Sunday, 18th May 2025

ತಮಿಳರು ಕೂಡ ವಿಶಾಲ್ ಹೃದಯದವರು

ತುಂಟರಗಾಳಿ

ಹರಿ ಪರಾಕ್

ಸಿನಿ ಗನ್ನಡ

ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಸ್ಯಾಂಡಲ್ ವುಡ್ ಕಂಗೆಟ್ಟು ಹೋಗಿದೆ. ಅವರ ಅಂತಿಮ ದರ್ಶನ ಕ್ಕಾಗಿ ತಮಿಳು ತೆಲುಗು ಚಿತ್ರರಂಗದಿಂದ ಅನೇಕ ಸೆಲೆಬ್ರಿಟಿಗಳು ಸ್ನೇಹಿತರು ಬೆಂಗಳೂರಿಗೆ ಬಂದಿದ್ದರು. ಆದರೆ ಇಲ್ಲಿನ ಕೆಲವು ಸೆಲೆಬ್ರಿಟಿಗಳೇ ಪುನೀತ್ ಅಂತಿಮ ದರ್ಶನ್ಕೆ ಬರಲಿಲ್ಲ ಅಂತ ಕೆಲವು ಪುನೀತ್ ಅಭಿಮಾನಿಗಳಲ್ಲಿ ಬೇಸರ ಮೂಡಿತ್ತು. ಅದಕ್ಕೆ ಆ ನಟರು, ನಾವು ಪುನೀತ್ ಅವರನ್ನು ಯಾವಾಗಲೂ ನಗು ಮೊಗದ ನೋಡಿದ್ದೆವು. ಆದರೆ ಈಗ ಹಾಗೆ ಮಲಗಿರುವ ಅವರನ್ನು ನೋಡಲು ಮನಸ್ಸಾಗಲಿಲ್ಲ, ಅದಕ್ಕೇ ಬರಲಿಲ್ಲ ಎಂದು ಕಾರಣ ಕೊಟ್ಟಿzರೆ. ಆದರೆ ಇಲ್ಲಿ ಒಂದು ಅಂಶ ಮುಖ್ಯವಾಗುತ್ತದೆ.

ಬೇರೆ ಯಾರಾದರೂ ಜನ ಸಾಮಾನ್ಯರು ಈ ರೀತಿ ಮಾತನಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ. ಆದರೆ ಪುನೀತ್ ಅವರ ಜತೆಗೇ ಇದ್ದುಕೊಂಡು, ಅವರ ಜತೆಗೇ ಬೆಳೆದ, ಪ್ರತಿದಿನ ಅವರೊಡನೆ ಒಡನಾಟ ಇಟ್ಟುಕೊಂಡ ಸೆಲೆಬ್ರಿಟಿಗಳು ಹೀಗೆ ಹೇಳಬಹುದೇ ಎಂಬ ಪ್ರಶ್ನೆ ಸಹಜ. ಯಾಕಂದ್ರೆ ಅವರು ಸೆಲೆಬ್ರಿಟಿಗಳು. ಅವರ ಪ್ರತಿಯೊಂದು ವರ್ತನೆಯನ್ನು ಜನ ಗಮನಿಸುತ್ತಾರೆ. ಸೆಲೆಬ್ರಿಟಿಗಳಿಗೆ ಅವರದ್ದೇ ಆದ ಜವಾಬ್ದಾರಿಗಳು ಇರುತ್ತವೆ. ಯಾಕಂದ್ರೆ ಅವರಿಗೆ ಈ ಸಮಾಜದಲ್ಲಿ ರಾಯಲ್ ಟ್ರೀಟ್ ಮೆಂಟ್ ಇರುತ್ತದೆ. ಜನ ಅವರನ್ನು ದೇವರು ಎನ್ನುವಂತೆ ಪ್ರೀತಿಸುತ್ತಾರೆ.

