Monday, 12th May 2025

Viral Video: ತನ್ನ ಹಿಂದೂ ಗೆಳತಿಯನ್ನು ಕೊಲ್ಲುವೆ ಎಂದ ಪುಟ್ಟ ಮುಸ್ಲಿಂ ಬಾಲಕಿ! ಆತಂಕಕಾರಿ ವಿಡಿಯೊ!

Viral Video

ಹಿಂದೂ-ಮುಸ್ಲಿಮರ ನಡುವಿನ ಜಗಳ ಇವತ್ತು ನಿನ್ನೆಯದಲ್ಲ. ಕ್ಷುಲಕ ಕಾರಣಕ್ಕೆ ಹಿಂದೂ ಮತ್ತು ಮುಸ್ಲಿಮರು ಆಗಾಗ ಕಿತ್ತಾಡುತ್ತಿರುತ್ತಾರೆ. ಆದರೆ ಇಂದಿನ ಕಾಲದಲ್ಲಿ ಪುಟ್ಟ ಮಕ್ಕಳು ಕೂಡ ಧರ್ಮದ ಹೆಸರಿನಲ್ಲಿ ಕಿತ್ತಾಡಲು ಶುರು ಮಾಡಿರುವುದು ಆಘಾತಕಾರಿಯಾಗಿದೆ. ಅವರ ಮುಗ್ಧ ಮನಸ್ಸಿನಲ್ಲಿ ಕೂಡ ಬೇರೆ ಧರ್ಮದ ಬಗ್ಗೆ ದ್ವೇಷದ ಭಾವನೆ ಮೂಡುತ್ತಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಬಾಲಕಿಯ ವಿಡಿಯೊವೊಂದು ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ. ಯಾಕೆಂದರೆ ಇದರಲ್ಲಿ ಆ ಪುಟ್ಟ ಬಾಲಕಿ ತನ್ನ ಹಿಂದೂ ಗೆಳೆತಿಯನ್ನು ಕೊಲ್ಲಲು ಬಯಸುವುದಾಗಿ ಹೇಳಿದ್ದಾಳೆ.

ಈ ವೈರಲ್ ವಿಡಿಯೊದಲ್ಲಿ, ಮುಸ್ಲಿಂ ಬಾಲಕಿ ತನ್ನ ಸ್ನೇಹಿತೆ “ಪಲ್ಲವಿ” ಎಂಬ ಬಾಲಕಿಯನ್ನು ಹಿಂದೂ ಎಂಬ ಕಾರಣಕ್ಕೆ ತಾನು ದೊಡ್ಡವಳಾದ ಮೇಲೆ ತನ್ನ ಮನೆಯಲ್ಲಿರುವ ಬಂದೂಕಿನಿಂದ ಗುಂಡಿಕ್ಕಿ ಆಕೆಯನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾಳೆ. ಹಾಗೆಯೇ ಶಿಕ್ಷಕಿ ಆಕೆ ಪೂಜಿಸುವ ದೇವರ ಬಗ್ಗೆ ಕೇಳಿದಾಗ, ಅಲ್ಲಾನನ್ನು ಪೂಜಿಸುತ್ತೇನೆ ಮತ್ತು ಅಲ್ಲಾನನ್ನು ಪೂಜಿಸದವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾಳೆ.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಕೆ ಧಾರ್ಮಿಕ ದ್ವೇಷ ಮತ್ತು ಮೂಲಭೂತವಾದದ ಬಗ್ಗೆ ಮಾತನಾಡಿದ್ದನು ಕೇಳಿ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಬಾಲಕಿಯ ಮಾತು ಜನರಲ್ಲಿ ಆತಂಕದ ಜತೆ ಬೇಸರವನ್ನೂ ಮೂಡಿಸಿದೆ.

ಇದನ್ನೂ ಓದಿ: ಹೈ ವೋಲ್ಟೇಜ್ ತಂತಿಯಲ್ಲಿ ಮರಿ ಟ್ರ್ಯಾಪ್‌; ತಾಯಿ ಕೋತಿ ಮಾಡಿದ್ದೇನು ಗೊತ್ತಾ? ಈ ವಿಡಿಯೋ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ!

ಈ ವಿಡಿಯೊ ಮಾಡಿದ ಸ್ಥಳ ತಿಳಿದು ಬಂದಿಲ್ಲ. ಆದರೆ ಈ ವಿಡಿಯೊ ಪೋಸ್ಟ್ ಆದಾಗಿನಿಂದ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಮುಗ್ಧ ಮಗುವಿನ ಮನಸ್ಸಿನಲ್ಲಿ ಇಂತಹ ಕ್ರೂರ ಮನಸ್ಥಿತಿಯನ್ನು ಹುಟ್ಟು ಹಾಕಿದವರು ಯಾರು ಎಂದು ಹಲವರು ಬಾಲಕಿಯ ಪೋಷಕರನ್ನು ಪ್ರಶ್ನಿಸುತ್ತಿದ್ದಾರೆ. ಈ ಘಟನೆಯನ್ನು ನೋಡಿದಾಗ ಧರ್ಮಗಳ ನಡುವಿನ ಸಮರ ಮುಗ್ಧ ಮನಸ್ಸುಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂಬುದನ್ನು ಈ ವಿಡಿಯೊ ತೋರಿಸುತ್ತಿದೆ. ಈಗಿನಿಂದಲೇ ಈ ದ್ವೇಷ ಭಾವನೆ ಮಕ್ಕಳಲ್ಲಿ ಮೂಡದಂತೆ ತಡೆಯಬೇಕಿದೆ, ಧರ್ಮ-ಧರ್ಮಗಳ ನಡುವೆ ಸಾಮರಸ್ಯ ಮೂಡಿಸಬೇಕಿದೆ.