Monday, 19th May 2025

ಅತ್ಯಂತ ಸಮೃದ್ಧವಾದ ಶ್ರೀಖಂಡ ಮಾಡಬೇಕೆ?

ಅಜಫ್ರಾನ್ ಅವರ ವೈಲ್ಡ್ ಫಾರೆಸ್ಟ್ ಆರ್ಗಾ್ಯನಿಕ್ ದಾಲ್ಚಿನ್ನಿ(ಸಿನ್ನಮೋನ್) ಜೇನಿನೊಂದಿಗೆ ಬಾಯಲ್ಲಿ ನೀರೂರಿಸುವ ಶ್ರೀಖಂಡ ಮಾಡುವ ವಿಧಾನ ಇಲ್ಲಿದೆ.

ಶ್ರೀಖಂಡ, ಸಮೃದ್ಧವಾದ ಮೊಸರಿನಿಂದ ತಯಾರಿಸಿ, ಮೇಲೆ ಏಲಕ್ಕಿ ಸಿಂಪಡಿಸಿ ಮಾಡಿದ ಭಾರತೀಯ ಕೆನೆಭರಿತ ಹಾಲಿನ ಸಿಹಿಖಾದ್ಯವಾಗಿದೆ. ಇದರ ಕೆನೆಸ್ವಾದ ಮತ್ತು ಮೃದುತನವನ್ನು ಎಲ್ಲರೂ ಸವಿದು ಆನಂದಿಸುತ್ತಾರೆ.

ನಿಮ್ಮ ಮೆನುವಿಗೆ ಬೇರೇನಾದರೂ ಸೇರಿಸಬೇಕೆಂಬ ಯೋಚನೆ ನಿಮಗಿದ್ದರೆ ಬಾದಾಮಿ ಮತ್ತು ಜೇನಿನ ಶ್ರೀಖಂಡದ ಕ್ಷಿಪ್ರ ಹಾಗೂ ಸ್ವಾದಿಷ್ಟ ಪಾಕವಿಧಾನ ಇಲ್ಲಿದೆ. ಈ ಶ್ರೀಖಂಡಕ್ಕೆ ಕೆಲವೇ ಕೆಲವು ವಸ್ತುಗಳು ಸಾಕು ಮತ್ತು ಅತಿಬೇಗನೇ ಇದನ್ನು ತಯಾರಿಸಬಹುದು. ಈ ಪಾಕವಿಧಾನದ ಮುಖ್ಯ ಸಾಮಗ್ರಿ ಎಂದರೆ ಆರೋಗ್ಯಕರ ವಾದ ಮತ್ತು ಸಂಪೂರ್ಣವಾಗಿ ಸಾವಯವವಾದ ಅಜಫ್ರಾನ್ ಅವರ ವೈಲ್ಡ್ ಫಾರೆಸ್ಟ್ ಆರ್ಗಾ್ಯನಿಕ್ ದಾಲ್ಚಿನ್ನಿ (ಸಿನ್ನಮೋನ್) ಜೇನುತುಪ್ಪ.

ನೀವಿನ್ನೂ ಅಜಫ್ರಾನ್ ಅವರ ವೈಲ್ಡ್ ಫಾರೆಸ್ಟ್ ಆರ್ಗಾ್ಯನಿಕ್ ದಾಲ್ಚಿನ್ನಿ(ಸಿನ್ನಮೋನ್) ಜೇನುತುಪ್ಪವನ್ನು ಸವಿದಿಲ್ಲದಿದ್ದರೆ, ನಿಮಗೆ ಜೇನಿನ ನಿಜವಾದ ಸ್ವಾದದ ಸಂಪತ್ತು ದೊರೆತಿಲ್ಲ ಎಂದೇ ಅರ್ಥ! ಇದು ಪ್ರಬಲವಾದ ಪರಿಪೂರ್ಣ ಸ್ವಾದ ಮತ್ತು ಮೃದುವಾದ ಟೆಕ್ಸ್ಚರ್ ಹೊಂದಿದೆ. ಈಅತ್ಯುತ್ಕöÈಷ್ಟ ಗುಣಮಟ್ಟದ ಒಂದು ಪೌಂಡ್ ಜೇನುತುಪ್ಪ ತಯಾರಿಸಲು ೭೫೮ ಜೇನುಹುಳುಗಳು 55000ಕ್ಕಿಂತ ಹೆಚ್ಚಿನ ಮೈಲಿಗಳವರೆಗೆ ಹಾರಾಡಿ ಸರಿಸುಮಾರು ೨ ದಶಲಕ್ಷ ಹೂಗಳಿಂದ ಮಕರಂದ ಹೀರುತ್ತವೆ. ಈ ವನಕುಸುಮದ ಅಮೃತ ಎಷ್ಟು ಸಮೃದ್ಧ ವಾಗಿರುತ್ತದೆ ಎಂದರೆ, ಇದು ನಿಜವಾಗಿಯೂ ಅತಿಸ್ವಾದಿಷ್ಟವಾದ ಜೇನುತುಪ್ಪವನ್ನು ತಯಾರಿಸುತ್ತದೆ. ಸಾವಯವ ರೀತಿಯಲ್ಲಿ ತಯಾರಿಸಲಾದ ಈ ಉತ್ಪನ್ನದ ಸುವಾಸನೆ, ಟೆಕ್ಸ್ಚರ್, ಸಿಂಥೆಟಿಕ್ ರೂಪದಲ್ಲಿ ತಯಾರಾದ ಬೇರೆ ಯಾವುದೇ ಜೇನುತುಪ್ಪಕ್ಕೂ ಸರಿಸಾಟಿಯಾಗುವುದಿಲ್ಲ. ಜೇನುತುಪ್ಪವು ಪರಿಸರಕ್ಕೆ ಒಳ್ಳೆಯದು ಮಾತ್ರವಲ್ಲದೆ ಉತ್ತಮ ದೇಹಾರೋಗ್ಯಕ್ಕಾಗಿ ಅವಶ್ಯವಾದ ಆರೋಗ್ಯಕರ ಸಕ್ಕರೆಗೆ ಪೂರಕವಾಗಿರುವ ಕಿಣ್ವಗಳು ಮತ್ತು ಪೋಷ ಕಾಂಶಗಳನ್ನು ಹೊಂದಿದೆ.