ಅದೇ ರೀತಿ ಅವರು ಕೆಲವು ತ್ಯಾಗಗಳನ್ನೂ ಮಾಡಬೇಕಾಗುತ್ತದೆ. ನಾನೂ ಮನುಷ್ಯನೇ ಅಲ್ವೇ, ನಾನು ರೋಡ್ ಸೈಡಲ್ಲಿ ಪಾನಿ ಪುರಿ ತಿನ್ನಬೇಕು ಎಂದು ಸೂಪರ್ ಸ್ಟಾರ್ ಒಬ್ಬ ಹಠ ಹಿಡಿದರೆ, ಅದರಿಂದ ಜನ ಸೇರಿ ಟ್ರಾಫಿಕ್ ಮತ್ತು ಸುರಕ್ಷತೆಯ ಸಮಸ್ಯೆ ಆಗುತ್ತದೆ. ಹಾಗಾಗಿ ಇಂಥ ಸೌಲಭ್ಯಗಳಿಂದ ಅವರು ಅನಿವಾರ್ಯವಾಗಿ ವಂಚಿತರಾಗಬೇಕಾಗುತ್ತದೆ. ಹಾಗೆಯೇ, ಇಂಥ ವಿಷಯ ಗಳಲ್ಲೂ ಜನಸಾಮಾನ್ಯರ ಹಾಗೆ ನೆಪ ಹೇಳಿ ಅವರು ಪುನೀತ್ ಅವರ ಅಂತಿಮ ದರ್ಶನಕ್ಕೆ ಹೋಗದೆ ತಪ್ಪಿಸಿಕೊಂಡಿದ್ದು ಅಷ್ಟು ಸಮಂಜಸವಲ್ಲ, ಅದು ತಪ್ಪು ಸಂದೇಶ ರವಾನಿಸಬಹುದು ಅನ್ನೋದು ಸಿನಿ ಪ್ರೇಮಿಗಳ ಮಾತು.

ಲೂಸ್ ಟಾಕ್
ನವೆಂಬರ್ ಕನ್ನಡಿಗ (ಕಾಲ್ಪನಿಕ ಸಂದರ್ಶನ)
ನಮಸ್ಕಾರ, ಸ್ವಾಭಿಮಾನಿ ಕನ್ನಡಿಗರಿಗೆ, 10 ಗಂಟೆ ಆದ್ರೂ ಇನ್ನೂ ಮಲಗೇ ಇದ್ದೀರಲ್ಲ, ರಾಜ್ಯೋತ್ಸವ ದ ಸಮಯ ಇದು.
ಹಲೋ, ಬಾಸ, ನವಂಬರ್ 1 ಹೋದ್ವಾರ, ರಾಜ್ಯೋತ್ಸವ ಮುಗಿದು ಒಂದ್ ವಾರ ಆಯ್ತು.
-ಹೋ, ಹಂಗಾದ್ರೆ ನೀವು ನವೆಂಬರ್ 1ಕ್ಕೆ ಮಾತ್ರ ಕನ್ನಡಿಗರಾ? ಸರಿ, ಬೆಂಗಳೂರಲ್ಲಿ ಕನ್ನಡ ಮಾತಾಡದೇ ಇದ್ರೆ, ಕನ್ನಡ ಹಾಡು ಹಾಕದಿದ್ರೆ, ಕನ್ನಡದಲ್ಲಿ ಬೋರ್ಡ್ ಹಾಕದಿದ್ರೆ ನಮ್ಮವರು ಹೊರಗಿನವರ ಮೇಲೆ ಕೈ ಮಾಡ್ತಾರಲ್ಲ ಇದು ಸರೀನಾ?

