Monday, 19th May 2025

ಮುಂದಿನ ODI ಕ್ಯಾಪ್ಟನ್‌ M-ODI

ತುಂಟರಗಾಳಿ

ಹರಿ ಪರಾಕ್‌

ಲೂಸ್ ಟಾಕ್
ವಿರಾಟ್ ಕೊಹ್ಲಿ
ಏನ್ ಕೊಹ್ಲಿ ಅವ್ರೇ, ನಿಮ್ಮನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ರೋಹಿತ್ ಶರ್ಮಾನ ಕ್ಯಾಪ್ಟನ್ ಮಾಡಿಬಿಟ್ರಲ್ಲ?

ಅಯ್ಯೋ ದಡ್ಡ ಮುಂಡೇವು, ರೋಹಿತ್ ಶರ್ಮಾ ವೈಸ್ ಕ್ಯಾಪ್ಟನ್ ಆಗಿದ್ನಲ್ಲ, ಅದನ್ನ ನೋಡಿ ಅವನು ನನಗಿಂತ ವೈಸ್ ಆಗಿರೋ ಕ್ಯಾಪ್ಟನ್ ಅಂದ್ಕೊಂಡು, ಕ್ಯಾಪ್ಟನ್ ಮಾಡಿಬಿಟ್ಟಿದ್ದಾರೆ ಅಷ್ಟೇ..
ಓಹೋ, ಗುಡ್ ಪಾಯಿಂಟ್, ಆದ್ರೆ ನೀವು ಒಂದೂ ಐಸಿಸಿ ಟ್ರೋಫಿ ಗೆದ್ದಿಲ್ಲ ಅಂತ ನಿಮ್ಮನ್ನ ಕೆಳಗಿಳಿಸಿದ್ರಂತೆ ಅಂತಿದಾರಲ್ಲ ಎಲ್ಲರೂ? ಓ, ಇದು ಐಸಿಸಿ ವಿಷಯಾನಾ…ಐಸೀ.. ಆದ್ರೂ ನಿಮ್ಮನ್ನ ಕೆಳಗಿಳಿಸಿ ನಿಮಗಿಂತ ವಯಸ್ಸಾಗಿರೋ ರೋಹಿತ್ ಶರ್ಮಾನ ಕ್ಯಾಪ್ಟನ್ ಮಾಡಿದ್ದು ಸರಿನಾ?

ಏನ್ ಮಾಡೋದು, ಕ್ಯಾಪ್ಟನ್ಸಿ ‘ರೋ’ ವಿಷಯದಲ್ಲಿ, ಇ‘ರೋ’ ಆಟಗಾರರಲ್ಲಿ ಯಾರು ‘ಹಿತ’ವರು ನಿಮಗೆ ಅನ್ನೋ ಪ್ರಶ್ನೆ ಬಂದಾಗ, ರೋ-‘ಹಿತ’ ಅನ್ನೋ ಹೆಸರೇ ಉಳಿದಿದ್ದು ಅನ್ಸುತ್ತೆ. ಆದ್ರೂ, ಈಗ ಒನ್ ಡೇ ಟೀಮ್ ಕ್ಯಾಪ್ಟನ್ ಆಗಿರೋ ರೋಹಿತ್ ಶರ್ಮಾ ಸಕ್ಸಸ್ ಫುಲ್ ಆಗ್ತಾರೆ ಅಂತೀರಾ ?

ಕಂಟಿನ್ಯುಯಸ್ ಆಗಿ ಮ್ಯಾಚ್ ಗಳನ್ನ ಗೆದ್ರೆ ಸಕ್ಸಸ್ ಫುಲ್ ಆಗ್ತಾರೆ, ಇಂದ್ರೆ ‘ಏಕ್ ದಿನ್’ ಕಾ ಸುಲ್ತಾನ್ ಆಗ್ತಾರೆ ಅಷ್ಟೇ. ಆದ್ರೂ ಈ ಒಂಡೇ ಟೀಮ್‌ಗೆ ಕ್ಯಾಪ್ಟನ್ ಅಂತ ರೋಹಿತ್ ಅವರನ್ನ ಆಯ್ಕೆ ಮಾಡೋದಕ್ಕೆ ಇದ್ದ ಮಾನದಂಡ ಏನು? ಎಂಥ ಮಾನದಂಡನೂ ಇಲ್ಲ. ಹೆಸರಲ್ಲಿ ODI ಇದೆ ಅಂತ ನಾಳೆ M-ODI ನ
ಬೇಕಿದ್ರೂ ಕ್ಯಾಪ್ಟನ್ ಮಾಡ್ತಾರೆ.
(ಕಾಲ್ಪನಿಕ ಸಂದರ್ಶನ)

