Tuesday, 13th May 2025

ಟಿ20 ಸರಣಿ: ನಾಳೆ ದಕ್ಷಿಣ ಆಫ್ರಿಕಾ ತಂಡ ದೆಹಲಿಗೆ

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ ಸದಸ್ಯರು ಜೂ.5ರಂದು ಸೇರಲಿ ದ್ದಾರೆ.

ಸರಣಿಯ ಮೊದಲ ಪಂದ್ಯ ಜೂ.9ರಂದು ದಿಲ್ಲಿಯಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ ತಂಡವು ನಾಳೆ ದಿಲ್ಲಿಗೆ ಆಗಮಿಸಲಿದೆ.

ಸರಣಿಯ ಇನ್ನುಳಿದ ಪಂದ್ಯಗಳು ಕಟಕ್‌ (ಜೂ. 12), ವಿಶಾಖಪಟ್ಟಣ (ಜೂ. 14), ರಾಜ್‌ ಕೋಟ್‌ (ಜೂ. 17) ಮತ್ತು ಬೆಂಗಳೂರಿ ನಲ್ಲಿ ಜೂ. 19ಂದು ನಡೆಯಲಿದೆ. ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯುವ 2022ರ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಸರಣಿಯಾಗಿದೆ.

ಸರಣಿ ವೇಳೆ ಪಂದ್ಯ ವೀಕ್ಷಿಸಲು ಪ್ರೇಕ್ಷಕರ ಸಂಖ್ಯೆಯಲ್ಲಿ ಯಾವುದೇ ನಿರ್ಬಂಧ ಇರುವು ದಿಲ್ಲ. ಆದರೆ ಆಟಗಾರರನ್ನು ಕೋವಿಡ್‌ ಗಾಗಿ ಆಗಾಗ್ಗೆ ಪರೀಕ್ಷೆ ನಡೆಸಲಾಗುತ್ತದೆ.

2 ತಿಂಗಳ ಸುದೀರ್ಘ‌ ಅವಧಿಯವರೆಗೆ ಐಪಿಎಲ್‌ ನಡೆದ ಕಾರಣ ಪ್ರಮುಖ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ. ಇದರಿಂದಾಗಿ ಭಾರತೀಯ ತಂಡವನ್ನು ಕೆ.ಎಲ್‌.ರಾಹುಲ್‌ ಮುನ್ನಡೆಸಲಿದ್ದಾರೆ. ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ ಜತೆ ನಾಯಕ ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡಲಾಗಿದೆ.