ ನೀನು ನಿನ್ನ ಮಗನನ್ನು ಕೊಂದು ಈ ಸಿಂಹಕ್ಕೆ ಉಣಿಸುವುದಾದರೆ ನಾವು ನಿನ್ನ ಆತಿಥ್ಯ ಸ್ವೀಕರಿಸುವೆವು.’ ಭಗವಂತನ ಮಾತನ್ನು ಕೇಳಿ ರಾಜಮೋರಧ್ವಜನು ಹೌಹಾರಿದ. ಆದರೂ ಕೂಡ ರಾಜನು ತನ್ನ ಅತಿಥಿ ಧರ್ಮವನ್ನು ಬಿಡಲಾರದವನಾಗಿದ್ದ. ಅವನು ಭಗವಂತನಿಗೆ ಹೇಳಿದ

‘- ಮಹಾತ್ಮರೆ..! ಒಂದು ಸಲ ನಾನು ನನ್ನ ಪತ್ನಿ ಜೊತೆ ಕೇಳಲು ಅವಕಾಶ ಮಾಡಿಕೊಡಿ.’ ಎಂದ ರಾಜ.

‘ಸರಿ’- ಎಂದು ಭಗವಂತ, ತನ್ನ ಕಳೆಗುಂದಿದ ಮುಖದೊಂದಿಗೆ ಅರಮನೆಯಲ್ಲಿ ಬಂದ ರಾಜನಿಗೆ ಆತನ ಪತ್ನಿಯು ಕಾರಣ ಕೇಳಿದಳು. ಅವನು ಎಲ್ಲ ವಿಷಯವನ್ನು ಹೇಳಿದಾಗ ರಾಣಿಯ ಕಣ್ಣುಗಳಿಂದ ಅಶ್ರುಧಾರೆ ಹರಿಯ ತೊಡಗಿತು. ಆಗವಳು -‘ನಿಮ್ಮ ಗೌರವ ಕಾಪಾಡಲು ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ನಿಮಗಾಗಿ ಇಂಥ ನೂರು ಮಕ್ಕಳನ್ನು ತ್ಯಾಗ ಮಾಡಬಲ್ಲೆ. ಅತಿಥಿಗಳನ್ನು ಆದರ ಸಹಿತ ಒಳಗಡೆ ಕರೆದುಕೊಂಡು ಬನ್ನಿ..!’ ಅರ್ಜುನನು ಶ್ರೀಕೃಷ್ಣನನ್ನು ಕೇಳಿದ – ‘- ಹೇ ಮಾಧವ..! ನೀನೇನು ಕೇಳಿಬಿಟ್ಟೆ..?’ ಹಾಗೆ ಕೃಷ್ಣ ಹೇಳಿದ -‘ಅರ್ಜುನ..! ನೀನು ಕೇವಲ ನೋಡುತ್ತಾ ಹೋಗು.’ ರಾಜನು ಅವರನ್ನು ಆದರದಿಂದ ಅರಮನೆಯ ಒಳಗೆ ಸ್ವಾಗತಿಸಿದ.

ಭೋಜನದ ಸಿದ್ಧತೆ ಮಾಡತೊಡಗಿದ. ಅವರಿಬ್ಬರಿಗೂ 36 ವ್ಯಂಜನಗಳ ಪದಾರ್ಥಗಳನ್ನು ಬಡಿಸಲಾಯಿತು.
ಆದರೆ ಅರ್ಜುನನ ಗಂಟಲಲ್ಲಿ ಒಂದು ತುತ್ತೂ ಇಳಿಯದಾಯಿತು.

ರಾಜನು ರಾಣಿಯ ಜೊತೆ ಹೋಗಿ ತನ್ನ ಪುತ್ರನನ್ನು ಸಿದ್ಧಗೊಳಿಸಿ ಕರೆತರುತ್ತಾನೆ. ಪುತ್ರನು ಮೂರು ವರ್ಷದವ ನಾಗಿದ್ದ. ಅವನ ಹೆಸರು ತಾಮರಧ್ವಜನನ್ನು ಎಂದಿತ್ತು. ಅವನು ಕೂಡ ನಗುನಗುತಾ ತನ್ನ ಪ್ರಾಣ ತ್ಯಜಿಸಿದ. ರಾಜ ರಾಣಿ ಇಬ್ಬರು ತಮ್ಮ ಪುತ್ರನ ಎರಡು ಭಾಗ ಮಾಡಿ ಸಿಂಹಕ್ಕೆ ಬಡಿಸಿದರು. ಕೃಷ್ಣ ಭೋಜನ ಸ್ವೀಕರಿಸಿದ. ಆದರೆ, ಪುತ್ರನ ಅರ್ಧ ಶರೀರ ನೋಡಿ ರಾಣಿ ತನ್ನ ಕಣ್ಣೀರು ತಡೆಯದಾದಳು.

ಕೃಷ್ಣ ಕ್ರೋಧಗೊಂಡ. ‘ಹುಡುಗನ ಅರ್ಧಶರೀರ ಹೇಗೆ ಉಳಿಯಿತು..?’ ಎಂದು ಭಗವಂತನು ಮುನಿಸಿಕೊಂಡು ಹೊರಟಾಗ ರಾಜ ದಂಪತಿಗಳು ಅವರನ್ನು ತಡೆಯುವ ವಿನಂತಿ ಮಾಡತೊಡಗಿದರು. ಆಗ ಅರ್ಜುನನಿಗೆ ಮನದಟ್ಟಾಯಿತು. ಭಗವಂತನು ಇದೆಲ್ಲ ತನ್ನ ಗರ್ವಭಂಗ ಮಾಡಲು ರಚಿಸಿದ ಮಾಯೆ. ಕೂಡಲೇ ಅವನು ಶ್ರೀಕೃಷ್ಣನ ಪಾದಗಳಿಗೆ ಬಿದ್ದು ವಿನಂತಿಸಿ ತೊಡಗಿದ. ‘ನನ್ನಿಂದ ತಪ್ಪಾಗಿದೆ ನಾನು ಅಕಾರಣವಾಗಿ ನಿನ್ನ ಸರ್ವಶ್ರೇಷ್ಠ ಭಕ್ತ ನಾನೆಂದು ಅಹಂಕಾರ ಪಟ್ಟೆ. ನಿನ್ನ ಭಕ್ತರು ನನಗಿಂತ ನೂರು ಪಟ್ಟು ಶ್ರೇಷ್ಠರು ಭೂ ಮಂಡಲದಲ್ಲಿದ್ದಾರೆ ದಯವಿಟ್ಟು ಈ ಮಾಯೆಯನ್ನು ಕೊನೆಗೊಳಿಸಿ ಆ ಮಗುವನ್ನು ಮರಳಿ ರಾಜ ದಂಪತಿಗಳಿಗೆ ಕೊಡು ತಂದೆ’ ಎಂದನು.

ಆಗ ಶ್ರೀಕೃಷ್ಣ ಆ ರಾಜ ದಂಪತಿಗಳಿಗೆ ಅವರ ಮಗುವನ್ನು ಬದುಕಿಸಿಕೊಟ್ಟು, ಆಶೀರ್ವಾದ ಮಾಡಿದನು.

ಇದನ್ನೂ ಓದಿ: #kamaroopa

Leave a Reply

Your email address will not be published. Required fields are marked *