Sunday, 11th May 2025

ಎಸ್‌ಸಿ ಕುಟುಂಬದವರು ನಾಮಪತ್ರ ಸಲ್ಲಿಸದಂತೆ ತಡೆ

ಗ್ರಾಪಂ ಮುಂದೆ ಕುಳಿತು ನಾಮಪತ್ರ ಸಲ್ಲಿಕೆ ತಡೆದ ಗ್ರಾಮಸ್ಥರು

ವಿಶೇಷ ವರದಿ: ವೀರೇಶ ಕುರ್ತಕೋಟಿ ಹುನಗುಂದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಬಂದಿದೆ ಎನ್ನುವ ಕಾರಣಕ್ಕಾಗಿ ಆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಒಂದು ಕುಟುಂಬವಿದ್ದರೂ ಅದನ್ನು ಲೆಕ್ಕಿಸದೇ ಅಲ್ಲಿನ ಗ್ರಾಮಸ್ಥರು ಅವರಿಗೆ ನಾಮಪತ್ರ ಸಲ್ಲಿಕೆ ಅವಕಾಶ ನೀಡದೇ ಗ್ರಾಪಂ ಮುಂದೆ ಕುಳಿತು ನಾಮಪತ್ರ ಸಲ್ಲಿಕೆಯನ್ನು ಬಹಿಷ್ಕರಿಸಿದ ಘಟನೆ ತಾಲೂಕಿನ ಹಿರೇಬಾದವಾಡಗಿ ಗ್ರಾಪಂ ವ್ಯಾಪ್ತಿಯ ವೀರಪೂರ ಗ್ರಾಮ ದಲ್ಲಿ ನಡೆದಿದೆ.

ಹೌದು, ಹುನಗುಂದ ತಾಲೂಕಿನ ಹಿರೇಬಾದವಾಡಗಿ ಗ್ರಾಪಂ ವ್ಯಾಪ್ತಿಯ ವೀರಾಪೂರ ಗ್ರಾಮದಿಂದ ಎರಡು ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು. ದುರಾದೃಷ್ಟವಶಾತ್ ಆ ಎರಡು ಸ್ಥಾನಗಳ ಪೈಕಿ ಒಂದು ಪರಿಶಿಷ್ಟ ಜಾತಿ ಇನ್ನೊಂದು ಪರಿಶಿಷ್ಟ ಪಂಗಡಕ್ಕೆ ಮೀಸಲನ್ನು ಚುನಾವಣಾ ಆಯೋಗ ಪ್ರಕಟಿಸಿದ ಬೆನ್ನಲ್ಲೆ ಆ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ
ಒಂದು ಕುಟುಂಬವಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿದ ಯಾವುದೇ ಜಾತಿ ಜನಾಂಗದವರು ನಮ್ಮಲ್ಲಿ ಇಲ್ಲ.

ಆ ಕಾರಣಕ್ಕೆ ಈ ಎರಡು ಸ್ಥಾನಗಳ ಮೀಸಲನ್ನು ಬದಲಾಯಿಸುವಂತೆ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮತ್ತು ಉಪವಿಭಾಗಾಧಿ ಕಾರಿ ಹಾಗೂ ತಾಲೂಕಿನ ತಹಸೀಲ್ದಾರ ಅವರಿಗೆ ಲಿಖಿತ ಮತ್ತು ಮೌಖಿಕ ಮನವಿ ಮಾಡಿಕೊಂಡರು ಯಾವುದೇ ಮೀಸಲು ಬದಲಾಗಲಿಲ್ಲ.

ಇದರಿಂದ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಸಭೆ ಸೇರಿ ಈ ಬಾರಿ ನಮ್ಮ ಗ್ರಾಮಕ್ಕೆ ಮೀಸಲಾಗಿರುವ ಈ ಎರಡು ಸ್ಥಾನಗಳಿಗೆ ಯಾರನ್ನು ನಾಮಪತ್ರ ಸಲ್ಲಿಸಲು ಅವಕಾಶ ನೀಡಬಾರದು, ನಾಮಪತ್ರ ಸಲ್ಲಿಸಲು ಮುಂದಾದರೆ ಪಂಚಾಯಿತಿಯ ಮುಂದೆ ಕುಳಿತು ಅದನ್ನು ತಡೆದು ನಾಮಪತ್ರ ಬಹಿಷ್ಕರಿಸುವ ನಿರ್ಧಾರ ಮಾಡಿದ್ದರು.

ಯಾವೊಂದು ನಾಮಪತ್ರ ಸಲ್ಲಿಕೆಯಾಗದಂತೆ ನೋಡಿಕೊಂಡು ಅದರಲ್ಲಿ ಯಶಸ್ವಿ ಕಾಣಬಹುದು. ಆದರೆ ಇದೊಂದು ಸಂವಿ ಧಾನಾತ್ಮಕ ವಿರೋಧಿ ಚಟುವಟಿಕೆ ಯಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

ಗ್ರಾಪಂ ವ್ಯಾಪ್ತಿಯಲ್ಲಿರುವವರಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ: ಮೀಸಲು ಪ್ರಕಟವಾದ ಮೇಲೆ ಆ ಮೀಸಲಿಗೆ ಸೇರಿದ ಜನಾಂಗ ಅಲ್ಲಿ ಇಲ್ಲದಿದ್ದರೂ ಸಹ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆ ಜನಾಂಗವಿದ್ದರೇ ಅವರು ಆ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಇದ್ದರೂ ಸಹ ವೀರಾಪೂರ ಗ್ರಾಮದ ಜನರು ಅದಕ್ಕೆ ಸೊಪ್ಪು ಹಾಕದೇ ಇರುವುದು ದಲಿತ ಜನಾಂಗದವರಿಗೆ ಬೇಸರ ತಂದಿದೆ.

ಸ್ವಾತಂತ್ರಯ ಬಂದು 73 ವರ್ಷಗಳೇ ಕಳೆದರೂ ಸಹ ಪರಿಶಿಷ್ಟ ಜಾತಿ/ ಜನಾಂಗಕ್ಕೆ ಇನ್ನು ಸ್ವತಂತ್ರವಾಗಿ ರಾಜಕೀಯ ಅಧಿಕಾರ ಅನುಭವಿಸಲು ಬಿಡದಿರುವುದು ವಿಷಾದನೀಯ ಸಂಗತಿ. ತಾಲೂಕಿನ ವೀರಾಪೂರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು
ಪರಿಶಿಷ್ಟ ಪಂಗಡ ಮೀಸಲು ಬಂದಿದೆ. ಅವರಿಗೆ ರಾಜಕೀಯ ಅಧಿಕಾರ ನೀಡಬಾರದು ಎನ್ನುವ ಉದ್ದೇಶದಿಂದಲೇ ಅಲ್ಲಿನ ಗ್ರಾಮಸ್ಥರು ನಾಮಪತ್ರ ಸಲ್ಲಿಕೆ ಬಹಿಷ್ಕರಿಸಿದ್ದಾರೆ.
– ಪರಶುರಾಮ ಎಸ್ ರತ್ನಾಕರ, ದಲಿತ ಮುಖಂಡ, ಇದ್ದಲಗಿ

Leave a Reply

Your email address will not be published. Required fields are marked *