ಸಿನಿಗನ್ನಡ
ದೃಶ್ಯ ೨ ಸಿನಿಮಾ ಬಿಡುಗಡೆ ಆಗಿದೆ. ಹೀಗಂತ ಹೇಳಿದ್ರೆ ಜನ ಮೂರ್, ಮೂರ್ ಸಲ ಕನ್ ಫ್ಯೂಸ್ ಆಗುತ್ತಾರೆ ಅನ್ನೋದು ನಿಜವೇ. ಯಾಕಂದ್ರೆ ಮಲಯಾಳಂ ದೃಶ್ಯಂ ಚಿತ್ರದ ಕ್ರೇಜ್ ಅಂಥದ್ದು. ಮಲಯಾಳಂನಿಂದ ತೆಲುಗು, ಕನ್ನಡಕ್ಕೆ ಆ ಚಿತ್ರ ರಿಮೇಕ್ ಆಗಿತ್ತು. ಮೂಲ ಚಿತ್ರದಂತೆ ಯಶಸ್ಸನ್ನೂ ಕಂಡಿತ್ತು. ಹಾಗಾಗಿಯೇ ಈಗ ಅದರ ಮುಂದುವರಿದ ಭಾಗವನ್ನು ರೀಮೇಕ್ ಮಾಡುವ ಕೆಲಸ ಮುಂದುವರಿದಿದೆ. ಆದರೆ ದೃಶ್ಯ ಚಿತ್ರದ ಎರಡನೇ ಭಾಗ ಮಲಯಾಳಂ ಮತ್ತು ತೆಲುಗಿನಲ್ಲಿ ಬಿಡುಗಡೆ ಆದ ನಂತರ ಈಗ ಮೂರನೇ ಸರದಿಯಲ್ಲಿ ಕನ್ನಡದಲ್ಲೂ ರಿಮೇಕ್ ಆಗಿ ಬಿಡುಗಡೆ ಆಗಿದೆ.

ಹಾಗಾಗಿ ಇದು ದೃಶ್ಯ ೨ನಾ, ಇಲ್ಲ ದೃಶ್ಯ ೩ನಾ ಅಂತ ಎಲ್ಲ ಭಾಷೆಯ ಸಿನಿಮಾಗಳನ್ನೂ ನೋಡುವ ಕನ್ನಡ ಪ್ರೇಕ್ಷನಿಗೆ ಗೊಂದಲ ಶುರುವಾಗಿದೆ. ಚಿತ್ರದ ಕಥೆ ಸಿನಿ
ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಉಳಿಸಿಕೊಂಡಿದ್ದರಿಂದ ಮಲಯಾಳಂ ಮತ್ತು ತೆಲುಗಿನಂತೆ ಇಲ್ಲೂ ಕೂಡ ಎಲ್ಲರಿಗೂ ಇಷ್ಟವಾಗಿದೆ. ಹಾಗಾಗಿ ರವಿಚಂದ್ರನ್ ತಮ್ಮ ಕುಟುಂಬವನ್ನು ಕಾಪಾಡುವ ಕಥೆ ಇರೋ ಈ ಚಿತ್ರವನ್ನು ಕುಟುಂಬ ಸಮೇತವಾಗಿ ನೋಡುತ್ತ ಕನ್ನಡ ಪ್ರೇಕ್ಷಕ ಕೂಡ ಎಂಜಾಯ್ ಮಾಡ್ತಾ ಇದ್ದಾನೆ. ತೆಲುಗು ಮತ್ತು ಮಲಯಾಳಂನಲ್ಲಿ ಸಿನಿಮಾ ನೋಡದೇ ಇದ್ದವರು ಕನ್ನಡದ ದೃಶ್ಯ ೨ ಚಿತ್ರದ ಪ್ರತಿಯೊಂದು ದೃಶ್ಯವನ್ನೂ ಎಂಜಾಯ್ ಮಾಡುತ್ತಿದ್ದಾರೆ.