-ಮತ್ತೆ, ಬೋರ್ಡಿಗಿಲ್ಲದವರೆ ಇಲ್ಲಿಗೆ ಬಂದು, ಕನ್ನಡ ಬೋರ್ಡ್ ಹಾಕಲ್ಲ ಅಂದ್ರೆ, ಸುಮ್ನೆ ಇರ್ಬೇಕಾ. ಕುವೆಂಪು ಅವರೇ ಹೇಳಿದ್ದಾರಲ್ಲ, ಕನ್ನಡಕ್ಕಾಗಿ ಕೈ ಎತ್ತು ಅಂತ. ಇ ಅಂದ್ರೆ ನಾವ್ ತಲೆ ಎತ್ಕೊಂಡ್ ಓಡಾಡೋಕಾಗುತ್ತಾ. ಸಾರ್, ಕುವೆಂಪು ಅವರು ಹೇಳಿದ್ದು ಬೇರೆ ಅರ್ಥದಲ್ಲಿ ಹೋಗ್ಲಿ ಬಿಡಿ, ನೀವು ಕನ್ನಡ ರಕ್ಷಕರು ಅಲ್ವಾ? ಹಾಗಿದ್ರೆ ಒಂದಿಬ್ಬರು ಕನ್ನಡಕ್ಕಾಗಿ ಹೋರಾಡಿದ
ಮಹನೀಯರ ಹೆಸರು ಹೇಳಿ ನೋಡೋಣ?
-ರೂಪೇಶ್ ರಾಜಣ್ಣ, ಮತ್ತೆ…ಇನ್ನೊಂದಿಬ್ರು ಇದ್ದಾರೆ, ಇರಿ ಹೇಳ್ತೀನಿ ಅಯ್ಯೋ, ಸಾಕು ಬಿಡಿ, ಓರ್ವ ಡೋಸ್ ಆಗೋಯ್ತು. ಸರಿ, ಸಾಫ್ಟ್ ವೇರ್ ಕಂಪನಿಗಳಲ್ಲಿ ಕನ್ನಡವನ್ನ, ಕನ್ನಡಿಗರನ್ನ ನಿರ್ಲಕ್ಷ್ಯ ಮಾಡ್ತಿದಾರೆ. ನೀವು ಅಲ್ಲಿ ಕೆಲಸ ಮಾಡ್ತಾ ಇದ್ರೆ ಏನ್ ಮಾಡ್ತಿದ್ರಿ?
-ನಾನು ಅಂಥವರ ಕೈ ಕೆಳಗೆ ಕೆಲಸ ಮಾಡೋದೇ ಇಲ್ಲ. ಬೇಕಿದ್ರೆ ಸರಕಾರಿ ಕೆಲಸ ಸೇರಿ, ಟೇಬಲ್ ಕೆಳಗೆ ಕೈ ಇಟ್ಕೊಂಡ್ ಜೀವನ ಮಾಡ್ತೀನಿ.

ಓಹೋ, ಟೇಬಲ್ ಮ್ಯಾನರ್ಸ್ ಬಗ್ಗೆ ಮಾತಾಡ್ತಾ ಇದ್ದೀರಿ. ಆದ್ರೆ ಈ ಟೈಮ್ ಟೇಬಲ್ ಹಾಕ್ಕೊಂಡು, ನವೆಂಬರ್ ಬಂದಾಗ ಮಾತ್ರ ಕನ್ನಡ, ಕನ್ನಡ ಅನ್ನೋರಿಗೆ ನಿಮ್ಮ ಕಿವಿ ಮಾತು ?

-ಏನಿಲ್ಲ ಬಿಡ್ರೀ, ಅದರಲ್ಲಿ ತಪ್ಪೇನಿದೆ. ಅವರಿಗೆ ಒಳ್ಳೆ ಟೈಮ್ ಸೆನ್ಸ್ ಇದೆ ಅಂತ ಅಪ್ರಿಶಿಯೇಟ್ ಮಾಡ್ಬೇಕು.

ನೆಟ್ ಪಿಕ್ಸ್
ಖೇಮು ಜಟಕಾ ಗಾಡಿ ಓಡಿಸ್ತಾ ಜೀವನ ಮಾಡ್ತಾ ಇದ್ದ. ಒಂದಿನ ಅವನು ಹೈ ವೇ ನಲ್ಲಿ ಹೋಗುವಾಗ ಅವನ ಗಾಡಿಗೆ ಕಾರೊಂದು ಬಂದು ಗುದ್ದಿ, ಖೇಮು ಗಂಭೀರವಾಗಿ ಗಾಯಗೊಂಡ, ಅವನ ಜಟಕಾದ ಕುದುರೆ ಸತ್ತು ಹೋಯಿತು. ಖೇಮುಗೆ ಇದರಿಂದ ತುಂಬಾ ಲಾಸ್ ಆಯ್ತು. ಅದಕ್ಕೆ ಅವನು ಆಸ್ಪತ್ರೆ ಸೇರಿ, ಹುಷಾರಾದ ಮೇಲೆ ಕೋರ್ಟ್‌ಗೆ ಮೊರೆ ಹೋದ. ನನ್ನ ಗಾಡಿಗೆ ಗುದ್ದಿ ಈ ಕಾರಿನವನು ನಂಗೆ ಲಾಸ್ ಮಾಡಿದ್ದಾನೆ, ನನ್ನ ಆಸ್ಪತ್ರೆ ಬಿಲ್ ಕೂಡ ಸಿಕ್ಕಾಪಟ್ಟೆ ಆಗಿದೆ, ಹಾಗಾಗಿ ನಂಗೆ ಪರಿಹಾರ ಕೊಡಿಸಿ ಅಂತ. ಕೋರ್ಟ್ ನಲ್ಲಿ ವಿಚಾರಣೆ ಶುರುವಾಯ್ತು. ಕೇಸಿನಲ್ಲಿ ಇನ್ ವಾಲ್ವ್ ಆಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಕೋರ್ಟಿನಲ್ಲಿ ಬಂದು, ಖೇಮು ಸುಳ್ಳು ಹೇಳ್ತಾ ಇದ್ದಾನೆ. ಆಕ್ಸಿಟೆಂಟ್ ಆಗಿ ಬಿದ್ದಿದ್ದಾಗ ನಾನೇ ಅವನನ್ನು ಹೋಗಿ ಆ ಯೂ ಓಕೆ? ಅಂತ ಕೇಳಿದೆ. ಆಗ ಅವನು ಐ ಆಮ್ ಫ್ಯಾನ್ ಅಂತ ಹೇಳಿದ್ದ. ಈಗ ಮಾತ್ರ ಹಣಕ್ಕಾಗಿ ಅವನು ಸುಳ್ಳು ಹೇಳ್ತಾ ಇzನೆ ಅಂತ ವಾದಿಸಿದ. ಅದಕ್ಕೆ ಖೇಮು, ಅ ಸಾರ್ ನನ್ನ ಕುದುರೆ… ಅಂತ ಹೇಳೋಕೆ ಹೊರಟ ತಕ್ಷಣ ಆಪೋಸಿಟ್ ಲಾಯರ್ ಅಥವಾ ಇನ್ಸ್‌ಪಟಕ್ಟರ್ ಬಾಯ್
ಮುಚ್ಚು ಅಂತ ಬೈತಾ ಇದ್ರು.

