Sunday, 11th May 2025

NSE ಮಾಜಿ ಮುಖ್ಯಸ್ಥೆ ʻಚಿತ್ರಾ ರಾಮಕೃಷ್ಣʼ ಗೆ ಐಟಿ ಬಿಸಿ

ನವದೆಹಲಿ: ಆಧ್ಯಾತ್ಮಿಕ ಗುರುಗಳೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಮುಖ್ಯಸ್ಥೆ ʻಚಿತ್ರಾ ರಾಮಕೃಷ್ಣʼ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಎನ್‌ಎಸ್‌ಇಯ ಆಂತರಿಕ ಗೌಪ್ಯ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗೆ ಹಂಚಿಕೊಳ್ಳುವ ಮೂಲಕ ಅಕ್ರಮ ಹಣಕಾಸು ಲಾಭ ಗಳಿಸಿದ ಆರೋಪದ ಮೇಲೆ ಚಿತ್ರಾ ರಾಮಕೃಷ್ಣ ಅವರನ್ನು ತನಿಖೆ ನಡೆಸ ಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಚಿತ್ರಾ ರಾಮಕೃಷ್ಣ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿಐಟಿ ಇಲಾಖೆ ಶೋಧ ನಡೆಸುತ್ತಿದೆ. ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಸಲಹೆಗಾರರಾಗಿ ನೇಮಕ ಮಾಡಲು ಸಂಬಂಧಿಸಿದ ಸೆಕ್ಯುರಿಟೀಸ್ ಒಪ್ಪಂದದ ನಿಯಮಗಳಲ್ಲಿನ ಉಲ್ಲಂಘನೆಗಳ ಕುರಿತು SEBI ಅವರ ಪಾತ್ರವನ್ನು ತನಿಖೆ ನಡೆಸುತ್ತಿದೆ.