ಇನ್ನು ಎರಡು ಭಾಷೆಗಳಲ್ಲಿ ನೋಡಿದವರು, ಅಲ್ಲಿನ ದೃಶ್ಯಗಳನ್ನು ಇಲ್ಲಿನ ಸಿನಿಮಾದ ದೃಶ್ಯಗಳ ಜತೆ ಕಂಪೇರ್ ಮಾಡಿಕೊಂಡು, ಯಾವುದಾದರೂ ದೃಶ್ಯ
ಮಿಸ್ ಆಗಿದೆಯಾ ಇಲ್ಲ, ಹೆಚ್ಚುವರಿ ದೃಶ್ಯಗಳೇನಾದರೂ ಇವೆಯಾ ಅಂತ ಸಿನಿಮಾದ ಕಥೆಯಲ್ಲಿರುವಷ್ಟೇ ಕುತೂಹಲದಿಂದ ನೋಡುತ್ತಿದ್ದಾರೆ. ಅಂದ ಹಾಗೆ, ದೃಶ್ಯ೨ ಮಲಯಾಳಂ ಮತ್ತು ತೆಲುಗಿನಲ್ಲಿ ಕೇವಲ ಓಟಿಟಿಗಳಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಾತ್ರ ದೃಶ್ಯ೨, ಚಿತ್ರಮಂದಿರಗಳಲ್ಲಿ ತೆರೆಕಂಡಿದೆ ಅನ್ನೋದು ವಿಶೇಷ.

ನೆಟ್ ಪಿಕ್ಸ್ 
ಖೇಮು ಒಂದು ದೊಡ್ಡ ಮಿಶನ್ ಮೇಲೆ ಹಡಗಿನಲ್ಲಿ ಹೊರಟಿದ್ದ. ಅವನು ಒಂದು ದೊಡ್ಡ ಟೀಮ್‌ಗೆ ನಾಯಕನಾಗಿದ್ದ. ಆ ಹಡಗಿನಲ್ಲಿ ಒಂದು ಬೆಲೆ ಬಾಳುವ ವಸ್ತುವನ್ನು ಸುರಕ್ಷಿತವಾಗಿ ಸಾಗಿಸಬೇಕಿತ್ತು. ಆದರೆ ಅವರು ಹೋಗುತ್ತಿದ್ದ ಸಮುದ್ರದಲ್ಲಿ ದರೋಡೆಕೋರರ ಕಾಟ ತುಂಬಾ ಇತ್ತು. ಖೇಮುಗೆ ಈ ಮೊದಲು ದರೋಡೆಕೋರರನ್ನು ಎದುರಿಸಿ ಅನುಭವ ಇರಲಿಲ್ಲ.

ಆದರೂ ಆ ವಸ್ತುವನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಜವಾಬ್ದಾರಿಯನ್ನು ಖೇಮುಗೆ ವಹಿಸಲಾಗಿತ್ತು. ಸರಿ, ಆಗಿದ್ದಾಗ್ಲಿ ಅಂತ ಧೈರ್ಯ ಮಾಡಿ ಖೇಮು ತನ್ನ
ತಂಡದೊಂದಿಗೆ ಹೊರಟಿದ್ದ. ಸ್ವಲ್ಪ ಹೊತ್ತಾದ ಮೇಲೆ ದುರ್ಬೀನು ಹಾಕಿಕೊಂಡು ದೂರದಲ್ಲಿ ದರೋಡೆಕೋರರು ಬರ್ತಾ ಇ್ದಾರಾ ಅಂತ ಗಮನಿಸುತ್ತಿದ್ದ ಸಹಾಯಕ ಬಂದು ಖೇಮುಗೆ ಹೇಳಿದ, ‘ಸರ್, ದೂರದಲ್ಲಿ ಒಂದು ದರೋಡೆಕೋರರ ಟೀಮ್ ಗನ್ ತಗೊಂಡು ಬರ್ತಾ ಇದೆ ಏನ್ ಮಾಡೋಣ’ ಅಂದ. ಖೇಮುಗೆ ಸಿಕ್ಕಾಪಟ್ಟೆ ಭಯ ಶುರುವಾಯಿತು. ಆದ್ರೆ ಅದನ್ನ ತೋರಿಸಿಕೊಳ್ಳದೆ, ‘ನಮ್ಮ ಟೀಮ್‌ಗೆ ರೆಡಿ ಆಗಿರೋಕೆ ಹೇಳು, ಜತೆಗೆ ಒಳಗೆ ಹೋಗಿ ನನ್ನ ರೆಡ್ ಕಲರ್ ಶರ್ಟ್ ತಗೊಂಡ್ ಬಾ’ ಅಂದ.