ಹಾಗಾಗಿ ಖೇಮು ಎಷ್ಟೇ ಕಷ್ಟಪಟ್ಟರೂ ಹೇಳಬೇಕಾದ್ದನ್ನು ಹೇಳೋಕಾಗಲಿಲ್ಲ. ಆಗ ಅವನ ಪಾಡು ನೋಡಿದ ಜಡ್ಜ್ ಅವನೇನೋ ಹೇಳ್ತಾ ಇದ್ದಾನೆ ಹೇಳೋಕ್ ಬಿಡಿ ಅಂದ್ರು. ಆಗ ಖೇಮು ಹೇಳೋಕ್ ಶುರು ಮಾಡಿದ. ಮಹಾಸ್ವಾಮಿ, ನಾನು ಆಕ್ಸಿಡೆಂಟ್ ಆಗಿ ಬಿದ್ದಿದ್ದೆ. ನಾನು ಬದುಕ್ತೀನಿ ಅನ್ನೋ ನಂಬಿಕೆನೂ ನನಗಿರಲಿಲ್ಲ. ಆಗಲೋ ಈಗಲೋ ಸಾಯೋ ಥರ ಇದ್ದೆ. ಆ ಸಮಯದಲ್ಲಿ ಈ ಇನ್ಸ್ ಪೆಕ್ಟರ್ ಅಲ್ಲಿಗೆ ಬಂದ್ರು. ಮೊದಲು ನನ್ನ ಕುದುರೆ ಹತ್ರ ಹೋಗಿ, ಅದನ್ನ ಆರ್ ಯೂ ಓಕೆ? ಅಂತ ಮಾತಾಡಿಸಿದ್ರು.

ಅದು ಅಡಲಿಲ್ಲ. ಆದ್ರೆ ಅದು ಉಸಿರಾಡುತ್ತಿತ್ತು. ಮೈ ತುಂಬಾ ಗಾಯ ಆಗಿದ್ವು. ತುಂಬಾ ನರಳಾಡ್ತಾ ಇತ್ತು. ಅದನ್ನು ನೋಡಿದ ಈ ಇನ್ಸ್ ಪೆಕ್ಟರ್, ನೀನು ಬದುಕಿದ್ದು ಕಷ್ಟ ಪಡೋಕ್ಕಿಂತ ಸಾಯೋದೇ ಮೇಲು ಅಂತ ಅದಕ್ಕೆ ಗುಂಡು ಹಾರಿಸಿ ಕೊಂದರು. ಆ ನಂತರ ನನ್ನತ್ರ ಬಂದು ಆರ್ ಯೂ ಓಕೆ? ಅಂತ ಕೇಳಿದ್ರು. ನೀವೇ ಹೇಳಿ ಮಹಾಸ್ವಾಮಿ ಆ ಸಮಯದಲ್ಲಿ ನನಗೆ ಐ ಆಮ್ ಓಕೆ ಅಂತ ಹೇಳದೆ ಬೇರೆ ದಾರಿ ಇತ್ತಾ ?