ಬಾದಾಮಿ ಮತ್ತು ಜೇನುತುಪ್ಪದ ಶ್ರೀಖಂಡ

ಬೇಕಾಗುವ ಸಾಮಗ್ರಿಗಳು:

● ೨ ಕಪ್ ಮೊಸರು/ಕೆನೆಮೊಸರು
● ಳಿ ಟೇಬಲ್ ಚಮಚ ಅಜಫ್ರಾನ್ ವೈಲ್ಡ್ ಫಾರೆಸ್ಟ್ ಆರ್ಗಾ್ಯನಿಕ್ ಜೇನುತುಪ್ಪ
● ೨ ಟೇಬಲ್ ಚಮಚ ಕೇಸರಿ ನೀರು
● ¼ ಟೀಚಮಚ ಏಲಕ್ಕಿ ಪುಡಿ
● ೧೦ ಪಿಸ್ತಾಚಿಯೋ (ಹೆಚ್ಚಿದ್ದು)

ಝಾಫ್ರನ್ ಶ್ರೀಖಂಡ ತಯಾರಿಸುವ ವಿಧಾನ:

ಒಂದು ದೊಡ್ಡ ಬಟ್ಟಲಿನ ಮೇಲೆ ಒಂದು ಜರಡಿ ಇಟ್ಟು ಅದರಲ್ಲಿ ಮಸ್ಲಿನ್ ಬಟ್ಟೆ ಹರಡಿ. ತಯಾರಿಸಿದ ೨ ಕಪ್ ಮೊಸರನ್ನು ಅದರಲ್ಲಿ ಹಾಕಿ. ಇಲ್ಲಿ ನೀವು ಅಂಗಡಿಯಿAದ ತಂದ ಮೊಸರನ್ನೂ ಉಪಯೋಗಿಸಬಹುದು. ಬಟ್ಟೆಯನ್ನು ಕಟ್ಟಿ ನೀರೆಲ್ಲಾ ಸಂಪೂರ್ಣವಾಗಿ ಇಂಗಿಹೋಗುವವರೆಗೆ ೨ ಘಂಟೆಯಕಾಲ ಬಿಡಿ. ಮೊಸರು ಹುಳಿಯಾಗುವುದನ್ನು ತಡೆಗಟ್ಟಲು ಅದನ್ನು ಫ್ರಿಡ್ಜ್ನಲ್ಲಿಡಿ. ಮೊಸರು ಗಟ್ಟಿಯಾಗಿ ಕೆನೆಭರಿತವಾಗುತ್ತದೆ. ಪರ್ಯಾಯ ವಾಗಿ ನೀವು ಅಂಗಡಿಯಿಂದ ಗ್ರೀಕ್ ಯೋಗರ್ಟ್ಅನ್ನು ಖರೀದಿಸಿ, ಈ ಎಲ್ಲಾ ಹೆಜ್ಜೆಗಳನ್ನೂ ಸ್ಕಿಪ್ ಮಾಡಬಹುದು.

ಸೋಸಿದ ಮೊಸರನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಳಿ ಕಪ್ ಪುಡಿ ಮಾಡಿದ ಸಕ್ಕರೆ, ೨ ಟೇಬಲ್ ಚಮಚ ಕೇಸರಿ ನೀರು ಮತ್ತು ¼ ಟೀಚಮಚ ಏಲಕ್ಕಿ ಪುಡಿ ಸೇರಿಸಿ. ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವವರೆಗೆ ಕಲಸುತ್ತಿರಿ. ಕೊನೆಯಲ್ಲಿ, ೧೦ ಹೆಚ್ಚಿದ ಪಿಸ್ತಾಚಿಯೋಗಳನ್ನು ಹಾಕಿ ಚಿಲ್ ಮಾಡಿದ ಶ್ರೀಖಂಡ್‌ಅನ್ನು ಸೇವಿಸಲು ಕೊಡಿ.