ಖೇಮು ಭಯವನ್ನು ನೋ\ಡಿ ಒಳಗೊಳಗೇ ನಗುತ್ತಿದ್ದ ಸಹಾಯಕ, ‘ರೆಡ್ ಕಲರ್ ಶರ್ಟ್ ಯಾಕೆ ಸರ್’ ಅಂತ ಕೇಳಿದ್ದಕ್ಕೆ, ‘ನನಗೇನಾದರೂ ಗುಂಡು ಬಿದ್ದು ರಕ್ತ
ಬಂದ್ರೆ ಅದು ನಮ್ಮವರಿಗೆ ಕಾಣಬಾರದು. ಅವರು ನನ್ನನ್ನು ಆ ಸ್ಥಿತಿಯಲ್ಲಿ ನೋಡಿದ್ರೆ ನಮ್ಮ ನಾಯಕನಿಗೆ ಹಿಂಗಾಯ್ತಲ್ಲ ಅಂತ ಹೆದರಿಕೊಂಡುಬಿಡ್ತಾರೆ, ಅದಕ್ಕೆ’ ಅಂದ ಖೇಮು. ಸ್ವಲ್ಪ ಹೊತ್ತಿನಲ್ಲಿ ಆ ದರೋಡೆಕೋರರ ಟೀಮ್ ಬಂತು. ಖೇಮು ಕಡೆಯವರು ಅವರನ್ನು ಹೊಡೆದು ಉರುಳಿಸಿದರು. ಮತ್ತೆ, ಸ್ವಲ್ಪ ಹೊತ್ತಾದ ಮೇಲೆ ದುರ್ಬೀನು ಹಾಕಿಕೊಂಡು ನೋಡುತ್ತಿದ್ದ ಸಹಾಯಕ ಖೇಮು ಬಳಿ ಬಂದು ಕೇಳಿದ ಸರ್, ಈ ಸಲ ೫ ಹಡಗುಗಳಲ್ಲಿ ದರೋಡೆಕೋರರು ಬರ್ತಾ ಇzರೆ. ಯಾವುದಕ್ಕೂ ರೆಡ್ ಕಲರ್ ಶರ್ಟ್ ಜತೆಗೆ, ನಿಮ್ಮ ಹಳದಿ ಕಲರ್ ಪ್ಯಾಂಟೂ ತರ್ಲಾ?’

ಲೈನ್ ಮ್ಯಾನ್
ಗಾಡಿ ಓಡಿಸುವಾಗ ಅತಿ ಎಚ್ಚರಿಕೆಯಿಂದ ಇರೋರು ಏನು ಮಾಡ್ತಾರೆ?
– ರಸ್ತೆಯಲ್ಲಿ ಹಂಪ್ ಅಡ್ಡಬಂದ್ರೂ ಹಾರ್ನ್ ಮಾಡ್ತಾರೆ
ಸಿಕ್ ಸಿಕ್ಕಿದ್ದನ್ನೆ ಅಡ ಇಡೋಳು
– ಅಡವಿ
ಎಲ್ ಐ ಸಿಯನ್ನೂ ಮಾರಲು ಮುಂದಾದ ಸರಕಾರ
– ಬಿಜೆಪಿ ‘ಮಾರಿ’ ಕಣ್ಣು ಎಲ್‌ಐಸಿ ಮ್ಯಾಲೆ
ಗ್ಲೋಬಲ್ ವಾರ್ಮಿಂಗ್ ಹೆಚ್ಚಾದ್ರೆ?
– ಅದು ಪ್ರಕೃತಿ ಕೊಡ್ತಾ ಇರೋ ಗ್ಲೋಬಲ್ ವಾರ್ನಿಂಗ್
ಎಂಥಾ ಬರಗಾಲದಲ್ಲೂ, ಲೇಖಕರ ಬರವಣಿಗೆಯದ್ರೂ ಹೆಚ್ಚು ಮಾರಾಟ ಆಗೋ ವಸ್ತುಗಳು
– ಕಡ್ಲೆಪುರಿ, ಬಿಸಿ ಬಿಸಿ ಮಸಾಲೆ ದೋಸೆ
ಒಳ್ಳೆ ಡ್ರೈವಿಂಗ್ ಸ್ಕಿಲ್ ಇರೋ ಹುಡುಗಿ
– ಚಾಲಾಕಿ
ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡೋಕೆ ಇರಬೇಕಾದ ಅನುಮತಿ
-‘ಡೈವಿಂಗ್’ ಲೈಸೆನ್ಸ್
ಕಳೆದುಕೊಂಡ ಭೂಮಿ ಮತ್ತೆ ಸಿಕ್ಕರೆ ಅದು
-‘ಮರು’ಭೂಮಿ
ಬರೀ ಯಾಮಾರಿಸೋರೇ ಇರುವ ಊರು
-‘ಮರುಳು’ಗಾಡು
ದೇವರ ಹೆಸರಲ್ಲಿ ಮಾಡೋ ಮೋಸ
– ಮರುಳು ‘ಗಾಡು