ಲೈನ್ ಮ್ಯಾನ್

ಸೋತವರನ್ನು ಆಡಿಕೊಳ್ಳೋ ಮಂದಿ, ಆಡಿಕೊಂಡು ಸಾಕಾದಾಗ ಏನಂತಾರೆ?
-ಅಯ್ಯೋ, ಹೋಗ್ಲಿ ಬಿಡಿ, ದಿನಾ ಸೋಲೋರಿಗೆ ನಗೋರ್ಯಾರು
ಪುನೀತ್ ರಾಜ್ ಕುರ್ಮಾ ಅವರ ಸಾಮಾಜಿಕ ಸೇವೆಯ ಸೇವೆಯನ್ನ ನಾನು ಮುಂದುವರಿಸಿಕೊಂಡು ಹೋಗ್ತೀನಿ- ತಮಿಳು ನಟ ವಿಶಾಲ್
-ಕನ್ನಡಿಗರಷ್ಟೇ ಅಲ್ಲ, ತಮಿಳರೂ ಕೂಡ ವಿಶಾಲ ಹೃದಯದವರು
ಯಾರೋ ಕಿರಿಕಿರಿ ಮಾಡಿದ್ರು ಅಂತ ಆ ಸಿಟ್ಟನ್ನ ಊಟದ ಮೇಲೆ ತೋರಿಸುವವರಿಗೆ ಒಂದು ಮಾತು
– ಅವ್ರ್ಯಾರೋ ತಲೆ ತಿಂದ್ರು ಅಂತ, ನಾವು ತಿನ್ನೋದು ಬಿಡೋಕಾಗುತ್ತಾ.
ಬೆಟ್ಟದ ತುದಿಯಲ್ಲಿ ನಿಂತಿದ್ದ ಸೋಮು- ನನ್ನ ಜೀವನದಲ್ಲಿ ನಂಗೆ ಬೆನ್ನು ತಟ್ಟೋರೇ ಯಾರೂ ಇಲ್ಲ
-ಖೇಮು- ನಾನಿದ್ದೀನಿ. ಆದ್ರೆ ಈಗ ಬೆನ್ನು ತಟ್ಟಿದ್ರೆ ನಿಂಗೇ ಕಷ್ಟ, ಬ್ಯಾಡ ಬಿಡು.
ಒಂದರ ಹಿಂದೆ ಒಂದು ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್ ಹೌಸ್ 
-ಸೋಪ್ ಫ್ಯಾಕ್ಟರಿ
ಧಾರಾವಾಹಿಗಳ ಟಿಆರ್ ಪಿ

-‘ಸೀರಿಯಲ್’ ನಂಬರ್

ಹೊಸ ಕ್ರಿಕೆಟ್ ಕೋಚ್ ರಾಹುಲ್ ದ್ರಾವಿಡ್ ಹತ್ರ ಆಟಗಾರರು ಹೆಂಗ್ ಮಾತಾಡಬೇಕು ?
-ಹೆಂಗಾದ್ರೂ ಮಾತಾಡ್ಲಿ, ಆದ್ರೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂಗೆ ಮಾತ್ರ ಮಾತಾಡಬಾರದು.

ಇಂಡಿಯಾದವ್ರು ವರ್ಲ್ ಕಪ್ ಫೈನಲ್ ಗೆ ಹೋಗ್ತಾರಾ ?

-ಅದೃಷ್ಟ ಇದ್ರೆ ಖಂಡಿತಾ ಹೋಗ್ತಾರೆ. ಇಂದ್ರೆ, ಟಿಕೆಟ್ಸ್ ತಗೊಂಡಾದ್ರೂ ಹೋಗ್ತಾರೆ.

ಪ್ರಪಂಚದಲ್ಲಿ ನಿಜವಾದ ಸಿರಿವಂತ 
-ಐಫೋನ್ ಇಟ್ಟುಕೊಂಡವನು

ಶೋಕಿಗೋಸ್ಕರ ಐಫೋನ್ ತಗೊಂಡವನಿಗೆ ಒಂದು ಮಾತು 
-ಅಲ್ಪನಿಗೆ ಸಿರಿಸಿಕ್ರೆ, ಅರ್ಧರಾತ್ರಿಯಲ್ಲಿಚಾಟ್ ಮಾಡೋಣ ಬಾ ಅಂದ್ನಂತೆ.

Leave a Reply

Your email address will not be published. Required fields are marked *